3ನೇ ಪ್ಲೇಸ್​ನಲ್ಲಿದ್ರೂ RCB ಸೇಫ್ ಅಲ್ಲ.. ಪ್ಲೇ-ಆಫ್ ಪ್ರವೇಶಿಸಲು ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು..?

author-image
Ganesh
RCB vs PBKS: ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲೇ ಶಾಕಿಂಗ್ ನ್ಯೂಸ್..!
Advertisment
  • ಆರ್​ಸಿಬಿಗೆ ಉಳಿದಿರೋದು ಕೇವಲ ಐದು ಪಂದ್ಯ
  • ನಾಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ನಡೆಯಲಿದೆ
  • ಬೆಂಗಳೂರಿನಲ್ಲಿ ಇನ್ನೂ ಮೂರು ಪಂದ್ಯ ನಡೆಯಲಿದೆ

ಐಪಿಎಲ್ ಸೀಸನ್​ 18ರ ಅಂತಿಮಘಟ್ಟದತ್ತ ಸಾಗುತ್ತಿದೆ. ಈಗಾಗಲೇ ಫಸ್ಟ್​ ಹಾಫ್​ ಮುಗಿದಿದೆ. ಪ್ಲೇ ಆಫ್​​ ಲೆಕ್ಕಾಚಾರ ಐಪಿಎಲ್​ ಅಂಗಳದಲ್ಲಿ ಜೋರಾಗಿದೆ. ಯಾವ ತಂಡ ಪ್ಲೇ ಆಫ್​ಗೆ ಎಂಟ್ರಿ ಕೊಡುತ್ತೆ? ಯಾವ ತಂಡ ಔಟ್​ ಆಗುತ್ತೆ? ಅನ್ನೋ ಚರ್ಚೆ ನಡೆಯುತ್ತಿದೆ.

ಹಾಗಿದ್ದರೆ ಪ್ಲೇ ಆಫ್​ ಟಿಕೆಟ್​ ​ಗಿಟ್ಟಿಸಿಕೊಳ್ಳಲು ಆರ್​ಸಿಬಿ ಇನ್ನೂ ಎಷ್ಟು ಮ್ಯಾಚ್​ ಗೆಲ್ಲಬೇಕು ಎಂಬ ಪ್ರಶ್ನೆ ಮೂಡಿದೆ. ಹೊಸ ಕ್ಯಾಪ್ಟನ್​ ರಜತ್​ ಪಟಿದಾರ್​ ನಾಯಕತ್ವದಡಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ರಾಯಲ್​ ಪರ್ಫಾಮೆನ್ಸ್​ ನೀಡ್ತಾ ಇದೆ. 9 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು ಬೀಗಿರೋ ಆರ್​​ಸಿಬಿಯ ರನ್​ರೇಟ್​ ಕೂಡ ಉತ್ತಮವಾಗಿದೆ. ಆದರೂ ಸೇಫ್​ ಆಗಬೇಕಂದ್ರೆ ಇನ್ನುಳಿದಿರೋ 5 ಪಂದ್ಯಗಳ ಪೈಕಿ ಕನಿಷ್ಟ 3 ಮ್ಯಾಚ್ ಗೆಲ್ಲಬೇಕಿದೆ.

ಇದನ್ನೂ ಓದಿ:ರಾಜಸ್ಥಾನ್ ವಿರುದ್ಧ ಆರ್​ಸಿಬಿ ರೋಚಕ ಗೆಲುವು.. ಮೂರು ಸಂಭ್ರಮಕ್ಕೆ ಕಾರಣವಾಯ್ತು ಈ ವಿಕ್ಟರಿ

ನಾಳೆಯ ದಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಎದುರಿಸಲಿದೆ. ತವರಿನ ಆಚೆ ಆರ್​ಸಿಬಿ ಎಲ್ಲಾ ಪಂದ್ಯಗಳನ್ನೂ ಗೆದ್ದುಕೊಂಡಿದೆ. ಹೀಗಾಗಿ ನಾಳೆಯ ಪಂದ್ಯವನ್ನೂ ಗೆದ್ದರೆ ಆರ್​ಸಿಬಿ ಹಾದಿ ಸುಗಮ ಆಗಲಿದೆ. ಇನ್ನುಳಿದ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯಲಿವೆ. ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಗೆಲುವಿನ ಹಳಿಗೆ ಮರಳಿದೆ. ಆದರೂ ಕೆಲವು ಸಂದರ್ಭಗಳಲ್ಲಿ ಆರ್​ಸಿಬಿ ಅದೃಷ್ಟ ಕೈಕೊಡಬಹುದು. ಹಾಗಾಗಿ ನಾಳೆ ನಡೆಯಲಿರುವ ಪಂದ್ಯವನ್ನು ಗೆಲ್ಲಬೇಕಿದೆ. ಅದೇ ರೀತಿ ಮೇ 9 ರಂದು ಎಲ್​ಎಸ್​ಜಿ ವಿರುದ್ಧ ಏಕನಾ ಸ್ಟೇಡಿಯಂನಲ್ಲಿ ನಡೆಯಲಿದೆ. ಆ ಪಂದ್ಯವನ್ನೂ ಆರ್​​ಸಿಬಿ ಗೆಲ್ಲಬೇಕು.

ಆರ್​ಸಿಬಿ ನೆಕ್ಸ್ಟ್​ ಪಂದ್ಯ

  • ಏಪ್ರಿಲ್ 27, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ಜೇಟ್ಲಿ ಸ್ಟೇಡಿಯಂ
  •  ಮೇ 3, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ಚಿನ್ನಸ್ವಾಮಿ ಸ್ಟೇಡಿಯಂ
  •  ಮೇ 9, ಎಲ್​​ಎಸ್​ಜಿ ವಿರುದ್ಧ, ಏಕನಾ ಸ್ಟೇಡಿಯಂ ಸ್ಟೇಡಿಯಂ
  •  ಮೇ 13, ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ, ಚಿನ್ನಸ್ವಾಮಿ ಸ್ಟೇಡಿಯಂ
  •  ಮೇ 17, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂ

ಇದನ್ನೂ ಓದಿ:ರಾಜಸ್ಥಾನ್ ವಿರುದ್ಧ ಆರ್​ಸಿಬಿ ರೋಚಕ ಗೆಲುವು.. ಮೂರು ಸಂಭ್ರಮಕ್ಕೆ ಕಾರಣವಾಯ್ತು ಈ ವಿಕ್ಟರಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment