newsfirstkannada.com

×

ಐಪಿಎಲ್​​ನಲ್ಲಿ ಸತತ ಹೀನಾಯ ಸೋಲು, RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!

Share :

Published April 19, 2024 at 9:45am

Update April 19, 2024 at 9:47am

    ಸತತ 5 ಪಂದ್ಯಗಳಲ್ಲಿ ಹೀನಾಯ ಸೋಲುಂಡ ಆರ್​​ಸಿಬಿ

    7 ಪಂದ್ಯ, 6 ಸೋಲು, 1 ಗೆಲುವು.. ಕಪ್​ ಕನಸೇ!

    ಟಿ20 ತಂಡಕ್ಕೆ ‘ಟೆಸ್ಟ್​​ ಸ್ಪೆಷಲಿಸ್ಟ್’​ ಬ್ಯಾಟಿಂಗ್​ ಕೋಚ್!

ಐಪಿಎಲ್​ ಸೀಸನ್​ 17ರಲ್ಲಿ ಆರ್​​​ಸಿಬಿಯ ಹೀನಾಯ ಸೋಲಿಗೆ ಬ್ಯಾಟ್ಸ್​​ಮನ್​ಗಳು ಕಾರಣ. ಬೌಲರ್​​ಗಳು ಕಾರಣ. ಟೀಮ್​ ಮ್ಯಾನೇಜ್​ಮೆಂಟ್​ ಕಾರಣ. ಹೀಗೆ ಸಾಕಷ್ಟು ಕಥೆ ಕೇಳಿರ್ತಿರಾ. ನಿಜಕ್ಕೂ ರಾಯಲ್​ ಚಾಲೆಂಜರ್ಸ್​​ನ ದುಸ್ಥಿತಿಗೆ ಕಾರಣ ಈ ಇಬ್ಬರು.

ಆಡಿದ 7 ಪಂದ್ಯಗಳಲ್ಲಿ ಜಸ್ಟ್​ 1 ಪಂದ್ಯ ಗೆದ್ದಿರುವ ಆರ್​​ಸಿಬಿ, ಪಾಯಿಂಟ್ಸ್​​ ಟೇಬಲ್​ನಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದೆ. ನೀಡಿರುವ ಪರ್ಫಾಮೆನ್ಸ್​ ನೋಡಿದ್ರೆ ಮುಂದಿನ ಪಂದ್ಯಗಳಲ್ಲಿ ಗೆಲ್ಲುತ್ತೆ ಅನ್ನೋ ನಿರೀಕ್ಷೆಯೂ ಇಲ್ಲ ಬಿಡಿ. ಈ ಹೀನಾಯ ಪರ್ಫಾಮೆನ್ಸ್​ನ ಬೆನ್ನಲ್ಲೇ, ಮ್ಯಾನೇಜ್​ಮೆಂಟ್​ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ. ಹೌದು.. ಆರ್​​ಸಿಬಿ ತಂಡದ ಸೋಲಿನಲ್ಲಿ ಮ್ಯಾನೇಜ್​ಮೆಂಟ್​ ಪಾತ್ರ ಪ್ರಮುಖವಾದದ್ದು. ಅದ್ರ ಜೊತೆಗೆ ಈ ಇಬ್ಬರನ್ನ ಆಯ್ಕೆ ಮಾಡಿದ್ದು ಕೂಡ ದುಸ್ಥಿತಿಗೆ ಕಾರಣ.

ಇದನ್ನೂ ಓದಿ:11 ಬಾರಿ ಚಾಕು ಇರಿದು ನೇಹಾ ಹಿರೇಮಠ್ ಕೊಲೆ; ಲವ್ ಜಿಹಾದ್ ಅನುಮಾನ, ತನಿಖೆಗೆ ಆಗ್ರಹ

RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!
ನೀಲ್​ ಮೆಕೆಂಝಿ ಆರ್​​ಸಿಬಿಯ ಬ್ಯಾಟಿಂಗ್​ ಕೋಚ್​.. ಆ್ಯಡಂ ಗ್ರಿಫಿತ್​ ಆರ್​​ಸಿಬಿಯ ಬೌಲಿಂಗ್​​​ ಕೋಚ್. ಆರ್​ಸಿಬಿ ಸೋಲಿಗೆ ಇವರಿಬ್ಬರು ಕಾರಣ ಎಂಬ ಕಿಡಿ ಹೊತ್ತಿಕೊಂಡಿದೆ. ಬ್ಯಾಟಿಂಗ್​ ಕೋಚ್​ ನೀಲ್​ ಮೆಕೆಂಝಿ ಬೇರೆ ಯಾರೂ ಅಲ್ಲ. ಸೌತ್​ ಆಫ್ರಿಕಾ ತಂಡದ ಮಾಜಿ ‘ಟೆಸ್ಟ್’​ ಕ್ರಿಕೆಟಿಗ. ಟೆಸ್ಟ್​ ಸ್ಪೆಷಲಿಸ್ಟ್​​ನ ತಂದು ಟಿ20 ಬ್ಯಾಟಿಂಗ್​ ಕೋಚ್​ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ? ಮುಂಬೈ ಇಂಡಿಯನ್ಸ್​ ತಂಡದಲ್ಲಿ ಕಿರನ್ ಪೊಲಾರ್ಡ್​​, ಸಿಎಸ್​ಕೆಯಲ್ಲಿ ಮೈಕಲ್​ ಹಸ್ಸಿಯಂತಹ ಟಿ20 ಲೆಜೆಂಡ್ಸ್​ ಬ್ಯಾಟಿಂಗ್ ಕೋಚ್​ ಆಗಿದ್ದಾರೆ. ಆದ್ರೆ ನಮ್ಮ ಆರ್​​ಸಿಬಿ ಡಿಫರೆಂಟ್. ಅದ್ಕೆ ಟೆಸ್ಟ್​ ಸ್ಪೆಷಲಿಸ್ಟ್​ ಕರೆದುಕೊಂಡು ಬಂದು ಟಿ20 ತಂಡಕ್ಕೆ ಬ್ಯಾಟಿಂಗ್​ ಪಾಠ ಮಾಡೋಕೆ ಬಿಟ್ಟಿದ್ದಾರೆ.

ಇದನ್ನೂ ಓದಿ: ‘ಮಗಳ ಸಾವಿಗೆ ನ್ಯಾಯ ಕೊಡಿ..’ ನೇಹಾ ಹಿರೇಮಠ್ ತಾಯಿ ಕಣ್ಣೀರು

ಕೊಹ್ಲಿ, ಮ್ಯಾಕ್ಸ್​ವೆಲ್​​, ಡುಪ್ಲೆಸಿಗೆ ಏನ್​ ಟಿಪ್ಸ್​ ಕೊಡೋಕೆ ಸಾಧ್ಯ?
ಟೆಸ್ಟ್​​ ಸ್ಪೆಷಲಿಸ್ಟ್​ ನೀಲ್​ ಮೆಕೆಂಝಿ ವೈಟ್​ ಬಾಲ್​ ಕ್ರಿಕೆಟ್​ ಆಡಿಲ್ಲ ಅಂತಿಲ್ಲ. ಈತ ಒನ್​ ಡೇ ಆಡಿದ್ದಾರೆ. ಅಲ್ಲಿ ಸ್ಟ್ರೈಕ್​ರೇಟ್​ ಎಷ್ಟಿದೆ ಗೊತ್ತಾ.? 70ಕ್ಕಿಂತ ಕಡಿಮೆ. ಕೇವಲ 2 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರೋ ಅನುಭವ ಈತನಿಗಿದೆ. ಇಂತಾ ಟ್ರ್ಯಾಕ್​ ರೆಕಾರ್ಡ್​ ಹೊಂದಿರೋ ನೀಲ್​ ಮೆಕೆಂಝಿ, 100ಕ್ಕೂ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯ ಆಡಿರೋ ವಿರಾಟ್​ ಕೊಹ್ಲಿ, ಗ್ಲೇನ್​ ಮ್ಯಾಕ್ಸ್​ವೆಲ್, ಈಗಾಗಲೇ ಟಿ20 ಲೆಜೆಂಡ್​​ಗಳಾಗಿ ಬೆಳೆದಿರೋ ಫಾಫ್ ಡುಪ್ಲೆಸಿ, ದಿನೇಶ್​ ಕಾರ್ತಿಕ್​ರಂತವರಿಗೆ ಏನು ತಾನೆ ಹೇಳಿಕೊಡೋಕೆ ಸಾಧ್ಯ ಹೇಳಿ?

ಇದನ್ನೂ ಓದಿ:ಮಕ್ಕಳಿಗೆ ತುಂಬಾನೇ ಡೇಂಜರ್ ಸೆರೆಲಾಕ್; ನಿಮ್ಮ ಮಗುವಿಗೆ ಕೊಡುವ ಮುನ್ನ ಈ ಸ್ಟೋರಿ ಓದಿ​..!

ಬೌಲಿಂಗ್​ ಕೋಚ್​​ ಇಂಟರ್​ನ್ಯಾಷನಲ್​ ಪಂದ್ಯವನ್ನೇ ಆಡಿಲ್ಲ
ಆ್ಯಡಂ ಗ್ರಿಫಿತ್.. ಈತ​ ಆಸ್ಟ್ರೇಲಿಯನ್​ ಡೊಮೆಸ್ಟಿಕ್​ ಕ್ರಿಕೆಟರ್​​.. ಅಂತಾರಾಷ್ಟ್ರೀಯ ಪಂದ್ಯ ಆಡಿರೋ ಅನುಭವವೇ ಇಲ್ಲ.. ಫಸ್ಟ್​ ಕ್ಲಾಸ್​ ಮತ್ತು ಲಿಸ್ಟ್​ ಎ ಕ್ರಿಕೆಟ್​ ಆಡಿರೋ ಈತನ ಸಾಧನೆ ಅಷ್ಟಕಷ್ಟೇ. ಈತ ಆರ್​​ಸಿಬಿ ಬೌಲಿಂಗ್​ ಕೋಚ್​​. ಇಂಟರ್​ನ್ಯಾಷನಲ್​ ಲೆವೆಲ್​ನಲ್ಲಿ ಕ್ರಿಕೆಟ್​ ಆಡೇ ಇರದ ಈತ ಆರ್​​​ಸಿಬಿಯಲ್ಲಿರೋ ಬೌಲರ್ಸ್​​ಗೆ ಏನ್​ ಪಾಠ ಮಾಡೋಕೆ ಸಾಧ್ಯ?

ಆ್ಯಡಂ ಗ್ರಿಫಿತ್​.. ಟೀಮ್​ಗೆ ಬಂದು​ ಸುಮಾರು 3 ವರ್ಷ ಆಯ್ತು. ಆದ್ರೆ ಏನ್​​ ಪ್ರಯೋಜನ. ಆರ್​​ಸಿಬಿ ಪ್ರತಿ ಸೀಸನ್​ ಸೋಲೋದಕ್ಕೆ ಕಾರಣಾನೆ ಬೌಲಿಂಗ್​ ವೈಫಲ್ಯ. ಪರ್ಫಾಮೆನ್ಸ್​ ಬಿಟ್​ ಬಿಡಿ. ಆಕ್ಷನ್​ನಲ್ಲಿ ಒಳ್ಳೆ ಬೌಲರ್​​ನ ಕೇಳೋ ರೈಟ್ಸ್ ಈ ಬೌಲಿಂಗ್​ ಕೋಚ್​​ಗಿದೆ. ಮ್ಯಾನೇಜ್​ಮೆಂಟ್​ಗೆ ಪಿಕ್​ ಮಾಡಿರುವ ಬೌಲರ್ಸ್​ ನೋಡಿದ್ರೆ, ಈತ ಆಕ್ಷನ್​ ವೇಳೆ ತನಗೆ ಬೇಕಾದ ಬೌಲರ್​ ಬಗ್ಗೆ ಹೇಳಿರೋದು ಅನುಮಾನವೇ.

ಐಪಿಎಲ್​​ ಅಂದ್ರೆ ಫಾರಿನ್​ ಕೋಚ್​​ಗಳಿಗೆಲ್ಲಾ ಒಂತರಾ ಟ್ರಿಪ್​ಗೆ ಬಂದು ಹೋದಂಗೆ. 45 ದಿನ ಬರ್ತಾರೆ. ಐಷಾರಾಮಿ ಹೋಟೆಲ್​​, ಅದ್ದೂರಿ ಟ್ರೀಟ್​​ಮೆಂಟ್​, ಜಾಮ್​ ಜುಮ್​ ಅಂತಾ ದಿನ ಕಳೀತಾರೆ. ತಮ್ಮ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಿಸಿಕೊಂಡು ಹೋಗ್ತಾರೆ. ಮುಂದಿನ ವರ್ಷ ಅವ್ರು ಇರ್ತಾರೋ ಇಲ್ವೋ ಅವ್ರಿಗೆ ಗೊತ್ತಿರಲ್ಲ. ಅದ್ಕೆ ಸಿಕ್ಕ ಅವಕಾಶದಲ್ಲಿ ಏನ್​ ಬೇಕೋ ಅದು ಮಾಡ್ಕೊಂದು ಹೋಗ್ತಾರೆ. ಟೀಮ್​ ಪರ್ಫಾಮೆನ್ಸ್​ ಕಟ್ಟಿಕೊಂಡು ಅವ್ರಿಗೆ ಏನ್​ ಆಗ್ಬೇಕು. ಇವ್ರನಲ್ಲ. ಇಂತವರನ್ನ ಸೆಲೆಕ್ಟ್​​ ಮಾಡಿ. ಆ ಜಾಗದಲ್ಲಿ ಕೂರಿಸಿರೋ ಆ ಮ್ಯಾನೇಜ್​ಮೆಂಟ್​​ನವರು ಅವರು ಎಂತಹ ಬುದ್ಧಿವಂತರಿರಬೇಕು ಅಲ್ವಾ?

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಐಪಿಎಲ್​​ನಲ್ಲಿ ಸತತ ಹೀನಾಯ ಸೋಲು, RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!

https://newsfirstlive.com/wp-content/uploads/2024/04/RCB-COACH.jpg

Load More