ತಂಡಕ್ಕೆ ಬಿಗ್ ಶಾಕ್.. ಕೈಕೊಟ್ಟ ರೋಹಿತ್, ಅಯ್ಯರ್, ಯಶಸ್ವಿ ಜೈಸ್ವಾಲ್..!

author-image
Ganesh
Updated On
ತಂಡಕ್ಕೆ ಬಿಗ್ ಶಾಕ್.. ಕೈಕೊಟ್ಟ ರೋಹಿತ್, ಅಯ್ಯರ್, ಯಶಸ್ವಿ ಜೈಸ್ವಾಲ್..!
Advertisment
  • ಮೂವರು ದಿಗ್ಗಜರು ಮುಂದಿನ ಪಂದ್ಯಗಳಲ್ಲಿ ಆಡಲ್ಲ
  • ಚಾಂಪಿಯನ್ಸ್ ಟ್ರೋಫಿ ಮೇಲೆ ಗಮನಹರಿಸಲು ನಿರ್ಧಾರ
  • ಕಳೆದ ಪಂದ್ಯದಲ್ಲಿ ಮುಂಬೈಗೆ 5 ವಿಕೆಟ್​ಗಳ ಭರ್ಜರಿ ಗೆಲುವು

ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್​ ಮುಂಬೈ ತಂಡಕ್ಕೆ ಕೈಕೊಟ್ಟಿದ್ದಾರೆ. ಮೆಘಾಲಯದ ವಿರುದ್ಧ ನಡೆಯುವ ರಣಜಿ ಟ್ರೋಫಿ ಪಂದ್ಯದಲ್ಲಿ ಆಡುವುದಿಲ್ಲ. ಫೆಬ್ರವರಿಯಲ್ಲಿ ಚಾಂಪಿಯನ್ಸ್​ ಟ್ರೋಫಿ ಶುರುವಾಗಲಿದೆ. ಅದರ ತಯಾರಿ ಹಿನ್ನೆಲೆಯಲ್ಲಿ ಈ ಮೂವರು ಸ್ಟಾರ್​ಗಳು ಆಡುವುದಿಲ್ಲ.

ಇದನ್ನೂ ಓದಿ: ಆರ್​​ಸಿಬಿಗೆ ಬಿಗ್​ ಶಾಕ್​​; ಐಪಿಎಲ್​ ಶುರುವಾಗೋ ಮುನ್ನವೇ ಕೈ ಕೊಟ್ಟ ಮೂವರು ಸ್ಟಾರ್​ ಆಟಗಾರರು

ಈ ಮೂವರು ಸ್ಟಾರ್​​ಗಳು ಶರದ್ ಪವಾರ್ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಜಮ್ಮು-ಕಾಶ್ಮೀರದ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ತಂಡ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯಗಳಿಗೆ ರೋಹಿತ್, ಅಯ್ಯರ್ ಹಾಗೂ ಜೈಸ್ವಾಲ್ ಆಡದಿರೋರು ತಂಡಕ್ಕೆ ಭಾರೀ ಹೊಡೆತ ಬೀಳಲಿದೆ. ಕಳೆದ ಪಂದ್ಯದಲ್ಲಿ ಶಾರ್ದುಲ್ ಠಾಕೂರ್ ಅವರು ಅದ್ಭುತ ಆಟವಾಡಿದರು.
ಎರಡು ಇನ್ನಿಂಗ್ಸ್​ನಲ್ಲಿ 51 ಹಾಗೂ 119 ರನ್​ಗಳಿಸಿ ಗಮನ ಸೆಳೆದಿದ್ದರು. ಪರಿಣಾಮ ಜಮ್ಮು ಕಾಶ್ಮೀರ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್​ ಸುಲಭವಾಗಿ ಗೆಲುವು ದಾಖಲಿಸಿತ್ತು. ಮುಂಬೈ ತಂಡವನ್ನು ಅಜಿಂಕ್ಯ ರಹಾನೆ ಅವರು ಮುನ್ನಡೆಸುತ್ತಿದ್ದಾರೆ. ಮುಂದಿನ ಪಂದ್ಯವು ಮೆಘಾಲಯದ ವಿರುದ್ಧ ನಡೆಯಲಿದ್ದು, ಗೆದ್ದರೆ ಸೆಮೀಸ್​ಗೆ ತಲುಪಲಿದೆ.

ರೋಹಿತ್, ಜೈಸ್ವಾಲ್ ಮತ್ತು ಅಯ್ಯರ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗುತ್ತಿದ್ದಾರೆ. ಫೆಬ್ರವರಿ 6, 9 ಮತ್ತು 12 ರಂದು ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ನಡೆಯಲಿದೆ. ನಂತರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ನಡೆಯಲಿದೆ. 23 ವರ್ಷದ ಜೈಸ್ವಾಲ್, ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಆರ್​​ಸಿಬಿ ತೊರೆದ ಬೆನ್ನಲ್ಲೇ ಮ್ಯಾಕ್ಸಿಗೆ ಖುಲಾಯಿಸಿದ ಅದೃಷ್ಟ; ಪಂಜಾಬ್​​ ತಂಡಕ್ಕೆ ಸ್ಟಾರ್​ ಆಲ್​ರೌಂಡರ್​ ಕ್ಯಾಪ್ಟನ್​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment