ಬೆಂಗಳೂರಲ್ಲಿ ರೌಡಿ ಬಿಕ್ಲು ಶಿವನ ಬರ್ಬರ ಹತ್ಯೆ; ಮನೆ ಮುಂದೆಯೇ ಅಡ್ಡಗಟ್ಟಿ ಕೊಚ್ಚಿ ಕೊಲೆ

author-image
Ganesh
Updated On
ರೌಡಿ ಶೀಟರ್‌ ಬಿಕ್ಲು ಶಿವ ಕೊ*ಲೆ ಪ್ರಕರಣ; ಶಾಸಕ ಬೈರತಿ ಬಸವರಾಜ್ ವಿರುದ್ಧ FIR
Advertisment
  • ಹಲಸೂರು ಕೆರೆ ಬಳಿ ರೌಡಿಶೀಟರ್ ಭೀಕರ ಹತ್ಯೆ
  • ಶಿವಕುಮಾರ್​ ಅಲಿಯಾಸ್ ಬಿಕ್ಲು ಶಿವನನ್ನ ಕೊಚ್ಚಿ ಕೊಲೆ
  • ಗುರುತೇ ಸಿಗದ ಹಾಗೇ ಕೊಚ್ಚಿ ಹಾಕಿದ ದುಷ್ಕರ್ಮಿಗಳು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಕ್ತ ಚರಿತ್ರೆಗೆ ಅಂತ್ಯ ಅನ್ನೋದೆ ಇಲ್ವಾ? ಈ ಪ್ರಶ್ನೆಗೆ ಕಾರಣ ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಾಗ್ತಿರೋ ಕ್ರೈಂಗಳು. ನಿನ್ನೆ ರಾತ್ರಿ ಬೆಂಗಳೂರಿನ ಹಲಸೂರು ಕೆರೆ ಬಳಿ ರೌಡಿಶೀಟರ್​ ತಲೆ ಉರುಳಿದೆ. ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವನನ್ನ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದು, ಈ ಘಟನೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ.

ಹಲಸೂರು ಕೆರೆ ಬಳಿ ರೌಡಿಶೀಟರ್ ಭೀಕರ ಹತ್ಯೆ

ಸಮಯ ರಾತ್ರಿ 8.30. ಎಲ್ಲರೂ ತಮ್ಮ ತಮ್ಮ ಕೆಲಸ ಮುಗಿಸಿ ಸುಸ್ತಾಗಿ ಮನೆ ದಾರಿ ಹಿಡಿದಿದ್ರು. ಇದೇ ಸಮಯಕ್ಕೆ ಪ್ರಶಾಂತವಾಗಿದ್ದ ಹಲಸೂರು ಕೆರೆ ಬಳಿ ನೆತ್ತರ ಕೋಡಿ ಹರಿದಿದೆ. ವಾರ್​​ ಮೆಮೋರಿಯಲ್​ ಸರ್ಕಲ್, ಈ ಡೆಡ್ಲಿ ಮರ್ಡರ್​ಗೆ ಸಾಕ್ಷಿಯಾಗಿದೆ. ರಾಕ್ಷಸರಂತೆ ಬಂದ ದುಷ್ಕರ್ಮಿಗಳು ರೌಡಿಶೀಟರ್​​​​​​​​​ ಶಿವಕುಮಾರ್​​ ಅಲಿಯಾಸ್ ಬಿಕ್ಲು ಶಿವನನ್ನ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಮೆರಿಕ ಮೂಗು ತೂರಿಸಿದೆ.. ಪುಟಿನ್​​​ ಕುದಿಯುವಂತೆ ಮಾಡಿದ ಟ್ರಂಪ್..!

ಹೀಗೆ ರೌಡಿಶೀಟರ್ ಬಿಕ್ಲು ಶಿವ ಗುರುತೇ ಸಿಗದ ಹಾಗೇ ತಮ್ಮ ಮನೆಯ ಮುಂದೆಯೇ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಮನೆ ಹೊರಗಡೆ ನಿಂತಿದ್ದಾಗ ಏಕಾಏಕಿ ಕಾರಿನಲ್ಲಿ ಬಂದ ನಾಲ್ಕೈದು ದುಷ್ಕರ್ಮಿಗಳ ಗ್ಯಾಂಗ್​​​​​​​​, ರಕ್ತಬೀಜಾಸುರರಂತೆ ಬಿಕ್ಲು ಶಿವನನ್ನ ಕಾರಿನ ಮಧ್ಯೆ ಅಡ್ಡಗಟ್ಟಿ ಯಾರೂ ಊಹಿಸಿದ ರೀತಿಯಲ್ಲಿ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ. ಭಾರತೀನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಬಗ್ಗೆ ಮಾತ್ನಾಡಿದ ಜಂಟಿ ಪೊಲೀಸ್ ಆಯುಕ್ತ, ರಮೇಶ್ ಬಾನೋತ್ ಕೊಲೆಯಾದ ರೌಡಿಶೀಟರ್​​ ಬಿಕ್ಲು ಶಿವನ ಹಿಸ್ಟರಿ ರಿವೀಲ್​ ಮಾಡಿದ್ರು.

ಕೊಲೆಗೆ ನಿಖರ ಕಾರಣ ಪತ್ತೆ ಇನ್ನೂ ಪತ್ತೆಯಾಗಿಲ್ಲ. ಮೆಲ್ನೋಟಕ್ಕೆ ಹಳೆ ವೈಷ್ಯಮದ ಹಿನ್ನೆಲೆ ಕೊಲೆಯಾಗಿದೆ ಅನ್ನೋದು ಗೊತ್ತಾಗಿದೆ.. ಒಂದಂತೂ ಸತ್ಯ.. ರೌಡಿಸಂನಲ್ಲಿ ಎಂಟ್ರಿ ಅಷ್ಟೇ.. ನೋ ಎಕ್ಸಿಟ್ ಅನ್ನೋದಕ್ಕೆ ರೌಡಿಶೀಟರ್​ ಬಿಕ್ಲು ಶಿವನ ಮರ್ಡರ್ ಒಂದು​​ ನಿದರ್ಶನ.

ಇದನ್ನೂ ಓದಿ: ಬೆಂಗಳೂರಲ್ಲಿ No UPI ಪೇಮೆಂಟ್ಸ್​ ಅಂತಿದ್ದಾರೆ ವ್ಯಾಪಾರಿಗಳು.. ಸಣ್ಣಪುಟ್ಟ ವ್ಯವಹಾರಗಳಿಗೆ ಭಾರೀ ತೊಂದ್ರೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment