/newsfirstlive-kannada/media/post_attachments/wp-content/uploads/2025/04/DDP.jpg)
ಈ ಬಾರಿಯ ಐಪಿಎಲ್ನಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿರುವ ಆರ್ಸಿಬಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ತವರಿನಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಸೋತಿರೋದು ಬಿಟ್ರೆ, ಉಳಿದೆಲ್ಲ ಕಡೆ ಆರ್ಸಿಬಿಗೆ ಗೆಲುವು ಆಗಿದೆ. ಹೀಗಾಗಿ ಆರ್ಸಿಬಿ ಅಭಿಮಾನಿಗಳು ಮತ್ತು ಮ್ಯಾನೇಜ್ಮೆಂಟ್ ಸದ್ಯ ಪ್ಲೇ-ಆಫ್ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.
ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು..?
ಆರ್ಸಿಬಿ ನಿನ್ನೆಯವರೆಗೆ ಒಟ್ಟು 8 ಪಂದ್ಯಗಳನ್ನು ಆಡಿದೆ. ಆಡಿರುವ 8 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಂದ್ಹಾಗೆ ಲೀಗ್ ಹಂತದಲ್ಲಿ ಆರ್ಸಿಬಿಗೆ ಇನ್ನೂ 6 ಪಂದ್ಯಗಳಿವೆ. ಆ 6 ಪಂದ್ಯಗಳಲ್ಲಿ 4 ಮ್ಯಾಚ್ ತವರು ಮೈದಾನದಲ್ಲಿಯೇ ನಡೆಯಲಿದೆ. ಈ ಪಂದ್ಯಗಳಲ್ಲಿ ಆರ್ಸಿಬಿ ಕನಿಷ್ಟ ಅಂದರೂ ಮೂರು ಮ್ಯಾಚ್ ಗೆಲ್ಲಲೇಬೇಕಿದೆ. ಹಾಗಿದ್ದರೆ ಮಾತ್ರ ಆರ್ಸಿಬಿ ಪ್ಲೇ-ಆಫ್ ಹಾದಿ ಸುಲಭ ಆಗಲಿದೆ.
ಇದನ್ನೂ ಓದಿ: ಪಂಜಾಬ್ಗೆ ನುಗ್ಗಿ ಹೊಡೆದ RCB.. ಅಭಿಮಾನಿಗಳು ಮರೆಯಲಾಗದ 5 ಕ್ಷಣಗಳು..!
ಒಂದು ವೇಳೆ ಮುಂದಿನ ನಾಲ್ಕು ಅಥವಾ ಐದು ಪಂದ್ಯಗಳನ್ನು ಗೆದ್ದರೆ ಆರ್ಸಿಬಿ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಅಲಂಕರಿಸಲಿದೆ. ಒಂದು ವೇಳೆ ಮೊದಲ ಎರಡು ಸ್ಥಾನದಲ್ಲಿ ಆರ್ಸಿಬಿ ಬಂದರೆ, ಫೈನಲ್ ಪ್ರವೇಶಕ್ಕೆ ಎರಡು ಅವಕಾಶ ಸಿಗಲಿದೆ.
ಆರ್ಸಿಬಿ ಮುಂದಿನ ಪಂದ್ಯಗಳು..
ಏಪ್ರಿಲ್ 24, ರಾಜಸ್ಥಾನ್ ರಾಯಲ್ಸ್ ವಿರುದ್ಧ, ಚಿನ್ನಸ್ವಾಮಿ ಮೈದಾನ
ಏಪ್ರಿಲ್ 27, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ಅರುಣ್ ಜೆಟ್ಲಿ ಸ್ಟೇಡಿಯಂ
ಮೇ 3, ಚೆನ್ನೈ ವಿರುದ್ಧ, ಚಿನ್ನಸ್ವಾಮಿ ಮೈದಾನ
ಮೇ 9, ಲಕ್ನೋ ವಿರುದ್ಧ ಲಕ್ನೋದಲ್ಲಿ ಪಂದ್ಯ
ಮೇ 13, ಹೈದರಾಬಾದ್ ವಿರುದ್ಧ ಚಿನ್ನಸ್ವಾಮಿ ಮೈದಾನ
ಮೇ 17, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ, ಬೆಂಗಳೂರಲ್ಲಿ ಪಂದ್ಯ
ಇದನ್ನೂ ಓದಿ: ಗೆಲುವಿನ ಖುಷಿ ಬೆನ್ನಲ್ಲೇ ಆರ್ಸಿಬಿಗೆ ಮತ್ತೊಂದು ಭರ್ಜರಿ ಗುಡ್ನ್ಯೂಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್