/newsfirstlive-kannada/media/post_attachments/wp-content/uploads/2024/08/MNG_MURDER.jpg)
ಮಂಗಳೂರು: ನಟೋರಿಯಸ್ ರೌಡಿಶೀಟರ್​​ನನ್ನ ಗ್ಯಾಂಗ್​ವೊಂದು ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ಮಂಗಳೂರು ಹೊರವಲಯದ ಕಲ್ಲಾಪು ಎಂಬಲ್ಲಿ ನಡೆದಿದೆ.
ಉಳ್ಳಾಲದ ಕಡಪ್ಪಾರ ಸಮೀರ್ ಕೊಲೆಯಾಗಿರುವ ರೌಡಿ ಶೀಟರ್. ಹೋಟೆಲ್​ಗೆ ತಾಯಿಯೊಂದಿಗೆ ಊಟಕ್ಕೆ ಬಂದಿದ್ದ. ಊಟ ಮುಗಿಸಿ ಹೋಟೆಲ್​​ನಿಂದ ಹೊರ ಬರುತ್ತಿದ್ದಂತೆ ದುಷ್ಕರ್ಮಿಗಳ ಗ್ಯಾಂಗ್​ ಸಮೀರ್​​ನನ್ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಎಸ್ಕೇಪ್ ಆಗಿದೆ.
ಕೊಲೆಯಾಗಿರುವ ರೌಡಿಶೀಟರ್​ ನಟೋರಿಯಸ್ ಟಾರ್ಗೆಟ್ ಇಲಿಯಾಸ್ ಹತ್ಯೆ ಕೇಸ್​ನ ಆರೋಪಿಯಾಗಿದ್ದ. ಮಂಗಳೂರು ಜೈಲಿನಲ್ಲಿ ಇರುವಾಗ ಸಹ ಕೈದಿಗಳು ದಾಳಿ ಮಾಡಿದ್ದರು. ಇದಾದ ಮೇಲೆ ವಾರದ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದನು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ