/newsfirstlive-kannada/media/post_attachments/wp-content/uploads/2025/06/RCB-OWNER-1.jpg)
ಬರೋಬ್ಬರಿ 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಆರ್ಸಿಬಿ ಕಪ್ ಗೆದ್ದ ಸಂಭ್ರಮ ಇಡೀ ಕರ್ನಾಟಕದಲ್ಲಿ ಮನೆ ಮಾಡಿದೆ. ಇತ್ತ, ಫ್ರಾಂಚೈಸಿ ಸತತ 18 ವರ್ಷಗಳ ಕನಸು ನನಸಾದ ಖುಷಿಯಲ್ಲಿದೆ.
ಆರ್ಸಿಬಿ ಮಾಲೀಕ ಯಾರು..?
ಐಪಿಎಲ್ನ ಒಂದು ಫ್ರಾಂಚೈಸಿ ಆಗಿರುವ ಆರ್ಸಿಬಿ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. 2008ರಲ್ಲಿ ಸ್ಥಾಪನೆಯಾದ ಈ ಫ್ರಾಂಚೈಸಿಯು ಐಪಿಎಲ್ ಉದ್ಘಾಟನಾ ವರ್ಷದಿಂದಲೇ ಇದೆ. ಐಪಿಎಲ್ ಆರಂಭವಾಗಿ 17 ವರ್ಷ ಕಳೆದರೂ ಒಂದು ಬಾರಿಯೂ ಕಪ್ ಗೆದ್ದಿರಲಿಲ್ಲ. 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್ಗೆ ಮುತ್ತಿಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಆಸೆಯನ್ನು ಈಡೇರಿಸಿಕೊಂಡಿದೆ.
ಇದನ್ನೂ ಓದಿ: IPL ಟ್ರೋಫಿಗಾಗಿ ಪ್ರತಿ ಹೆಜ್ಜೆ ಹೆಜ್ಜೆಗೂ, ಇಂಚು ಇಂಚಿಗೂ ಶ್ರಮ.. ಕಿಂಗ್ ಕೊಹ್ಲಿ ಭಾವನಾತ್ಮಕ ಪೋಸ್ಟ್!
ವಿಜಯ್ ಮಲ್ಯರಿಂದ ಆರಂಭ..
ಕಿಂಗ್ ಫಿಶರ್ ಏರ್ಲೈನ್ಸ್ ಆಗಿನ ಅಧ್ಯಕ್ಷರಾಗಿದ್ದ ವಿಜಯ್ ಮಲ್ಯ ಅವರು 111.6 ಮಿಲಿಯನ್ ಡಾಲರ್ಗೆ ಆರ್ಸಿಬಿಯನ್ನು ಖರೀದಿ ಮಾಡಿದ್ದರು. ಇದು ಐಪಿಎಲ್ನಲ್ಲಿ ಅತೀ ಹೆಚ್ಚು ಹಣಕ್ಕೆ ಬಿಡ್ ಆಗಿರುವ ಫ್ರಾಂಚೈಸಿ ಆಗಿದೆ. ನಂತರದ ದಿನಗಳಲ್ಲಿ ವಿಜಯ್ ಮಲ್ಯ ಸಾಲದ ಸುಳಿಗೆ ಸಿಲುಕಿ ಮರುಪಾವತಿ ಮಾಡಲಿಲ್ಲ. ಆಗ ಈ ಫ್ರಾಂಚೈಸಿಯನ್ನು ಮತ್ತೊಬ್ಬರು ಖರೀದಿ ಮಾಡಿದ್ದರು. ಪ್ರಸ್ತುತ ಆರ್ಸಿಬಿ ಡಿಯಾಜಿಯೊ ಅಂಗ ಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ನ (USL) ಮಾಲೀಕತ್ವದಲ್ಲಿದೆ. 2022ನೇ ಹೊತ್ತಿಗೆ ಆರ್ಸಿಬಿ ಮೂರನೇ ಶ್ರೀಮಂತ ಫ್ರಾಂಚೈಸಿ ಆಗಿದೆ. ಪ್ರಥಮೇಶ್ ಮಿಶ್ರಾ (Prathamesh Mishra) ಅನ್ನೋರು ಆರ್ಸಿಬಿಯ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: RCB ಗೆಲುವು; ಕರ್ನಾಟಕ ಅಲ್ಲ, ಅಮೆರಿಕದಲ್ಲೂ ಕನ್ನಡಿಗರ ವಿಜೃಂಭಣೆಯ ಸಂಭ್ರಮ ಹೇಗಿತ್ತು..?
ಏನಿದು USL..?
ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಆಲ್ಕೋಹಾಲ್ ಯುಕ್ತ ಪಾನೀಯ ಕಂಪನಿ (Beverage company). ಇದು ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಸ್ಪಿರಿಟ್ ಉತ್ಪಾದಿಸುತ್ತದೆ. ಇಂಗ್ಲಿಷ್ ಬಹುರಾಷ್ಟ್ರೀಯ ಆಲ್ಕೋಹಾಲ್ ಯುಕ್ತ ಪಾನೀಯ ದೈತ್ಯ ಮತ್ತು ವಿಶ್ವದ ಪ್ರಮುಖ ಮದ್ಯದ ಕಂಪನಿಗಳಲ್ಲಿ ಒಂದಾಗಿದೆ. ಯುನೈಟೆಡ್ ಸ್ಪಿರಿಟ್ನ ಪ್ರಸ್ತುತ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಹಿನಾ ನಾಗರಾಜ್ ಆಗಿದ್ದಾರೆ.
ಎರಡು ಟ್ರೋಫಿ ಗೆದ್ದಿರುವ ಆರ್ಸಿಬಿ
18ನೇ ಆವೃತ್ತಿಯಲ್ಲಿ ಆರ್ಸಿಬಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಈ ಫ್ರಾಂಚೈಸಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲೂ ತಂಡವನ್ನು ಹೊಂದಿದೆ. WPLನಲ್ಲಿ ಸ್ಮೃತಿ ಮಂದಾನಾ ನೇತೃತ್ವದ ತಂಡವು 2024 ರಲ್ಲಿ WPL ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಚಿನ್ನಸ್ವಾಮಿ ಸ್ಟೇಡಿಯಂ ಎಂಟ್ರಿಗೆ ಉಚಿತ ಪಾಸ್ ಘೋಷಣೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ