RCB ನಯಾ ಶೇರ್ ಯಾರು.. ಕೊಹ್ಲಿ ಅಲ್ಲ, ಬೆಂಗಳೂರು ಫ್ರಾಂಚೈಸಿ ಸೂಚಿಸಿದ ಹೆಸರು ಯಾರದ್ದು?

author-image
Bheemappa
Updated On
RCB ನಯಾ ಶೇರ್ ಯಾರು.. ಕೊಹ್ಲಿ ಅಲ್ಲ, ಬೆಂಗಳೂರು ಫ್ರಾಂಚೈಸಿ ಸೂಚಿಸಿದ ಹೆಸರು ಯಾರದ್ದು?
Advertisment
  • KKR ವಿರುದ್ಧ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು
  • ನಯಾ ಶೇರ್ ಎಂದು ಬೆಂಗಳೂರು ಫ್ರಾಂಚೈಸಿ ಹೇಳಿದ್ದು ಯಾರಿಗೆ?
  • ರಾಯಲ್ ಚಾಲೆಂಜರ್ಸ್​​ ತಂಡದಲ್ಲಿ ಹೊಸ ಸಿಂಚನ, ಹೊಸ ಅಲೆ

ಆರಂಭಿಕ ಪಂದ್ಯದಲ್ಲೇ ಹಾಲಿ ಚಾಂಪಿಯನ್​ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಬಗ್ಗು ಬಡಿದಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಹೊಸ ಸಿಂಚನ, ಹೊಸ ಅಲೆ ಎದ್ದಿದೆ. ಈ ಬಾರಿ ಟ್ರೋಫಿ ಗೆಲ್ಲುವ ಉತ್ಸಾಹ ಹೆಚ್ಚಾಗಿ ಕಾಣುತ್ತಿದೆ. ಇದಕ್ಕೆಲ್ಲಾ ಕಾರಣ ಕೆಕೆಆರ್​ ವಿರುದ್ಧ ಆರ್​ಸಿಬಿಯ ಪರ್ಫಾಮೆನ್ಸ್​ ಆಗಿದೆ. ಸದ್ಯ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಯಾ ಶೇರ್ (ಸಿಂಹ) ಯಾರು ಗೊತ್ತಾ?.

ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಆರ್​ಸಿಬಿ ತಂಡದಲ್ಲಿ ಸಂತಸದ ಕ್ಷಣಗಳು ಮೂಡಿವೆ. ಏಕೆಂದರೆ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮೇಲೆ ಬ್ಯಾಟಿಂಗ್​ಗೆ ಬಂದ ಕೆಕೆಆರ್ ದೊಡ್ಡ ಮಟ್ಟದ ರನ್​ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದ್ರೆ ಆರ್​ಸಿಬಿ ಬೌಲರ್ಸ್ ಅದಕ್ಕೆ ದಾರಿ ಮಾಡಿ ಕೊಡಲಿಲ್ಲ. ಆರ್​ಸಿಬಿ ಬೌಲಿಂಗ್ ಮುಂದೆ ಕೆಕೆಆರ್ ಬ್ಯಾಟರ್ಸ್​ ವಿಲ ವಿಲ ಒದ್ದಾಡಿದರು.

ಇದನ್ನೂ ಓದಿ: ವಿರಾಟ್ ಕೊಹ್ಲಿ RCB ಗೆಲುವಿಗೆ ಕಾರಣ ಅಲ್ಲವೇ ಅಲ್ಲ.. ಕೆಕೆಆರ್ ಕ್ಯಾಪ್ಟನ್ ರಹಾನೆ ಅಚ್ಚರಿ ಹೇಳಿಕೆ!

publive-image

174 ರನ್​ಗಳ ಟಾರ್ಗೆಟ್ ಪಡೆದ ಆರ್​ಸಿಬಿ ಆರಂಭದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್​ಗೆ ಮುಂದಾಯಿತು. ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಭರ್ಜರಿ ಓಪನಿಂಗ್ ಪಡೆದುಕೊಂಡು ಕೆಕೆಆರ್ ಬೌಲರ್ಸ್​ಗಳನ್ನ ಬೆಂಡೆತ್ತಿದರು. ಸಾಲ್ಟ್​ ಕೇವಲ 31 ಎಸೆತದಲ್ಲಿ 9 ಬೌಂಡರಿ, 2 ಮನ ಮೋಹಕ ಸಿಕ್ಸರ್​ ಸಮೇತ 56 ರನ್​ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದು ಕೆಕೆಆರ್​ಗೆ ನುಂಗಲಾರದ ತುತ್ತಾಗಿತ್ತು. ಇದಾದ ಮೇಲೆ ಕೊಹ್ಲಿ ಕೂಡ 36 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್​ನಿಂದ 59 ರನ್​ ಸಿಡಿಸಿದರು. ಈ ಇಬ್ಬರ ಆರಂಭಿಕ ಬ್ಯಾಟಿಂಗ್​ನಿಂದ 175 ರನ್​ಗಳ ಗುರಿಯನ್ನು ಬೇಗನೇ ಮುಟ್ಟಲು ಸಾಧ್ಯವಾಯಿತು.

ಸದ್ಯ ಈ ಕುರಿತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್​ ಒಂದನ್ನ ಹಂಚಿಕೊಂಡಿದೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ನಯಾ ಶೇರ್ ಆಫ್​ ದೀ ಮ್ಯಾಚ್​ ಫಿಲ್ ಸಾಲ್ಟ್​ ಎಂದು ಹೇಳಿದೆ. ಆರ್​ಸಿಬಿಯ ಡೆಬ್ಯು ಪಂದ್ಯದಲ್ಲೇ 181 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ, ದಾಖಲೆಯ ಹಾಫ್​ಸೆಂಚುರಿ ಸಿಡಿಸಿ ಟಾರ್ಗೆಟ್​ ಅನ್ನು ಬೇಗನೇ ರೀಚ್ ಮಾಡಲು ಸಾಲ್ಟ್​ ಬಹು ಮುಖ್ಯ ಕಾರಣ ಆಗಿದ್ದಾರೆ ಎಂದು ಆರ್​ಸಿಬಿ ಫ್ರಾಂಚೈಸಿ ಹೇಳಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment