/newsfirstlive-kannada/media/post_attachments/wp-content/uploads/2024/10/ROHIT_SHARMA-2.jpg)
ಬಾರ್ಡರ್-ಗವಾಸ್ಕರ್ ಟ್ರೋಫಿ ಆಡುತ್ತಿರುವ ಟೀಮ್ ಇಂಡಿಯಾ, ಮೆಲ್ಬೋರ್ನ್ ಟೆಸ್ಟ್​ ಸೋತು ಭಾರೀ ಟೀಕೆಗೆ ಗುರಿಯಾಗಿದೆ. ನಾಯಕ ರೋಹಿತ್ ಶರ್ಮಾ ಮೇಲೂ ಪ್ರಶ್ನೆಗಳು ಎದ್ದಿವೆ. ಯಾಕೆಂದರೆ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಸತತವಾಗಿ ವೈಫಲ್ಯ ಕಾಣುತ್ತಿದೆ.
ಮೆಲ್ಬೋರ್ನ್ ಸೋಲಿನ ನಂತರ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. ಅವರು ತಮ್ಮ ಪೋಸ್ಟ್‌ನಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಅಂದ್ಹಾಗೆ ರೋಹಿತ್ ಶರ್ಮಾ 2024ಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. 2024ರಲ್ಲಿ ನಡೆದ ಅದ್ಭುತ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಟಿ 20 ವಿಶ್ವಕಪ್ ಗೆಲುವು ಕೂಡ ಸೇರಿದೆ. ವೀಡಿಯೋ ಶೀರ್ಷಿಕೆಯಲ್ಲಿ, ಎಲ್ಲಾ ಏರಿಳಿತಗಳ ಮಿಶ್ರಣವನ್ನು ನೀಡಿದ 2024ಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಮೆಲ್ಬೋರ್ನ್ ಟೆಸ್ಟ್ ಸೋಲಿನ ನಂತರ ರೋಹಿತ್ ಶರ್ಮಾ ಮೇಲೆ ಪ್ರಶ್ನೆಗಳೆದ್ದಿವೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 184 ರನ್‌ಗಳಿಂದ ಸೋಲ ಅನುಭವಿಸಿತ್ತು. ಈ ಪಂದ್ಯದಲ್ಲಿ ನಾಯಕ ಮತ್ತೊಮ್ಮೆ ಪ್ಲಾಪ್ ಆಗಿ ಕಾಣಿಸಿಕೊಂಡರು. ಎರಡೂ ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 03 ಮತ್ತು 09 ರನ್ ಬಂದಿದೆ. ಈ ಸೋಲಿನ ನಂತರ ರೋಹಿತ್ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದಿವೆ.
View this post on Instagram
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us