/newsfirstlive-kannada/media/post_attachments/wp-content/uploads/2024/07/ROHIT_SURYA-1.jpg)
2025ರ ಐಪಿಎಲ್​ಗೆ ಇನ್ನೂ 9 ತಿಂಗಳು ಬಾಕಿ ಇದ್ದರೂ ಈಗಿನಿಂದಲೇ ಭಾರೀ ಸೌಂಡ್ ಮಾಡುತ್ತಿದೆ. ಏಕೆಂದರೆ ಮುಂದಿನ ಟೂರ್ನಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಟೂರ್ನಿ ಆರಂಭಕ್ಕೂ ಮೊದಲೇ ನಡೆಯುವ ಮೆಗಾ ಆ್ಯಕ್ಷನ್​ (ಹರಾಜು) ಸಾಕಷ್ಟು ಕುತೂಹಲ ಮೂಡಿಸಿದೆ. ಸ್ಟಾರ್​ ಪ್ಲೇಯರ್ಸ್​ ಬೇರೆ ಟೀಮ್​ಗೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
2024ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ನಲ್ಲಿ ಆದ ಬೆಳವಣಿಗೆಯಿಂದ ಫ್ರಾಚೈಸಿ ಭಾರೀ ಪೆಟ್ಟು ತಿಂದಿದೆ. ಅಂಕಪಟ್ಟಿಯಲ್ಲಿ ಊಹಿಸದ ರೀತಿಯ ಸ್ಥಾನ ಪಡೆದುಕೊಂಡಿತ್ತು. ಹಾರ್ದಿಕ್​ ಪಾಂಡ್ಯರನ್ನ ಮುಂಬೈ ಇಂಡಿಯನ್ಸ್​ ತಂಡಕ್ಕೆ ನಾಯಕರಾಗಿ ನೇಮಕ ಮಾಡಿದ ಮೇಲೆ ಈ ಎಲ್ಲ ಬೆಳವಣಿಗೆಗಳು ನಡೆದವು. ಆದರೆ ಈ ಬೆಳವಣಿಗೆ ಇನ್ನು ನಡೆಯುತ್ತಿರುವುದು ಆಶ್ಚರ್ಯ ಮೂಡಿಸಿದೆ. ಅದು ಏನೆಂದರೆ, ಮುಂಬೈ ಇಂಡಿಯನ್ಸ್​ನ ಸ್ಟಾರ್​ ಪ್ಲೇಯರ್ಸ್​ ಆದ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ 2025ರಲ್ಲಿ ಮುಂಬೈ ತಂಡದಲ್ಲಿ ಆಡಲ್ಲ ಎನ್ನಲಾಗ್ತಿದೆ. ಆದರೆ ಯಾವ ಟೀಮ್​ನಲ್ಲಿ ಆಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.
/newsfirstlive-kannada/media/post_attachments/wp-content/uploads/2024/07/Rohit_Surya.jpg)
ರೋಹಿತ್ ಶರ್ಮಾರನ್ನು ಮುಂಬೈ ಟೀಮ್​ ನಾಯಕ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಅವರನ್ನು ತಮ್ಮ ಟೀಮ್​ಗೆ ನಾಯಕರನ್ನಾಗಿ ಕರೆದುಕೊಂಡು ಬರಲು ಬೇರೆ ಫ್ರಾಂಚೈಸಿಗಳು ತುದಿ ಗಾಲಲ್ಲಿ ನಿಂತಿವೆ. ಇದಕ್ಕಾಗಿ ಎಷ್ಟು ಕೋಟಿ ರೂಪಾಯಿಗಳನ್ನು ಸುರಿಯಲು ಹಿಂಜರಿಯಲ್ಲ. ಏಕೆಂದರೆ ರೋಹಿತ್​ ನಾಯಕತ್ವದಲ್ಲಿ ಟಿ20 ವರ್ಲ್ಡ್​​ಕಪ್​ ಭಾರತ ಗೆದ್ದಿದೆ. ಹೀಗಾಗಿ ಮುಂದಿನ ಐಪಿಎಲ್​​ನಲ್ಲಿ ಹಿಟ್​ಮ್ಯಾನ್​ ಬೇರೆ ತಂಡದ ಕ್ಯಾಪ್ಟನ್ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಜೊತೆಗೆ 360 ಖ್ಯಾತಿಯ ಸೂರ್ಯಕುಮಾರ್ ಕೂಡ ರೋಹಿತ್ ಬೆನ್ನಿಗೆ ಹೋಗುತ್ತಾರಂತೆ. ಅಲ್ಲದೇ ಎಂಎಸ್​ ಧೋನಿ ಜೊತೆ ನಿಕಟ ಸಂಪರ್ಕದಲ್ಲಿರೋ ಡೆಲ್ಲಿ ಕ್ಯಾಪ್ಟನ್​ ರಿಷಬ್ ಪಂತ್ ಸಿಎಸ್​ಕೆಗೆ ಹೋಗುತ್ತಾರೆ ಎನ್ನುವ ಗುಮಾನಿ ಕೂಡ ಇದೆ. ಇದಕ್ಕೆಲ್ಲ 2025ರ ಆ್ಯಕ್ಷನ್​ನಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us