ಚಾಂಪಿಯನ್ಸ್​ ಟ್ರೋಪಿ ನಂತರ ಕ್ಯಾಪ್ಟನ್​ ರೋಹಿತ್​ ಶರ್ಮಾ ನಿವೃತ್ತಿ; ಸ್ಫೋಟಕ ಸುಳಿವು

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಭಾರೀ ಮುಖಭಂಗ; 138 ರನ್​ಗೆ ಆಲೌಟ್​​; ಸರಣಿ ಗೆದ್ದು ಸೇಡು ತೀರಿಸಿಕೊಂಡ ಲಂಕಾ!
Advertisment
  • ರೋಹಿತ್​​​ ಮುಂದೆ ಚಾಂಪಿಯನ್ಸ್​ ಟ್ರೋಫಿ ಸವಾಲ್
  • ಕಳಪೆ ಆಟ ಆಡಿದ್ರೆ ಟೀಮ್​ ಇಂಡಿಯಾದಿಂದ ಕೊಕ್​​
  • ಹಿಟ್​ಮ್ಯಾನ್​ ರಿಟೈರ್​ ಆದ್ರೆ ಮುಂದಿನ ಕಥೆ ಏನು..?

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಕ್ಯಾಪ್ಟನ್​​ ರೋಹಿತ್ ಶರ್ಮಾ ಫೇಲ್​ ಆದ್ರು. ಇದಾದ ಬಳಿಕ ರಣಜಿ ಕ್ರಿಕೆಟ್​ನಲ್ಲೂ ಮುಂಬೈ ತಂಡದ ಪರ ಮಿಂಚಲಿಲ್ಲ. ಹಾಗಾಗಿ ರೋಹಿತ್​ ಶರ್ಮಾಗೆ ಏಕದಿನ ಫಾರ್ಮೆಟ್​ನ ಸವಾಲು ಎದುರಾಗಿದೆ. ಫಾರ್ಮ್​ ಸಮಸ್ಯೆಯಿಂದ ಬಳಲುತ್ತಿರೋ ವೈಟ್​ಬಾಲ್ ಲೆಜೆಂಡ್, ಚಾಂಪಿಯನ್ಸ್​ ಟ್ರೋಫಿಯಲ್ಲಿ ಪರ್ಫಾಮ್​ ಮಾಡ್ತಾರಾ ಅನ್ನೋ ಪ್ರಶ್ನೆ ಇದೆ. ವೈಟ್​ಬಾಲ್ ಕ್ರಿಕೆಟ್​​ನಲ್ಲಿ ಒನ್​ ಆಫ್ ದಿ ಬೆಸ್ಟ್​ ಓಪನರ್ ಆಗಿರುವ ರೋಹಿತ್ ಶರ್ಮಾ, ಟೀಕೆಗಳಿಗೆ ಆನ್ಸರ್​ ನೀಡೋಕೆ ರೆಡಿಯಾಗಿದ್ದಾರೆ.

ಟೆಸ್ಟ್​ನಲ್ಲಿ ರೋಹಿತ್ ಫೇಲಾದ್ರೂ ಏಕದಿನ ಫಾರ್ಮೆಟ್​ನಲ್ಲಿ ರೋಹಿತ್​ ಶರ್ಮಾ ಉತ್ತಮ ಪ್ರದರ್ಶನವನ್ನ ನೀಡಿದ್ದಾರೆ. 2023ರಿಂದ ಸಾಲಿಡ್​​ ಫಾರ್ಮ್​ನಲ್ಲಿ ಬ್ಯಾಟ್​ ಬೀಸಿರೋ ಹಿಟ್​ಮ್ಯಾನ್​ ಹೀಗಾಗಿ ಚಾಂಪಿಯನ್ಸ್​ ಟ್ರೋಪಿಯಲ್ಲಿ ಕಮಾಲ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ.

2023ರಿಂದ ಏಕದಿನ ಫಾರ್ಮೆಟ್​ನಲ್ಲಿ ರೋಹಿತ್

2023ರಿಂದ 27 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್, 1255 ರನ್ ಕಲೆ ಹಾಕಿದ್ದಾರೆ. ಬರೋಬ್ಬರಿ 52.29ರ ಬ್ಯಾಟಿಂಗ್ ಅವರೇಜ್​ನಲ್ಲಿ ರನ್ ಗಳಿಸಿರುವ ರೋಹಿತ್, 2 ಶತಕ ದಾಖಲಿಸಿದ್ದಾರೆ. ಈ ಫಾರ್ಮ್​ ಮುಂದುವರೆಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ರನ್ ಗಳಿಸುವ ಉತ್ಸಾಹದಲ್ಲಿ ರೋಹಿತ್ ಇದ್ದಾರೆ.

publive-image

ಏಕದಿನ ಫಾರ್ಮೆಟ್​​ನಲ್ಲಿ ಫೇಲಾದ್ರೆ ನಿವೃತ್ತಿ?

ವೈಟ್​ ಬಾಲ್ ಫಾರ್ಮೆಟ್​ನಲ್ಲಿ ರೋಹಿತ್ ಪರಾಕ್ರಮಿ ಅನ್ನೋದ್ರಲ್ಲಿ ಡೌಟಿಲ್ಲ. ಕಳೆದ ಲಂಕಾ ಸಿರೀಸ್​ನಲ್ಲಿ ರೋಹಿತ್, ಹೇಳಿಕೊಳ್ಳುವ ಆಟವಾಡಿಲ್ಲ. ಸದ್ಯ ಟೆಸ್ಟ್​ನಲ್ಲೂ ರನ್ ಗಳಿಸಿಲ್ಲ. ಮುಂದೆಯೂ ಇದೇ ಬ್ಯಾಡ್​​ ಫಾರ್ಮ್​ ಮುಂದುವರಿಸಿದ್ರೆ, ಟೀಮ್ ಮ್ಯಾನೇಜ್​​​ಮೆಂಟ್ ರೋಹಿತ್​ ಭವಿಷ್ಯದ ಬಗ್ಗೆ ಟಫ್ ಕಾಲ್ ತೆಗೆದುಕೊಳ್ಳುವುದರಲ್ಲಿ ಡೌಟೇ ಇಲ್ಲ. ಚಾಂಪಿಯನ್ಸ್​ ಟ್ರೋಫಿಯಲ್ಲಿ ಮಿಂಚದಿದ್ರೆ ರೋಹಿತ್​ ಕರಿಯರ್​ ಫುಲ್​ ಸ್ಟಾಫ್​ ಬೀಳೋ ಸಾಧ್ಯತೆ ದಟ್ಟವಾಗಿದೆ. ಇವರು ಕ್ರಿಕೆಟ್​ನಿಂದಲೇ ನಿವೃತ್ತಿ ಆಗಬಹುದು.

ಇದನ್ನೂ ಓದಿ:ಚಾಂಪಿಯನ್ಸ್​ ಟ್ರೋಫಿ: ಟೀಮ್​ ಇಂಡಿಯಾಗೆ ಬಿಗ್​ ಶಾಕ್​​ ಕೊಟ್ಟ ಸ್ಟಾರ್​​ ವೇಗಿ ಬುಮ್ರಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment