/newsfirstlive-kannada/media/post_attachments/wp-content/uploads/2024/11/RCB-7.jpg)
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಮೆಗಾ ಹರಾಜು ನಡೆಯುತ್ತಿದೆ. 18ನೇ ಋತುವಿಗಾಗಿ 10 ಫ್ರಾಂಚೈಸಿಗಳು ತಂಡಕ್ಕೆ ಕೊಡುಗೆ ನೀಡುವಂತ ಆಟಗಾರರನ್ನ ಬರಮಾಡಿಕೊಂಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಉತ್ತಮ ಮಟ್ಟದಲ್ಲೇ ಲೆಕ್ಕ ಹಾಕಿ ಪ್ಲೇಯರ್ಸ್ ಅನ್ನು ಖರೀದಿ ಮಾಡಿದೆ. ಇದೀಗ ವೆಸ್ಟ್ ಇಂಡೀಸ್ನ ಬಲಿಷ್ಠ ಬೌಲರ್ ಕಮ್ ಬ್ಯಾಟ್ಸ್ಮನ್ ರೊಮಾರಿಯೋ ಶೆಫರ್ಡ್ ಅವರನ್ನು ತಂಡಕ್ಕೆ ಸೇರಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆಲ್ರೌಂಡರ್ ರೊಮಾರಿಯೋ ಶೆಫರ್ಡ್ ಅವರಿಗೆ 1.50 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಇವರು ಬಲಗೈ ಬೌಲಿಂಗ್, ಬಲಗೈ ಬ್ಯಾಟಿಂಗ್ ಮಾಡುತ್ತಾರೆ. ಈ ಮೊದಲು ಇವರು ಮುಂಬೈ ಇಂಡಿಯನ್ಸ್ ಟೀಮ್ನಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಲ್ಲಿಂದ ಅವರನ್ನು ಕೈಬಿಟ್ಟ ಕಾರಣ ಹರಾಜಿಗೆ ಬಂದಿದ್ದರು. ಇದೀಗ ಆರ್ಸಿಬಿ ಖರೀದಿ ಮಾಡಿದೆ.
ಇದನ್ನೂ ಓದಿ: Auction; ಸಾಧಾರಣ ಮೊತ್ತ ನೀಡಿ ಕನ್ನಡಿಗನ ಖರೀದಿಸಿದ KKR.. ಮೊದಲ ಶತಕ ಸಿಡಿಸಿದ್ದ ಪಾಂಡೆ
ರೊಮಾರಿಯೋ ಶೆಫರ್ಡ್ ಈ ಮೊದಲು 2022ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಆಡಿದ್ದರು. ಇಲ್ಲಿಂದ ನಂತರ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದರು. ಆದರೆ ಈ ಬಾರಿ ಅವರು ತಂಡದಿಂದ ಕೈಬಿಟ್ಟಿದ್ದರು. ಶೆಫರ್ಡ್ ಉತ್ತಮವಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಲಿದ್ದಾರೆ ಎಂದು ಹೇಳಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ