Advertisment

ನಟ ದರ್ಶನ್​ಗೆ ಕಾದಿದೆ ಮತ್ತೊಂದು ಬಿಗ್ ಶಾಕ್.. ಜೈಲು ಸೇರ್ತಿದ್ದಂತೆ ಪೊಲೀಸರಿಂದ ಪಕ್ಕಾ ಪ್ಲಾನ್..!

author-image
Ganesh
Updated On
‘ಇದೆಲ್ಲ ಬೇಕಿತ್ತಾ ನಂಗೆ..’ ಅಧಿಕಾರಿಗಳ ಮುಂದೆ ದರ್ಶನ್ ದುಃಖ; ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಲು ಹೆದರಿದ ದಾಸ..!
Advertisment
  • ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ದರ್ಶನ್ ಅರೆಸ್ಟ್
  • ನಟ ದರ್ಶನ್ ಅಂಡ್ ಪವಿತ್ರಗೌಡ ಗ್ಯಾಂಗ್​ನ ತೀವ್ರ ವಿಚಾರಣೆ
  • ಮಾಸ್ಟರ್ ಸ್ಟ್ರೋಕ್ ನೀಡಲು ಪೊಲೀಸರು ತಯಾರಿ.. ಏನದು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕಣದಲ್ಲಿ ನಟ ದರ್ಶನ್​​ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ಮಧ್ಯೆ ಪೊಲೀಸರು ದರ್ಶನ್​​ಗೆ ಮತ್ತೊಂದು ಬಿಗ್ ಶಾಕ್ ನೀಡಲು ಮುಂದಾಗಿದ್ದಾರೆ.

Advertisment

ಮಾಹಿತಿಗಳ ಪ್ರಕಾರ ದರ್ಶನ್ ಮೇಲೆ ರೌಡಿ ಶೀಟ್ ಓಪನ್ ಮಾಡಲು ನಿರ್ಧರಿಸಿದ್ದಾರಂತೆ. ರೇಣುಕಾಸ್ವಾಮಿ ಕೊಲೆ ಕೇಸ್ ಹಾಗೂ ಹಳೆ ಕೇಸ್​​ಗಳೆಲ್ಲ ಸೇರಿಸಿ ರೌಡಿಶೀಟ್​ ತೆರೆಯಲು ಸಿದ್ಧತೆ ಮಾಡಿದ್ದಾರೆ. ಕಾಮಾಕ್ಷಿಪಾಳ್ಯ ಹಾಗೂ ಆರ್​ಆರ್ ನಗರ ಪೊಲೀಸ್ ಠಾಣೆಯಲ್ಲಿರುವ ಪುಡಿರೌಡಿಗಳ ಪಟ್ಟಿಯಲ್ಲಿ ದರ್ಶನ್ ಹೆಸರನ್ನೂ ಸೇರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:36 ಗಂಟೆಯಲ್ಲಿ ಗುಟ್ಟು ರಟ್ಟು.. ಆ ದಿನ ಕುಂತ್ರೂ, ನಿಂತ್ರೂ ಚಡಪಡಿಕೆ.. ದರ್ಶನ್ ತೊಳಲಾಟ, ನಾಟಕ..!

ಕೊಲೆ ಕೇಸಲ್ಲಿ ಜೈಲು ಸೇರ್ತಿದ್ದಂತೆ ನೋಟಿಸ್ ಕೊಟ್ಟು ರೌಡಿ ಹಾಳೆ ತೆರೆಯಲು ತಯಾರಿ ಮಾಡಿಕೊಂಡಿದ್ದಾರೆ. ಇಷ್ಟಕ್ಕೆಲ್ಲ ಕಾರಣ ಅವರ ಜೊತೆ ಇರುವ ರೌಡಿಗಳ ಗ್ಯಾಂಗ್. ಪ್ರತೀ ಜಿಲ್ಲೆಯಲ್ಲೂ ಫ್ಯಾನ್ಸ್ ಹೆಸರಲ್ಲಿ ದರ್ಶನ್ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲೆಯಲ್ಲೂ ದರ್ಶನ್​ ಅವರ ಗ್ಯಾಂಗ್ ಆಕ್ಟೀವ್ ಆಗಿದೆ.

Advertisment

ಆರೋಪಿಗಳ ವಿಚಾರಣೆಯಲ್ಲಿ ದರ್ಶನ್ ನಿಜಬಣ್ಣ ಹೊರಬಂದಿದ್ದು, ಅಸಲಿಗೆ ಕಾನೂನು ಅನ್ನೋದು ಲೆಕ್ಕಕ್ಕೇ ಇಲ್ವಾ ಎನ್ನುವಂತಾಗಿದೆ. ಹೀಗಾಗಿ ನಾಳೆ ದರ್ಶನ್ ಅಂಡ್ ಗ್ಯಾಂಗ್​ನ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಕೋರ್ಟ್​ಗೆ ಅವರನ್ನು ಒಪ್ಪಿಸಿದ ನಂತರ, ನ್ಯಾಯಂಗ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ. ಜೈಲು ಸೇರುತ್ತಿದ್ದಂತೆಯೇ ದರ್ಶನ್ ಮೇಲೆ ರೌಡಿ ಶೀಟ್ ತೆರೆಯಲು ಮುಂದಾಗಿದ್ದಾರೆ.

ಇದನ್ನೂ ಓದಿ:ಶವ ಬೀಸಾಕಿದ್ದಾಗಿಂದ ಒಂದೇ ಬಟ್ಟೆಯಲ್ಲೇ ಮೂರು ದಿನ ಓಟಾಟ.. ಎಣ್ಣೆ ಪಾರ್ಟಿ..!

ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment