ಮೈದಾನದಲ್ಲಿ ಜಾರಿದ ರೋಹಿತ್ ಪ್ಯಾಂಟ್, ಮುಜುಗರಕ್ಕೆ ಒಳಗಾದ ಪತ್ನಿ ರಿತಿಕಾ..!

author-image
AS Harshith
Updated On
ಮೈದಾನದಲ್ಲಿ ಜಾರಿದ ರೋಹಿತ್ ಪ್ಯಾಂಟ್, ಮುಜುಗರಕ್ಕೆ ಒಳಗಾದ ಪತ್ನಿ ರಿತಿಕಾ..!
Advertisment
  • ನಿನ್ನೆ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ನಡುವೆ ನಡೆದ ಪಂದ್ಯ
  • ಚೆನ್ನೈ ಕ್ಯಾಪ್ಟನ್​ ರುತುರಾಜ್​ ಗಾಯಕವಾಡ್ ಕ್ಯಾಚ್​ ಹಿಡಿಯಲು ಯತ್ನಿಸಿದ ರೋಹಿತ್​
  • ಮುಂಬೈ ವಿರುದ್ಧ 20 ರನ್​ಗಳ ಭರ್ಜರಿ ಜಯ ಸಾಧಿಸಿದ ಚೆನ್ನೈ ಸೂಪರ್​ ಕಿಂಗ್ಸ್​

ನಿನ್ನೆ ನಡೆದ ಐಪಿಎಲ್​ ಪಂದ್ಯದಲ್ಲಿ ಫೀಲ್ಡಿಂಗ್​​ ವೇಳೆ ರೋಹಿತ್​ ಶರ್ಮಾ ಪ್ಯಾಂಟ್​​ ಜಾರಿದ ಪ್ರಸಂಗವೊಂದು ನಡೆದಿದೆ. ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯದ ವೇಳೆ ಸಾವಿರಾರು ಕ್ರಿಕೆಟ್​ ಅಭಿಮಾನಿಗಳ ಮುಂದೇಯೇ ಈ ಘಟನೆ ಎದುರಾಗಿದೆ.

ನಿನ್ನೆ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ನಡುವೆ ಪಂದ್ಯ ಏರ್ಪಟ್ಟಿತ್ತು. ಮೊದಲಿಗೆ ಮೈದಾನಕ್ಕಿಳಿದ ಸಿಎಸ್​ಕೆ ತಂಡ ದೊಡ್ಡ ಮೊತ್ತವನ್ನು ಸಂಪಾದಿಸಲು ಮುಂದಾಗಿತ್ತು. ಈ ವೇಳೆ ಚೆನ್ನೈ ಕ್ಯಾಪ್ಟನ್​ ರುತುರಾಜ್​ ಗಾಯಕವಾಡ್​​ ಮುಂಬೈ ಬೌಲರ್​ ಮದ್ವಾಲ್ ಎಸೆತಕ್ಕೆ ಬ್ಯಾಟ್​ ಬೀಸುತ್ತಾರೆ.

ರುತುರಾಜ್​ ಬೀಸಿದ ಬ್ಯಾಟ್​ಗೆ ತಾಗಿ ಚೆಂಡನ್ನು ರೋಹಿತ್​ ಶರ್ಮಾ ಬೌಂಡರಿ ಲೈನ್​ ಬಳಿ ಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ ಈ ವೇಳೆ ಕೈಯಿಂದ ಚೆಂಡು ಕೆಳಕ್ಕೆ ಬೀಳುತ್ತದೆ. ರೋಹಿತ್​ ಶರ್ಮಾ ಕೂಡ ಕೆಳಕ್ಕೆ ಬೀಳುತ್ತಾರೆ. ಈ ವೇಳೆ ರೋಹಿತ್​ ಶರ್ಮಾ ಪ್ಯಾಂಟ್​ ಜಾರುತ್ತದೆ. ಕ್ಯಾಮೆರಾಮೆನ್​ ಈ ದೃಶ್ಯವನ್ನು ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: RCBಗೆ ಇಂದು ಅಳಿವು ಉಳಿವಿನ ಪ್ರಶ್ನೆ.. ಫ್ಯಾನ್ಸ್​ಗಂತೂ ಟೆನ್ಶನ್​, ಗೆದ್ದರೆ ಬಿರಿಯಾನಿ ಊಟ ಪಕ್ಕಾ!

ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ವಿರುದ್ಧ 20 ರನ್​ಗಳ ಜಯ ಸಾಧಿಸಿದೆ. ಧೋನಿ ಕೂಡ ಮೈದಾನಕ್ಕೆ ಬಂದು ಕಮಾಲ್​ ಮಾಡಿದ್ದಾರೆ. 4 ಎಸೆತಕ್ಕೆ 3 ಸಿಕ್ಸ್​ ಬಾರಿಸಿ 20 ರನ್​ ಬಾರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment