Advertisment

BREAKING: ದೆಹಲಿ ಏರ್‌ಪೋರ್ಟ್‌ ಟರ್ಮಿನಲ್ 1ನಲ್ಲಿ ಭಾರೀ ಅನಾಹುತ; 6 ಮಂದಿ ಸ್ಥಿತಿ ಗಂಭೀರ

author-image
admin
Updated On
3 ತಿಂಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ಟರ್ಮಿನಲ್ ಕುಸಿತ; ಓರ್ವ ಸಾವು, ಹಲವರ ಸ್ಥಿತಿ ಗಂಭೀರ
Advertisment
  • ಇಂದು ಬೆಳ್ಳಂಬೆಳಗ್ಗೆ 5.30ರ ಸುಮಾರಿಗೆ ಕುಸಿದು ಬಿದ್ದ ಮೇಲ್ಛಾವಣಿ
  • ನಿನ್ನೆಯಿಂದಲೇ ದೆಹಲಿಯ ಹಲವೆಡೆ ಒಂದೇ ಸಮನೆ ಜೋರು ಮಳೆ
  • ದೆಹಲಿ ಅತ್ಯಾಧುನಿಕ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅನಾಹುತ

ನವದೆಹಲಿ: ಧಾರಾಕಾರ ಮಳೆಯ ಜೊತೆ, ಜೊತೆಗೆ ರಾಷ್ಟ್ರ ರಾಜಧಾನಿಯ ಏರ್‌ಪೋರ್ಟ್‌ನಲ್ಲಿ ದೊಡ್ಡ ಅನಾಹುತವೊಂದು ಸಂಭವಿಸಿದೆ. ದೆಹಲಿ ಏರ್‌ಪೋರ್ಟ್‌ ಟರ್ಮಿನಲ್ 1ನಲ್ಲಿ ರೂಫ್‌ ಕುಸಿದು ಬಿದ್ದಿದ್ದು, ಹಲವು ವಾಹನಗಳು ಜಖಂ ಆಗಿವೆ. ಭೀಕರ ಘಟನೆಯಲ್ಲಿ 6ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisment

ನಿನ್ನೆಯಿಂದಲೇ ದೆಹಲಿಯ ಹಲವೆಡೆ ಒಂದೇ ಸಮನೆ ಜೋರು ಮಳೆಯಾಗುತ್ತಿದೆ. ರಸ್ತೆಯಲ್ಲಿ ಮಳೆ ನೀರು ಪ್ರವಾಹದಂತೆ ಹರಿಯುತ್ತಿದೆ. ಈ ವಾತಾವರಣದ ಜೊತೆಗೆ ದೆಹಲಿ ಏರ್‌ಪೋರ್ಟ್‌ನಲ್ಲಿ ಇಂದು ಬೆಳ್ಳಂಬೆಳಗ್ಗೆ 5.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ಹಾವೇರಿ ಅಪಘಾತದಲ್ಲಿ ಅಮ್ಮನ ಎದುರೇ ಪ್ರಾಣಬಿಟ್ಟ ಅವಳಿ ಮಕ್ಕಳು.. ದೃಶ್ಯ ಕಂಡು ಗಳಗಳನೇ ಕಣ್ಣೀರಿಟ್ಟ ಆ್ಯಂಬುಲೆನ್ಸ್ ಸಿಬ್ಬಂದಿ 

ಮಳೆಯ ಮಧ್ಯೆ ದೆಹಲಿ ಏರ್‌ಪೋರ್ಟ್‌ ಟರ್ಮಿನಲ್ 1ರ ಮೇಲ್ಛಾವಣಿಯಲ್ಲಿ ನೀರು ಧಾರಾಕಾರವಾಗಿ ಸೋರುತ್ತಿತ್ತು. ಇದ್ದಕ್ಕಿದಂತೆ ಮೇಲ್ಘಾವಣಿ ಕುಸಿದು ಬಿದ್ದಿದ್ದು ಈ ಅನಾಹುತಕ್ಕೆ ಕಾರಣವಾಗಿದೆ. ರೂಫ್ ಕುಸಿದು ಬಿದ್ದ ಪರಿಣಾಮ ಟರ್ಮಿನಲ್ 1ರಲ್ಲಿ ನಿಂತಿದ್ದ ಕ್ಯಾಬ್‌ಗಳು ಜಖಂಗೊಂಡಿದೆ. ಕಾರಿನಲ್ಲಿದ್ದವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

Advertisment


">June 28, 2024


">June 28, 2024

ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ 13 ಮಂದಿ ಸಾವು.. ಚಿಂಚೊಳ್ಳಿ ಮಾಯಮ್ಮನ ದರ್ಶನಕ್ಕೆ ತೆರಳಿದ್ದ ಭಕ್ತರು

Advertisment


">June 28, 2024


">June 28, 2024

ರೂಫ್ ಕುಸಿತದಿಂದಾಗಿ ದೆಹಲಿ ಟರ್ಮಿನಲ್ 1ರ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತವಾಗಿದೆ. ಟರ್ಮಿನಲ್ 1ರಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗಿದೆ. ಸಿಬ್ಬಂದಿಗಳ ಸುರಕ್ಷತೆ ದೃಷ್ಟಿಯಿಂದ ಟರ್ಮಿನಲ್ 1 ಅನ್ನು ಬಂದ್ ಮಾಡಲಾಗಿದೆ ಎಂದು ವಿಮಾನಯಾನ ಸಿಬ್ಬಂದಿ ತಿಳಿಸಿದ್ದಾರೆ.

ಅತ್ಯಾಧುನಿಕ ವಿಮಾನ ನಿಲ್ದಾಣ ಅನ್ನೋ ಖ್ಯಾತಿ ಗಳಿಸಿದ್ದ ದೆಹಲಿ ವಿಮಾನದಲ್ಲಿ ಈ ದುರಂತ ನಡೆದಿರೋದು ಅಚ್ಚರಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment