/newsfirstlive-kannada/media/post_attachments/wp-content/uploads/2024/10/Roma-Michel.jpg)
ಮಿಸ್​​ ಗ್ರ್ಯಾಂಡ್​​ ಇಂಟರ್​ನ್ಯಾಷನಲ್​​ 2024ರ ಸೌಂದರ್ಯ ಸ್ಪರ್ಧೆಯಲ್ಲಿ ರೂಪದರ್ಶಿಯೊಬ್ಬರು ಬಿಕಿನಿಯಲ್ಲಿ ಕಾಣಿಸಿಕೊಂಡು ಸದ್ಯ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಅದರಲ್ಲೂ ಪಾಕಿಸ್ತಾನದ ಮೂಲದ ರೂಪದರ್ಶಿ ಬಿಕಿನಿ ಧರಿಸಿರೋದು ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಅಂದಹಾಗೆಯೇ ಈ ರೂಪದರ್ಶಿ ಯಾರು? ಆಕೆಯ ಹಿನ್ನೆಲೆ ಏನು? ತಿಳಿಯೋಣ.
ನಟಿ ರೋಮಾ ಮೈಕೆಲ್​ ಇತ್ತೀಚೆಗೆ ಮಿಸ್​​ ಗ್ರ್ಯಾಂಡ್​​ ಇಂಟರ್​ನ್ಯಾಷನಲ್​​ 2024ರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರ‍್ಯಾಂಪ್ ​ಮೇಲೆ ಬಿಕಿನಿ ಧರಿಸಿ ಹೆಜ್ಜೆ ಹಾಕಿದ್ದರು. ನಟಿಯ ರ‍್ಯಾಂಪ್ ​ವಾಕ್​ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದಲ್ಲದೆ, ಪಾಕಿಸ್ತಾನಿಯರು ವ್ಯಾಪಕ ಟೀಕೆಯನ್ನು ವ್ಯಕ್ತಪಡಿಸಿದರು.
Wow ! #Pakistan ?? is crossing barriers & Rules !! Pakistani Model participated at Miss World Grand Show. #RomaMichael is looking Sexy & Stunning in Bikni. She has Perfect Lahori Body !! Thank you Ex PM #ImranKhan for modernize Pakistan. ?? pic.twitter.com/ZmtjYYcLXP
— Umair Sandhu (@UmairSandu)
Wow ! #Pakistan 🇵🇰 is crossing barriers & Rules !! Pakistani Model participated at Miss World Grand Show. #RomaMichael is looking Sexy & Stunning in Bikni. She has Perfect Lahori Body !! Thank you Ex PM #ImranKhan for modernize Pakistan. 😄😝 pic.twitter.com/ZmtjYYcLXP
— Umair Sandhu (@UmairSandu) October 22, 2024
">October 22, 2024
ರೋಮಾ ಮೈಕಲ್​ ಮೂಲತಃ ಪಾಕಿಸ್ತಾನದ ಲಾಹೋರ್​ನವರು. ಸೌತ್​ಏಷ್ಯಾ ವಿಶ್ವವಿದ್ಯಾನಿಲಯದಲ್ಲಿ ಬಿಕೆಟ್​ ಪದವಿ ಪೂರೈಸಿದ್ದಾರೆ. ಬಳಿಕ ಬಣ್ಣದ ಲೋಕದತ್ತ ಕಾಲಿಡಲು ಮನಸ್ಸು ಮಾಡಿದ್ದಾರೆ. ಅದಕ್ಕೆ ಅನುಗುಣವಾಗಿಯೇ ಮಿಸ್​​ ಗ್ರ್ಯಾಂಡ್​​ ಇಂಟರ್​ನ್ಯಾಷನಲ್​​ 2024ರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: ಮರಕುಂಬಿ ಪ್ರಕರಣದ ತೀರ್ಪು ಬೆನ್ನಲ್ಲೇ ಎದೆ ನೋವು.. ಅಪರಾಧಿ ಹೃದಯಾಘಾತಕ್ಕೆ ಸಾ*ವು
View this post on Instagram
ಅಚ್ಚರಿ ಸಂಗತಿ ಎಂದರೆ ರೋಮಾ ಮೈಕಲ್​ ಹಿಜಾಬ್​ ಬದಿಗಿಟ್ಟು ಬಿಕಿನಿ ತೊಟ್ಟು ಈವೆಂಟ್​ನಲ್ಲಿ ಭಾಗವಹಿಸಿದ ಪಾಕಿಸ್ತಾನದ ಮೊದಲ ಮಾಡೆಲ್​ ಎಂದು ಗುರುತಿಸಿಕೊಂಡಿದ್ದಾರೆ. ಸದ್ಯ ಆಕೆ ತೊಟ್ಟ ಉಡುಗೆ ದೇಶದ ಸಂಸ್ಕೃತಿ ಮತ್ತು ಮಹಿಳಾ ಹಕ್ಕುಗಳಗಳ ವಿಚಾರವಾಗಿ ಚರ್ಚೆ ಶುರುವಾಗಿದೆ. ಸಾಂಪ್ರದಾಯದ ವಿರುದ್ಧವಾಗಿದ್ದಾರೆ ಎಂದು ಟೇಕೆಗೆ ಒಳಗಾಗಿದ್ದಾಳೆ.
ಮಾಡೆಲಿಂಗ್​ ಮಾತ್ರವಲ್ಲದೆ, ಸಿನಿಮಾದಲ್ಲೂ ರೋಮಾ ನಟಿಸಿದ್ದಾರೆ. ‘ದೆಹಲಿ ಗೇಟ್​ ಮತ್ತು ‘ಕಹೇ ದಿಲ್​ ಜಿಧೆರ್​’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಕೇನ್ಸ್​ ಫ್ಯಾಶನ್​ ವೀಕ್​ ಮತ್ತು ದುಬೈ ಫ್ಯಾಶನ್​ ಶೋ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಫ್ಯಾಶನ್​​ ಶೋದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ.