/newsfirstlive-kannada/media/post_attachments/wp-content/uploads/2024/03/rowdy-sheeter.jpg)
ಬೆಂಗಳುರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರೌಡಿ ಶೀಟರ್ ಕಂ ಸುಪಾರಿ ಕಿಲ್ಲರ್ ಆಗಿರೋ ದಿನೇಶ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಸುಪಾರಿ ಕಿಲ್ಲರ್ ಹತ್ಯೆಗೆ ಸ್ಕೆಚ್ ಹೇಗೆ ಹಾಕಲಾಗಿತ್ತು ಎಂಬ ಅಸಲಿ ವಿಚಾರ ಬೆಳಕಿಗೆ ಬಂದಿದೆ.
/newsfirstlive-kannada/media/post_attachments/wp-content/uploads/2024/03/rowdy-sheeter-1.jpg)
ಇದನ್ನೂ ಓದಿ: BREAKING: ಬೆಂಗಳೂರಲ್ಲಿ ಹರಿದ ನೆತ್ತರು.. ರೌಡಿ ಶೀಟರ್, ಸುಪಾರಿ ಕಿಲ್ಲರ್ ಬರ್ಬರ ಹತ್ಯೆ
ಕೊಲೆಯಾದ ದಿನೇಶ್ ಎದುರಾಳಿ ತಂಡದ ರೌಡಿ ಶೀಟರ್ ದಿಲೀಪ್​ ಹತ್ಯೆಗೆ ಸ್ಕೆಚ್ ಹಾಕಿ ತನ್ನ ಟೀಮ್​ ಅನ್ನು ರೆಡಿ ಮಾಡಿಕೊಂಡಿದ್ದ. ಆ ಹಿನ್ನೆಲೆಯಲ್ಲಿ ಸತೀಶ್, ಅರವಿಂದ್, ಗೌತಮ್ ಸೇರಿ ಒಟ್ಟು 10 ಜನರನ್ನು ಕರೆಸಿಕೊಂಡಿದ್ದ. ಆದರೆ ಆ 10 ಜನರು ದಿನೇಶ್​​ನ ವಿರೋಧಿಯಾಗಿರೋ ರೌಡಿ ದಿಲೀಪ್ ಜೊತೆಗೆ ಸಂಪರ್ಕದಲ್ಲಿ ಇದ್ದರು. ವಿಪರ್ಯಾಸ ಎಂದರೆ ಯಾವ ಹುಡುಗರನ್ನು ಕರೆಸಿಕೊಂಡಿದ್ದನೋ ಅದೇ ಗ್ಯಾಂಗ್​​ನಿಂದ​ ದಿನೇಶ್ ಕೊಲೆಯಾಗಿದ್ದಾನೆ.
/newsfirstlive-kannada/media/post_attachments/wp-content/uploads/2024/03/Bangalore-Rowdy-Sheeter-Murder.jpg)
ಇದನ್ನೂ ಓದಿ: ಮಚ್ಚಿನಲ್ಲಿ ಕೊಚ್ಚಿ ಕೊಲೆ ಮಾಡಿದ ಹಂತಕರು.. ಬೆಂಗಳೂರಲ್ಲಿ ರೌಡಿಶೀಟರ್ ದಿನೇಶ್ ಬರ್ಬರ ಹತ್ಯೆ!
ರೌಡಿ ಶೀಟರ್ ಕಂ ಸುಪಾರಿ ಕಿಲ್ಲರ್ ದಿನೇಶ್​ ಕೊಲೆ ಸಂಬಂಧ 12 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳ ಬಂಧನಕ್ಕೆ ಅಧಿಕಾರಿಗಳು ನಾಲ್ಕು ತಂಡಗಳ ರಚನೆ ಮಾಡಿಕೊಂಡಿದ್ದರು. ಬಳಿಕ ಅಧಿಕಾರಿಗಳ ಪ್ಲಾನ್​ ಪ್ರಕಾರ ಬಂಧಿತ ಆರೋಪಿಗಳಲ್ಲಿ ಇಬ್ಬರು ರೌಡಿ ಶೀಟರ್​ಗಳು ಇರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳ ವಿರುದ್ಧ ಕೊತ್ತನೂರು, ಬಾಣಸವಾಡಿ, ರಾಮಮೂರ್ತಿ ನಗರ ಠಾಣೆಯಲ್ಲಿ ಕೇಸ್​ಗಳು ದಾಖಲಾಗಿವೆ. ಸದ್ಯ ಬಾಣಸವಾಡಿ ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us