RCB ಹೈಕೋರ್ಟ್​ ಮೆಟ್ಟಿಲೇರಿದ್ದು ಯಾಕೆ.. ಊಬರ್ ಕಂಪನಿ ಮಾಡಿದ್ದಾದರೂ ಏನು?

author-image
Bheemappa
Updated On
RCB ಹೈಕೋರ್ಟ್​ ಮೆಟ್ಟಿಲೇರಿದ್ದು ಯಾಕೆ.. ಊಬರ್ ಕಂಪನಿ ಮಾಡಿದ್ದಾದರೂ ಏನು?
Advertisment
  • ಹೈದ್ರಾಬಾದ್ ಸ್ಫೋಟಕ ಬ್ಯಾಟ್ಸ್​ಮನ್​ ಮಾಡಿದ್ದಾದರೂ ಏನು?
  • ಹೈ-ಕೋರ್ಟ್​​ಗೆ ಆರ್​ಸಿಬಿ ಫ್ರಾಂಚೈಸಿ ಅರ್ಜಿ ಸಲ್ಲಿಕೆ ಮಾಡಿದೆ
  • ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಅವಮಾನ ಆಯಿತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಅಂಗಳದಲ್ಲಿ ಬಿಟ್ಟು ಬೇರೆ ಮೈದಾನದಲ್ಲಿ ಅತ್ಯದ್ಭುತವಾದ ಪ್ರದರ್ಶನ ನೀಡುತ್ತಿದೆ. ರಜತ್ ಪಾಟಿದಾರ್​ಗೆ ಮನೆಯ ನೆಲವೇ ಆಗಿ ಬರುತ್ತಿಲ್ಲ. ಇದು ಹೀಗಿದ್ರೆ, ಅತ್ತ ಆರ್​ಸಿಬಿ ಫ್ರಾಂಚೈಸಿಯೂ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದೆ.

ಇತ್ತೀಚೆಗೆ ಸನ್​ರೈಸರ್ಸ್​ ಹೈದ್ರಾಬಾದ್​ ತಂಡದ ಸ್ಫೋಟಕ ಬ್ಯಾಟ್ಸ್​ಮನ್​ ಓಪನರ್​ ಟ್ರಾವಿಸ್​ ಹೆಡ್ ಅವರು ಜಾಹೀರಾತು ಒಂದರಲ್ಲಿ ನಟಿಸಿದ್ದರು. ಈ ಜಾಹೀರಾತನ್ನು ಪ್ರಸಿದ್ಧ ಟ್ಯಾಕ್ಸಿ ಕಂಪನಿಯಾದ ಊಬರ್ ಸಂಸ್ಥೆ ಮಾಡಿರೋದು. ಆದರೆ ಈ ಜಾಹೀರಾತಿನಲ್ಲಿ ಬೆಂಗಳೂರು ತಂಡ ಅಂದರೆ ಆರ್​ಸಿಬಿಯ ಕುರಿತು ಅವಹೇಳನ ಮಾಡಲಾಗಿದೆ ಎಂದು ಹೇಳಲಾಗಿದೆ.

ಊಬರ್ ಕಂಪನಿ ಯೂಟ್ಯೂಬ್​ ಜಾಹೀರಾತು ಒಂದರಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಅವಹೇಳನ ಮಾಡಲಾಗಿದೆ ಎಂದು ಫ್ರಾಂಚೈಸಿ ಆರೋಪ ಮಾಡಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಹೈಕೋರ್ಟ್​​ಗೆ ಆರ್​ಸಿಬಿ ಫ್ರಾಂಚೈಸಿ ಅರ್ಜಿ ಸಲ್ಲಿಕೆ ಮಾಡಿತ್ತು. ಇದನ್ನು ಏಪ್ರಿಲ್ 17 ರಂದು ದೆಹಲಿ ಹೈಕೋರ್ಟ್​ ವಿಚಾರಣೆ ಮಾಡಿದೆ. ನ್ಯಾಯಾಧೀಶ ಸೌರಭ್ ಬ್ಯಾನರ್ಜಿ ಅವರು ಆದೇಶವನ್ನು ಕಾಯ್ದಿರಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗನ ಬೌಲಿಂಗ್​​​ ಬಲಕ್ಕೆ ಡೆಲ್ಲಿ ವಿಚಲಿತ.. ಆದ್ರೂ ಬಿಗ್​ ಟಾರ್ಗೆಟ್​ ಕೊಟ್ಟ ಕ್ಯಾಪಿಟಲ್ಸ್​

publive-image

ಹೈದ್ರಾಬಾದ್​ ತಂಡದ ಸ್ಫೋಟಕ ಬ್ಯಾಟರ್ ಆಗಿರುವ ಟ್ರಾವಿಸ್ ಹೆಡ್ ಅವರು ಬಡ್ಡೀಸ್​ ಇನ್ ಬೆಂಗಳೂರು ಎನ್ನುವ ಯೂಟ್ಯೂಬ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಊಬರ್​ ತಮ್ಮ ಯೂಟ್ಯೂಬ್​ನಲ್ಲಿ ಹಂಚಿಕೊಂಡಿತ್ತು. ವಿಡಿಯೋದಲ್ಲಿ ಸ್ಟೇಡಿಯಂನ ಬೋರ್ಡ್​ನಲ್ಲಿ ಸ್ಟ್ರೇ ಪೈಂಟ್ ಉಪಯೋಗಿಸಿ ಹೆಡ್​, ರಾಯಲ್ಲಿ ಚಾಲೆಂಜ್ಡ್​ ಬೆಂಗಳೂರು ಎಂದು ಚೇಂಜ್ ಮಾಡುತ್ತಾರೆ. ಇದು ವಿಡಿಯೋದಲ್ಲಿ ಹೀಗೆ ಇದೆ.

ಹೀಗಾಗಿ ತನ್ನ ಟ್ರೇಡ್​ ಮಾರ್ಕ್​ ಘೋಷಣೆಯನ್ನು ಅನಧಿಕೃತವಾಗಿ ಉಪಯೋಗಿಸಲಾಗಿದೆ ಹಾಗೂ ಅದನ್ನು ಸ್ಟ್ರೇ ಪೈಂಟ್ ಬಳಸಿ ವಿರೂಪ ಮಾಡಲಾಗಿದೆ ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ದೆಹಲಿ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದೆ. ಸದ್ಯ ಈ ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ.


">April 17, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment