/newsfirstlive-kannada/media/post_attachments/wp-content/uploads/2025/02/ROHIT_SHARMA-10.jpg)
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಾಗಿದೆ. ಈ ಗೆಲುವಿನೊಂದಿಗೆ ನಾಯಕ ರೋಹಿತ್ ಶರ್ಮಾಗೆ ಕೊಂಚ ನಿರಾಳ ತರಿಸಿದೆ. ಆದ್ರೆ, ಹಿಟ್​​​ಮ್ಯಾನ್ ರೋಹಿತ್ ಶರ್ಮಾರ ಕಥೆ ಮಾತ್ರ ಬದಲಾಗಿಲ್ಲ. ಅದೇ ಹಳೆ ಕಥೆ ಮುಂದುವರಿಸಿರುವ ರೋಹಿತ್, ಟೀಮ್ ಮ್ಯಾನೇಜ್​ಮೆಂಟ್​​ನ ಟೆನ್ಶನ್ ಹೆಚ್ಚಿಸಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಇಂಗ್ಲೆಂಡ್ ವಿರುದ್ಧದ ನಾಗ್ಪುರ ಪಂದ್ಯ ಗೆಲ್ಲುವುದರೊಂದಿಗೆ 6 ಪಂದ್ಯಗಳ ಸರಣಿ ಸೋಲಿಗೆ ಬ್ರೇಕ್​ ಹಾಕಿದ್ದಾರೆ. ಆ ಮೂಲಕ ಏಕದಿನ ಫಾರ್ಮೆಟ್​ನಲ್ಲಿ ಬೆಸ್ಟ್​ ಕ್ಯಾಪ್ಟನ್ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದ್ದಾರೆ. ಆದ್ರೆ. ನಾಯಕನಾಗಿ ಸಕ್ಸಸ್​ ಕಂಡಿರುವ ರೋಹಿತ್, ಆಟಗಾರನಾಗಿ ಮಾತ್ರ ಮತ್ತೆ ಫೇಲ್ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/02/ROHIT_SHARMA_1-2.jpg)
ನಾಯಕನಾಗಿ ಪಾಸ್.. ಆಟಗಾರನಾಗಿ ಫೇಲ್..!
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ, ಏಕದಿನ ಪಂದ್ಯ ಗೆದ್ದಿದೆ. ಆದ್ರೆ, ಆಟಗಾರನಾಗಿ ರೋಹಿತ್ ವೈಫಲ್ಯ ಮಾತ್ರ ಮುಂದುವರೆದಿದೆ. ಇಂಗ್ಲೆಂಡ್ ಎದುರು ಅಬ್ಬರಿಸುತ್ತಾರೆ ಎಂಬ ನಿರೀಕ್ಷೆ ಹುಟ್ಟಿಹಾಕಿದ್ದ ರೋಹಿತ್, ಜಸ್ಟ್​ ಎರಡೇ 2 ರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಇದು ಸಹಜವಾಗೇ ಟೀಮ್ ಮ್ಯಾನೇಜ್​ಮೆಂಟ್ ಟೆನ್ಶನ್ ಹೆಚ್ಚಿಸಿದೆ.
ಟೆಸ್ಟ್​ ಕ್ರಿಕೆಟ್​ನಲ್ಲಿ ರೋಹಿತ್​ ಅಟ್ಟರ್​ ಫ್ಲಾಫ್..!
ಟೆಸ್ಟ್​ ಕ್ರಿಕೆಟ್​ನಲ್ಲಿ ರೋಹಿತ್, ನಿಜಕ್ಕೂ ಡಿಸಾಸ್ಟರ್. ಯಾಕಂದ್ರೆ. ಬಾಂಗ್ಲಾ ಸರಣಿಯುದ್ದಕ್ಕೂ ಸೇರಿ 42 ರನ್ ಗಳಿಸಿದ್ದ ರೋಹಿತ್, ನ್ಯೂಜಿಲೆಂಡ್ ಸರಣಿಯಲ್ಲಿ ಗಳಿಸಿದ್ದು ಜಸ್ಟ್​ 91 ರನ್​.. ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಾದ್ರೂ ಸಿಡಿಯುತ್ತಾರೆ ಅಂದ್ರೆ, 31 ರನ್​​​ಗೆ ಸುಸ್ತಾಗಿದ್ದು ನಿಜಕ್ಕೂ ಬೇಸರ.
ರಣಜಿ ಟ್ರೋಫಿಯಲ್ಲೂ ಅದೇ ಕಥೆ..! ವ್ಯಥೆ..!
ಆಸ್ಟ್ರೇಲಿಯಾ ಸರಣಿ ಬಳಿಕ ರಣಜಿ ಅಖಾಡಕ್ಕಿಳಿದಿದ್ದ ರೋಹಿತ್ ವಿಫಲ ಆಗಿದ್ದಾರೆ. ಜಮ್ಮು ಕಾಶ್ಮೀರ ಎದುರಿನ ಫಸ್ಟ್ ಇನ್ನಿಂಗ್ಸ್​ನಲ್ಲಿ 19 ಎಸೆತಕ್ಕೆ 3 ರನ್​​​​​​​.. 2ನೇ ಇನ್ನಿಂಗ್ಸ್ 35 ಎಸೆತಕ್ಕೆ 28 ರನ್ ಗಳಿಸಿದ್ದು ಬಿಟ್ರೆ, ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್​ ಆಡಿಲ್ಲ.
ಇದನ್ನೂ ಓದಿ: ವಿರಾಟ್ ಎಂಟ್ರಿ ಆದರೆ ಯಾರಿಗೆ ಕೊಕ್.. ಈ ಸ್ಟೇಡಿಯಂನಲ್ಲಿ ಕೊಹ್ಲಿ ಪರ್ಫಾಮೆನ್ಸ್ ಹೇಗಿದೆ?
/newsfirstlive-kannada/media/post_attachments/wp-content/uploads/2025/02/ROHIT_VIRAT.jpg)
ಎರಡೇ ಚಾನ್ಸ್​.. ‘ಟೆಸ್ಟ್’​ ಗೆಲ್ತಾರಾ ಹಿಟ್​ಮ್ಯಾನ್..?
ಬ್ಯಾಕ್ ಟು ಬ್ಯಾಕ್ ವೈಫಲ್ಯ ಕಂಡಿದ್ದ ರೋಹಿತ್​, ನೆಚ್ಚಿನ ಗ್ರೌಂಡ್​​ನಲ್ಲಿ.. ನೆಚ್ಚಿನ ಫಾರ್ಮೆಟ್​​ನಲ್ಲಿ ಅಬ್ಬರಿಸ್ತಾರೆ ಅಂದ್ರೆ, ಅದು ಆಗಲಿಲ್ಲ. ಆದ್ರೆ, ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ರೋಹಿತ್ ಶರ್ಮಾ ಮುಂದೆ, ಜಸ್ಟ್ ಎರಡೇ ಎರಡು ಪಂದ್ಯಗಳ ಅವಕಾಶ ಇದೆ. ಈ ಎರಡು ಪಂದ್ಯಗಳ ಒಳಗಾಗಿ ಫಾರ್ಮ್​ ಕಂಡುಕೊಳ್ಳಬೇಕಿದೆ. ಹೀಗಾಗಿ ರೋಹಿತ್​ಗೆ, ಮುಂದಿನ ಕಟಕ್ ಹಾಗೂ ಅಹ್ಮದಬಾದ್​ನ ನಮೋ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡೂ ಏಕದಿನ ಪಂದ್ಯಗಳು ಅಗ್ನಿಪರೀಕ್ಷೆಯ ಕಣಗಳಾಗಿವೆ.
ರೋಹಿತ್ ಶರ್ಮಾರ ಸತತ ವೈಫಲ್ಯ ಟೀಮ್ ಮ್ಯಾನೇಜ್​ಮೆಂಟ್ ಟೆನ್ಶನ್ ಹೆಚ್ಚಿಸಿದೆ. ಚಾಂಪಿಯನ್ಸ್​ ಟ್ರೋಫಿ ದೃಷ್ಟಿಯಿಂದ ಫಾರ್ಮ್​ ಕಂಡುಕೊಳ್ಳುವುದು ಅನಿವಾರ್ಯ ಆಗಿದೆ. ಇಲ್ಲ ರೋಹಿತ್ ಶರ್ಮಾನೇ ಟೀಮ್ ಇಂಡಿಯಾ ಪಾಲಿನ ವಿಲನ್ ಆಗೋದ್ರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us