ರಾಜಸ್ಥಾನ್ ವಿರುದ್ಧ ಆರ್​ಸಿಬಿ ರೋಚಕ ಗೆಲುವು.. ಮೂರು ಸಂಭ್ರಮಕ್ಕೆ ಕಾರಣವಾಯ್ತು ಈ ವಿಕ್ಟರಿ

author-image
Ganesh
Updated On
ಬೆಂಗಳೂರಲ್ಲಿ ಆರ್​ಸಿಬಿ ಮುಂದಿನ ಮ್ಯಾಚ್​ ರದ್ದು.. ಮತ್ತೆ ಎಲ್ಲಿ ನಡೆಯುತ್ತೆ..?
Advertisment
  • ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿಗೆ ಗೆಲುವು
  • ಆರ್​ಸಿಬಿಗೆ ತವರಿನಲ್ಲಿ ಗೆಲ್ಲುವ ಭರವಸೆ ಮತ್ತೆ ಚಿಗುರಿದೆ
  • ಪ್ಲೇ-ಆಫ್​ ರೇಸ್​ನಲ್ಲಿ ಪ್ರಬಲ ಸ್ಪರ್ಧಿಯಾದ ಆರ್​ಸಿಬಿ

ಆರ್​ಸಿಬಿ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಈ ವರ್ಷ ಐಪಿಎಲ್​​ನಲ್ಲಿ ಆರ್​ಸಿಬಿ ನೀಡುತ್ತಿರುವ ಪ್ರದರ್ಶನ. 9 ಪಂದ್ಯಗಳಲ್ಲಿ 6 ಮ್ಯಾಚ್​ ಗೆದ್ದು, ಪ್ಲೇ-ಆಫ್ ರೇಸ್​​ನ ಪ್ರಬಲ ಸ್ಪರ್ಧಿಯಾಗಿದೆ.

ಮೂರು ಸಂಭ್ರಮದಲ್ಲಿ ಆರ್​ಸಿಬಿ

ಏಪ್ರಿಲ್ 24 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಎದುರಿಸಿತು. ಆರ್​ಆರ್ ವಿರುದ್ಧ 11 ರನ್​ಗಳ ರೋಚಕ ಗೆಲುವು ಪಡೆದಿರುವ ಆರ್​ಸಿಬಿ, ಪ್ಲೇ-ಆಫ್ ಬಗ್ಗೆ ಪ್ಲಾನ್ ಮಾಡುತ್ತಿದೆ. ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.

ತವರಿನಲ್ಲಿ ಮೊದಲ ಗೆಲುವು

ಆರ್​​ಸಿಬಿಗೆ ಹಾಗೂ ಆರ್​​ಸಿಬಿ ಅಭಿಮಾನಿಗಳ ಖುಷಿಗೆ ಮೊದಲ ಕಾರಣ ಎಂ.ಚಿನ್ನಸ್ವಾಮಿಯಲ್ಲಿ ಸಿಕ್ಕಿರುವ ಮೊದಲ ಗೆಲುವು. 18ನೇ ಆವೃತ್ತಿಯಲ್ಲಿ ಒಟ್ಟು ನಾಲ್ಕು ಪಂದ್ಯವನ್ನು ಆಡಿರುವ ಆರ್​ಸಿಬಿ, ಹ್ಯಾಟ್ರಿಕ್ ಸೋಲುಂಡು ಫ್ಯಾನ್ಸ್​ಗೆ ನಿರಾಸೆ ಮೂಡಿಸಿತ್ತು. ಆದರೆ, ರಾಜಸ್ಥಾನ್ ವಿರುದ್ಧ ಗೆಲ್ಲುವ ಮೂಲಕ ಅಭಿಮಾನಿಗಳ ಬೆಂಬಲಕ್ಕೆ ಗೆಲುವಿನ ಉಡುಗೊರೆ ನೀಡಿದೆ.

ಇದನ್ನೂ ಓದಿ: ಆರ್​ಆರ್ ವಿರುದ್ಧ ಗೆದ್ದ ಬೆನ್ನಲ್ಲೇ ಆರ್​ಸಿಬಿಗೆ ಮತ್ತೊಂದು ಖುಷಿ ಸುದ್ದಿ; ಫ್ಯಾನ್ಸ್ ಖುಷ್..!

publive-image

ಪಾಯಿಂಟ್ಸ್ ಪಟ್ಟಿ

ಪಾಯಿಂಟ್ಸ್​ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇರುತ್ತಿದ್ದ ಆರ್​ಸಿಬಿ ದಿಢೀರ್ ಅಂತಾ ಕುಸಿದಿತ್ತು. ಮುಂಬೈ ಇಂಡಿಯನ್ಸ್ ಸತತ ಗೆಲುವಿನ ಪರಿಣಾಮ ಐದನೇ ಸ್ಥಾನಕ್ಕೆ ಕುಸಿದಿತ್ತು. ಆದರೆ, ರಾಜಸ್ಥಾನ್ ವಿರುದ್ಧ ಗೆಲ್ಲುವ ಮೂಲಕ ಮತ್ತೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಪ್ಲೇ-ಆಫ್ ಭರವಸೆ

ಸದ್ಯ ಆರ್​ಸಿಬಿ ಸತತವಾಗಿ ಪಂದ್ಯವನ್ನು ಗೆದ್ದುಕೊಂಡು ಬರುತ್ತಿದೆ. ಹೀಗಾಗಿ ಈ ಬಾರಿ ಆರ್​ಸಿಬಿ ಪ್ಲೇ ಆಫ್​ ಪ್ರವೇಶ ಮಾಡಲಿದೆ. ಅಲ್ಲಿ ಗೆದ್ದು, ಫೈನಲ್​ಗೂ ಎಂಟ್ರಿಯಾಗಿ ಕಪ್ ಗೆದ್ದುಕೊಂಡು ಬರಲಿ ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ. ಅದಕ್ಕೆ ರಾಜಸ್ಥಾನ ವಿರುದ್ಧದ ಗೆಲುವು ಮತ್ತಷ್ಟು ಬೂಸ್ಟ್ ನೀಡಿದೆ. ಇನ್ನು, ಆರ್​ಸಿಬಿ ಪ್ಲೇ-ಆಫ್ ಪ್ರವೇಶ ಮಾಡಬೇಕು ಅಂದರೆ ಇನ್ನುಳಿದಿರುವ ಐದು ಪಂದ್ಯಗಳಲ್ಲಿ ಮೂರು ಮ್ಯಾಚ್ ಗೆಲ್ಲಲೇಬೇಕಿದೆ.

ಇದನ್ನೂ ಓದಿ: ಪ್ಲೇ-ಆಫ್​ ರೇಸ್​ನಲ್ಲಿ ಒಟ್ಟು 6 ತಂಡಗಳು.. ಯಾವ್ಯಾವ ತಂಡದ ಲಕ್ ಬದಲಾಗಬೇಕು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment