/newsfirstlive-kannada/media/post_attachments/wp-content/uploads/2025/02/BAGAPPA_HARIJAN_1.jpg)
ವಿಜಯಪುರ: ಭೀಮಾ ತೀರದ ರೌಡಿ ಬಾಗಪ್ಪ ಹರಿಜನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುಕುರುಗೊಳಿಸಿದ್ದಾರೆ. ಇದರ ಮಧ್ಯೆ ಬಾಗಪ್ಪ ಹರಿಜನ ಕುರಿತು ಕುತೂಹಲಕಾರಿ ವಿಷಯವೊಂದು ಹೊರಬಿದ್ದಿದೆ.
ರೌಡಿ ಆಗಿದ್ದ ಬಾಗಪ್ಪ ಭೂಗತ ಲೋಕದಿಂದ ಹೊರ ಬಂದ ಬಳಿಕ ಆಧ್ಯಾತ್ಮಿಕ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲ ತರದ ಕೆಲಸಗಳುನ್ನು ಬಿಟ್ಟು ಜನರ ಸೇವೆಯಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದನು. ಹೀಗಾಗಿಯೇ ತಮ್ಮ ಊರು ಬ್ಯಾಡಗಿಹಾಳದಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಲಕ್ಷ್ಮೀ ದೇವಾಲಯ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದರಂತೆ. ಈ ಸಲುವಾಗಿ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದ್ದರು.
ಇದನ್ನೂ ಓದಿ:ಸೀತಾರಾಮ ಸೀರಿಯಲ್ನಲ್ಲಿ ರೋಚಕ ಟ್ವಿಸ್ಟ್.. ಸಿಹಿ ರೂಪದಲ್ಲಿ ಬಂದ ಸುಬ್ಬಿನಾ ನೋಡಿ ಭಾರ್ಗವಿ ಕಕ್ಕಾಬಿಕ್ಕಿ!
ದೇವಾಲಯ ನಿರ್ಮಾಣಕ್ಕಾಗಿ ಯೋಜನೆಯಂತೆ ತಮ್ಮ ಊರಿನ ಹೊರವಲಯದಲ್ಲಿ 8 ಎಕರೆ 10 ಗುಂಟೆ ಜಮೀನಿನಲ್ಲಿ ಬಾಗಪ್ಪ ಹಾಗೂ ಅವರ ತಂಡ ಭೂಮಿ ಪೂಜೆಯನ್ನು ಕೂಡ ನೆರವೇರಿಸಿದ್ದರು. ಇದರ ಜೊತೆಗೆ ಗ್ರಾಮದ ಹಳೆಯ ಲಕ್ಷ್ಮೀ ದೇವಾಲಯಕ್ಕೆ ಬೆಳ್ಳಿಯ ಮೂರ್ತಿಯನ್ನು ಬಾಗಪ್ಪ ಮಾಡಿಸಿದ್ದನು. ಒಂದೊಂದೇ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವಾಗಲೇ ದುಷ್ಕರ್ಮಿಗಳು ಕೃತ್ಯ ಎಸೆಗಿದ್ದಾರೆ. ಇದು ಅವರ ಕುಟಂಬಕ್ಕೆ ಆಘಾತ ತಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ