/newsfirstlive-kannada/media/post_attachments/wp-content/uploads/2025/07/byrati_basavaraj_biklu_shiva.jpg)
ಬೆಂಗಳೂರು: ಭಾರತಿ ನಗರದ ರೌಡಿಶೀಟರ್ ಬಿಕ್ಲು ಶಿವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಅವರು ಇವತ್ತು ವಿಚಾರಣೆಗೆ ಹಾಜರಾಗಿದ್ದರು. ಸತತ 3 ಗಂಟೆಗಳ ಕಾಲ ಪೊಲೀಸರ ಮುಂದೆ ಶಾಸಕ ವಿಚಾರಣೆಗೆ ಒಳಪಟ್ಟಿದ್ದರು. ಬಳಿಕ ಹೊರ ಬಂದು ಪ್ರಕರಣದಲ್ಲಿ ನನ್ನ ಪಾತ್ರ ಏನು ಇಲ್ಲ ಎಂದು ಎಸಿಪಿಗೆ ಹೇಳಿದ್ದೇನೆ ಎಂದು ಭೈರತಿ ಬಸವರಾಜ್ ಅವರು ಹೇಳಿದ್ದಾರೆ.
ವಿಚಾರಣೆ ಮುಗಿಸಿ ಹೊರ ಬಂದ ಶಾಸಕ ಭೈರತಿ ಬಸವರಾಜ್ ಅವರು, ಎಸಿಪಿ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ನನ್ನದು ಯಾವುದೇ ಪಾತ್ರವಿಲ್ಲ. ತನಿಖೆಗೆ ಕರೆದಿದ್ದರು ಬಂದಿದ್ದೇನೆ ಅಷ್ಟೇ. ಇದರಲ್ಲಿ ನನ್ನ ಪಾತ್ರ ಏನು ಇಲ್ಲ. ಏನೆಲ್ಲಾ ಪ್ರಶ್ನೆ ಕೇಳಿದರೂ ಅದಕ್ಕೆ ಉತ್ತರಿಸಿದ್ದೇನೆ. ತಮ್ಮ ಪಾತ್ರ ಏನು ಇಲ್ಲ ಎಂದು ಎಸಿಪಿಗೆ ಹೇಳಿದ್ದೀನಿ. ಮತ್ತೆ ನೊಟೀಸ್ ಕೊಟ್ರೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರು SBI ಬ್ಯಾಂಕ್ಗೆ ಕೋಟಿ ಕೋಟಿ ಹಣ ಪಂಗನಾಮ.. ಸಿಬಿಐನಿಂದ 20 ವರ್ಷದ ಬಳಿಕ ವೃದ್ಧೆ ಅರೆಸ್ಟ್
ಪೊಲೀಸರು ವಿಚಾರಣೆಗೆ ಮತ್ತೆ ಬರಬೇಕು ಅಂತ ಹೇಳಿದ್ದಾರೆ. ಹೀಗಾಗಿ ಜುಲೈ 23 ಬುಧವಾರದಂದು ವಿಚಾರಣೆಗೆ ಹಾಜರಾಗಬೇಕಿದೆ. ಪುನಃ ವಿಚಾರಣೆಗೆ ಬಂದು ನನ್ನ ಅನಿಸಿಕೆ ತಿಳಿಸುತ್ತೇನೆ. ನನಗೆ ಯಾವ ಜಗದೀಶ್ ಕೂಡ ಪರಿಚಯ ಇಲ್ಲವೇ ಇಲ್ಲ. ಅವರು ಯಾರೆಂದು ಗೊತ್ತಿಲ್ಲ. ಮತ್ತೆ ವಿಚಾರಣೆಗೆ ಬರೋದಕ್ಕೆ ಹೇಳಿದ್ದಾರೆ, ಬರುತ್ತೇನೆ ಎಂದು ಹೇಳಿದ್ದಾರೆ.
ಬಿಕ್ಲು ಶಿವನ ಜೊತೆಗಿನ ಭೂ ವಿವಾದ ಸಂಬಂಧ ಭೈರತಿ ಬಸವರಾಜ್ಗೆ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಬಿಕ್ಲು ಶಿವ ನಿಮ್ಮ ಮೇಲೆ ದೂರು ಕೊಟ್ಟಿರೋದು ಯಾಕೆ?, ಅತನಿಗೂ ನಿಮಗೂ ಭೂ ವಿವಾದ ಸಂಬಂಧ ಮಾತು ಕತೆಯಾಗಿತ್ತಾ?, ನೀವೂ ಅತನಿಗೆ ಹೆದರಿಸಲು ನಿಮ್ಮ ಅಪ್ತ ಜಗ್ಗನಿಗೆ ಹೇಳಿದ್ರಾ?, ಜಗ್ಗ ಅಂಡ್ ಟೀಂ ಯಾವಾಗಾದರೂ ನಿಮ್ಮನ್ನ ಭೇಟಿ ಆಗಿದ್ರಾ ಎಂದು ಪೊಲೀಸರು ಕೆಲವೊಂದು ಪ್ರಶ್ನೆ ಕೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ