newsfirstkannada.com

ಇನ್ನೆಷ್ಟು ದಿನ ಈ ಸಲ ಕಪ್‌ ನಮ್ದೇ ಅನ್ನೋದು.. ಲಾಂಗ್ ಎತ್ತಿದ ಶಿವಣ್ಣ; RCB ಫ್ಯಾನ್ಸ್‌ಗೆ ಅರ್ಥ ಆಯ್ತಾ?

Share :

Published March 16, 2024 at 12:18pm

Update March 16, 2024 at 12:57pm

    ಹೆಸರಲ್ಲಿದ್ದ ದೋಷ ನಿವಾರಿಸಲು ಮುಂದಾದ ಐಪಿಎಲ್ ಫ್ರಾಂಚೈಸಿ

    ಈ ಸಲ ಕಪ್​ ನಮ್ದೆ ಎಂದರೂ ಪ್ರತಿ ಬಾರಿ ಕೈ ಜಾರಿ ಹೋಗ್ತಿದ್ದ ಕಪ್

    ಹೆಸರು ಬದಲಾವಣೆ ಮಾಡಿದ ಮೇಲೆ ಆರ್​ಸಿಬಿ ಕಪ್ ಗೆಲ್ಲುತ್ತಾ..?

ಐಪಿಎಲ್​ ಟೂರ್ನಿ 16 ಸೀಸನ್​ಗಳನ್ನ ಮುಗಿಸಿ 17ನೇ ಸೀಸನ್​ಗೆ ಭರ್ಜರಿ ತಯಾರಿ ನಡೆಸುತ್ತಿದೆ. ಆದರೂ ಈ ಹದಿನಾರರಲ್ಲೂ ಆರ್​ಸಿಬಿ ಒಂದು ಕಪ್​ ಕೂಡ ಗೆದ್ದಿಲ್ಲ. ಕಪ್ ಗೆದ್ದಿಲ್ಲ ಅನ್ನೋ ಪ್ರಶ್ನೆ, ಇಂದಿಗೂ ಉಳಿದಿದ್ದು ಅದರ ಸನಿಹಕ್ಕೆ ಹೋಗಿ ಎಡವಿದ್ದೂ ಉಂಟು. ಆದ್ರೂ ‘ಮುಂದಿನ ಸಲ ಕಪ್ ನಮ್ದೇ’ ಎನ್ನುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಲಾಂಗ್ ಮೂಲಕ ಮೆಸೇಜ್​ವೊಂದನ್ನ ಕೊಟ್ಟಿದ್ದಾರೆ.

ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪ್ರೊಮೋವೊಂದನ್ನು ಶೇರ್ ಮಾಡಿದ್ದು ಅದರಲ್ಲಿ ಶಿವಣ್ಣ ಖದರ್ ಲುಕ್​ನಲ್ಲಿ ಲಾಂಗ್​ಗಳನ್ನು ಹಿಡಿದುಕೊಂಡಿದ್ದಾರೆ. ಇದು ಅಭಿಮಾನಿಗಳು ಫುಲ್ ಖುಷ್ ಆಗುವಂತ ವಿಚಾರವಾಗಿದೆ. ಅಂದರೆ ಶಿವಣ್ಣ ಆರ್​ಸಿಬಿ ಟೀಮ್​​ನಲ್ಲೇನು ಆಡುತ್ತಿಲ್ಲ. ಬದಲಾಗಿ ರಾಯಲ್ ಚಾಲೆಂಜರ್ಸ್​ ‘Bangalore’ ಎನ್ನುವ ಪದವನ್ನು ಇನ್ಮುಂದೆ ‘Bangaluru’ ಅಂಥ ಚೇಂಜ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದಕ್ಕಂತಲೇ 3 ಲಾಂಗ್​ಗಳ ಮೇಲೆ ರಾಯಲ್, ಚಾಲೆಂಜರ್ಸ್, Bangalore ಎಂದು ಬರೆಯಲಾಗಿರುತ್ತೆ. ಇದರಲ್ಲಿ ಮೊದಲೆರಡು ಮಚ್ಚುಗಳನ್ನ ತೆಗೆದು ಎಸೆಯುವ ಹ್ಯಾಟ್ರಿಕ್ ಹೀರೋ ಶಿವಣ್ಣ ಕೊನೆ ಲಾಂಗ್​ನಲ್ಲಿ Bangalore ಅಂಥ ಬರೆದಿರುವುದನ್ನು ಕೈಗೆ ತಗೊಂಡು How long this long ಎಂದು ಹೇಳಿದ್ದಾರೆ. ಅಂದರೆ ಈ ಬಾರಿ ಆರ್​ಸಿಬಿ ಹೆಸರಲ್ಲಿ ಸಣ್ಣ ಬದಲಾವಣೆ ಆಗೋದಂತು ಕನ್​ಫರ್ಮ್ ಆಗಿದೆ.

ಇದಕ್ಕೂ ಮೊದಲು ಇದೇ ಸಂಬಂಧ ಅಶ್ವಿನ್ ಪುನೀತ್ ರಾಜ್​ಕುಮಾರ್ ಅವರು ಇದನ್ನೇ ಹೇಳಿರುವ ಬಗ್ಗೆ ಆರ್​ಸಿಬಿ ವಿಡಿಯೋ ಶೇರ್ ಮಾಡಿತ್ತು. ಅಲ್ಲದೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ಇದನ್ನೆ ಹೇಳಿದ್ದರು. ಸದ್ಯ ಶಿವಣ್ಣ ಅವರು ಲಾಂಗ್​ಗಳ ಮೂಲಕ ಡಿಫೆರೆಂಟ್​ ಆಗಿ ಹೇಳಿರುವುದು ವಿಶೇಷ ಎನಿಸಿದೆ. ಹೆಸರು ಬದಲಾವಣೆ ಬಗ್ಗೆ ಮಾರ್ಚ್​ 19 ರಂದು ಅನ್​ಬಾಕ್ಸ್ ಈವೆಂಟ್​ನಲ್ಲಿ ಅಧಿಕೃತವಾಗಿ ಘೋಷಣೆ ಆಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇನ್ನೆಷ್ಟು ದಿನ ಈ ಸಲ ಕಪ್‌ ನಮ್ದೇ ಅನ್ನೋದು.. ಲಾಂಗ್ ಎತ್ತಿದ ಶಿವಣ್ಣ; RCB ಫ್ಯಾನ್ಸ್‌ಗೆ ಅರ್ಥ ಆಯ್ತಾ?

https://newsfirstlive.com/wp-content/uploads/2024/03/RCB_SHIVANNA_Long.jpg

Load More