/newsfirstlive-kannada/media/post_attachments/wp-content/uploads/2024/08/ROHIT_SHARMA_TEST.jpg)
ಐಪಿಎಲ್-2025ರಲ್ಲಿ ಧಮಾಕಾ ಸೃಷ್ಟಿಸಲು ಐಪಿಎಲ್ ಫ್ರಾಂಚೈಸಿಗಳು ಲೆಕ್ಕಾಚಾರದಲ್ಲಿ ತೊಡಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ತಂಡಗಳ ರಿಟೈನ್ ಲಿಸ್ಟ್ ಹೊರ ಬೀಳಲಿದೆ. ಈ ಮಧ್ಯೆ ಮುಂಬೈ ಇಂಡಿಯನ್ಸ್ನಲ್ಲಿ ಭಾರೀ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.
ಮೂಲಗಳ ಪ್ರಕಾರ, ಸೂರ್ಯಕುಮಾರ್ ಯಾದವ್, ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ರಿಟೈನ್ ಮಾಡಿಕೊಳ್ಳಲಿದೆ. ರೋಹಿತ್ರನ್ನು ಕೈಬಿಡಲಿದೆ ಎಂದು ಹೇಳಲಾಗ್ತಿದೆ. ಹೀಗಾಗಿ ರೋಹಿತ್ ಶರ್ಮಾ ಆರ್ಸಿಬಿ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಬೆಂಗಳೂರಲ್ಲಿ ನಡೆಯಿತು. ಈ ವೇಳೆ ಅಭಿಮಾನಿಯೊಬ್ಬರು ರೋಹಿತ್ಗೆ ನೀವು ಯಾವ ತಂಡದ ಪರ ಐಪಿಎಲ್ನಲ್ಲಿ ಆಡ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ರೋಹಿತ್ ಶರ್ಮಾ ರಿಪ್ಲೈ ಕೂಡ ಮಾಡಿದ್ದಾರೆ.
ಹೇಗಿದೆ ಸಂಭಾಷಣೆ..?
ಅಭಿಮಾನಿ: ರೋಹಿತ್ ಭಾಯ್.. ಐಪಿಎಲ್ನಲ್ಲಿ ಯಾವ ತಂಡದಲ್ಲಿ ಆಡ್ತೀರಿ..?
ರೋಹಿತ್: ಹ್ಹ..!
ಅಭಿಮಾನಿ: ಐಪಿಎಲ್ನಲ್ಲಿ ಯಾವ ಟೀಂ..?
ರೋಹಿತ್: ನೀವು ಎಲ್ಲಿ ಬಯಸ್ತೀರಿ..?
ಅಭಿಮಾನಿ: ಆರ್ಸಿಬಿಗೆ ಬನ್ನಿ
Fan: "Which team in the IPL"
Rohit Sharma replied "Where do you want"
Fan: "Come to RCB"
Typical Rohit Sharma 😄👌 https://t.co/A4XHZF8A3p— Johns. (@CricCrazyJohns) October 19, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ