newsfirstkannada.com

RCBಗೆ ಪ್ಲೇ-ಆಫ್ ದಾರಿ ಕಷ್ಟವೇನೂ ಅಲ್ಲ​.. ಕಮರುತ್ತಿರುವ ಕನಸುಗಳಿಗೆ ಜೀವ ತುಂಬಲು ಇನ್ನೂ ಇವೆ ದಾರಿಗಳು..!

Share :

Published April 13, 2024 at 9:52am

    ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದು ಸೋಲು..

    ಬೆಂಗಳೂರಿನ ಪ್ಲೇ-ಆಫ್​ ಕನಸು ಕಮರಿತಾ..?

    ಹಾರ್ಡ್​ ವರ್ಕ್​ ಜೊತೆ ಕೈ ಹಿಡಿಯಬೇಕು ಲಕ್

ಸೀಸನ್​-17ರ ಐಪಿಎಲ್ ಕಾವೇರುತ್ತಿದೆ. ಬಿಸಿಲ ದಗೆಯಂತೆ ಪಂದ್ಯಗಳ ಹೈವೋಲ್ಟೇಜ್ ಟಚ್ ಪಡೆದುಕೊಳ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಸ್ಥಿತಿ ಮಾತ್ರ ಭಿನ್ನವಾಗಿದೆ. ಇದಕ್ಕೆ ಕಾರಣ ಸಾಲು ಸಾಲು ಹೀನಾಯ ಸೋಲುಗಳು.. ಈ ಹೀನಾಯ ಸೋಲುಗಳೇ, ರೆಡ್​ ಆರ್ಮಿಯ ಗತಿ ಏನಾಪ್ಪಾ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.

ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದು ಸೋಲು..
ಈ ಐದು ಸೋಲುಗಳೇ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸಂಕಷ್ಟಕ್ಕೆ ದೂಡಿದೆ. ಮುಂಬೈ ಇಂಡಿಯನ್ಸ್​ ಎದುರಿನ ದಯನೀಯ ಸೋಲಿನ ಬಳಿಕವಂತೂ ಆರ್​ಸಿಬಿಯ ಪ್ಲೇ-ಆಫ್ ಕನಸನ್ನೇ ಕಮರುವಂತೆ ಮಾಡಿದೆ. ಕೋಟ್ಯಾಂತರ ಅಭಿಮಾನಿಗಳು ಆರ್​ಸಿಬಿ ಮೇಲಿನ ಆಸೆಯನ್ನೇ ಕೈಬಿಟ್ಟಿದ್ದಾರೆ. ಆದ್ರೆ, ಆರ್​ಸಿಬಿಯ ದಾರಿ ಮಾತ್ರ ಮುಚ್ಚಿಲ್ಲ. ಈ ವಿಚಾರಗಳನ್ನ ಚಾಚು ತಪ್ಪದೆ ಪಾಲಿಸಿದ್ರೆ ಪ್ಲೇಆಫ್​​ಗೇರುವುದು ಕಷ್ಟವೇನಲ್ಲ.

ಇದನ್ನೂ ಓದಿ: ಎಲೆಕ್ಷನ್ ನಂತರ ಕಾದಿದೆ ಬೆಲೆ ಏರಿಕೆ ಬಿಸಿ; ಮೊಬೈಲ್ ಬಳಕೆ ತುಂಬಾನೇ ಕಷ್ಟ ಅಂತಿದೆ ಈ ವರದಿ..!

ಪ್ರತಿ ಮ್ಯಾಚ್​​​​​​​​ನ ಗೆಲುವು ಅನಿವಾರ್ಯ..!
ಸದ್ಯ 6 ಪಂದ್ಯಗಳನ್ನಾಡಿರುವ ಆರ್​ಸಿಬಿ ಕೇವಲ ಒಂದರಲ್ಲಷ್ಟೇ ಗೆದ್ದು ಬೀಗಿದೆ. ಹೀಗಾಗಿ ಮುಂದಿನ ಪ್ರತಿ ಮ್ಯಾಚ್​ ಡು ಆರ್​ ಡೈ ಆಗಿದೆ. ಮುಂದಿನ 8 ಪಂದ್ಯಗಳ ಪೈಕಿ ಕನಿಷ್ಠ 7ರಲ್ಲಿ ಗೆಲುವಿನ ದಡ ಸೇರಿದ್ರಷ್ಟೇ ಆರ್​ಸಿಬಿಯ ಪ್ಲೇ-ಆಫ್ ಜೀವಂತ. ಇಲ್ಲ ಆರ್​ಸಿಬಿಯ ಫ್ಲೇ-ಆಫ್​ ಡೋರ್ ಕಂಪ್ಲೀಟ್​ ಕ್ಲೋಸ್ ಆಗೋದು ಗ್ಯಾರಂಟಿ. ಹೀಗಾಗಿ ಗೆಲುವೊಂದೇ ಆರ್​ಸಿಬಿಯ ಗುರಿ..

ಗೆಲುವಿನ ಜೊತೆ ರನ್​ರೇಟ್​ ಅತಿ ಮುಖ್ಯ..!
ಆರ್​ಸಿಬಿಗೆ ಗೆಲುವೊಂದೇ ಟಾರ್ಗೆಟ್​ ಅಲ್ಲ.. ಗೆಲುವಿನ ಜೊತೆಗೆ ರನ್​ರೇಟ್ ಕಾಯ್ದಕೊಳ್ಳುವುದು ಮೋಸ್ಟ್​ ಇಂಪಾರ್ಟೆಂಟ್. ಈಗಾಗಲೇ ಮೈನಸ್ ಹೊಂದಿರುವ ಆರ್​ಸಿಬಿ, ಮುಂದಿನ ಪಂದ್ಯಗಳನ್ನ ಭಾರೀ ಅಂತರದಲ್ಲಿ ಗೆಲುವು ಕಾಣಬೇಕಿದೆ. ಯಾಕಂದ್ರೆ, 14 ಪಂದ್ಯದಲ್ಲಿ 7 ಪಂದ್ಯವನ್ನಷ್ಟೇ ಗೆದ್ದರೆ, ರನ್​ರೇಟ್​​ ಮೇಲೆ ಆರ್​ಸಿಬಿಯ ಪ್ಲೇಆಫ್​​ ಭವಿಷ್ಯ ನಿರ್ಧಾರವಾಗುತ್ತೆ. ಹೀಗಾಗಿ ಬಿಗ್ ಮಾರ್ಜಿನ್ ಗೆಲುವು ಬೇಕಿದೆ.

ಇದನ್ನೂ ಓದಿಬೆಳ್ಳಂಬೆಳಗ್ಗೆ ಕಾರು-ಟ್ರಕ್ ಮಧ್ಯೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು

ತವರಿನಾಚೆಯೂ ಗೆಲ್ಲಬೇಕಾದ ಸವಾಲ್..!
ಆರ್​ಸಿಬಿ 8 ಲೀಗ್​ ಪಂದ್ಯಗಳನ್ನ ಆಡಲಿದ್ದು, ಈ ಎಲ್ಲಾ ಪಂದ್ಯಗಳ ಪೈಕಿ ತವರಿನಾಚೆಯ ಪಂದ್ಯಗಳನ್ನ ಗೆಲ್ಲಬೇಕಾದ ಸವಾಲು ಇದೆ. ತವರಿನಲ್ಲಿ ಕೇವಲ ಒಂದು ಮ್ಯಾಚ್ ಗೆದ್ದಿರುವ ಆರ್​ಸಿಬಿ, ತವರಿನ ಹೊರಗೆ ಆಡಿರೋ ಮೂರು ಪಂದ್ಯಗಳನ್ನ ಕೈಚೆಲ್ಲಿದೆ. ಹೀಗಾಗಿ ಮುಂದಿನ ತವರಿನಂಗಳದಾಚೆ ಗೆಲ್ಲೋದು ಬಿಗ್ ಟಾಸ್ಕ್​.

ತವರಿನ ಪಂದ್ಯಗಳೇ ಆರ್​ಸಿಬಿ ಕ್ರೂಶಿಯಲ್​​..!
ತವರಿನಾಚೆಗೆ ಮಾತ್ರವಲ್ಲ. ತವರಿನ ಚಿನ್ನಸ್ವಾಮಿಯಲ್ಲೂ ಆರ್​ಸಿಬಿ ಗೆಲ್ಲೋಕೆ ಪರದಾಡುತ್ತಿದೆ. ತವರಿನಲ್ಲಿ ಆಡಿದ 4ರಲ್ಲಿ ಕೇವಲ 1ರಲ್ಲಷ್ಟೇ ಗೆದ್ದಿದೆ. ಹೀಗಾಗಿ ತವರಿನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್, ಗುಜರಾತ್ ಟೈಟನ್ಸ್, ಡೆಲ್ಲಿ, ಚೆನ್ನೈ ಎದುರು ಗೆಲ್ಲಬೇಕು. ಕೊನೆ 3 ಪಂದ್ಯಗಳನ್ನ ಚಿನ್ನಸ್ವಾಮಿಯಲ್ಲೇ ಆಡಲಿರುವ ಆರ್​ಸಿಬಿಗೆ, ಈ ಪಂದ್ಯಗಳೇ ಕ್ರೂಶಿಯಲ್ ರೋಲ್ ಪ್ಲೇ ಮಾಡುತ್ತೆ. ಆದ್ರೆ, ಇದಕ್ಕೂ ಹಿಂದಿನ 5 ಪಂದ್ಯಗಳ ಗೆಲುವು ಇಂಪಾರ್ಟೆಟ್​..

ಇದನ್ನೂ ಓದಿ: ಲಕ್ನೋ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್; ಈ ವಿಚಾರದಲ್ಲಿ ಆರ್​ಸಿಬಿಗೆ ಭಾರೀ ಮುಜುಗರ..!

ಹಾರ್ಡ್​ ವರ್ಕ್​ ಜೊತೆ ಕೈ ಹಿಡಿಯಬೇಕಿದೆ ಲಕ್​..!
ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಗೆಲುವೊಂದೇ ಅಲ್ಲ. ಲಕ್ ಕೂಡ ಕೈಹಿಡಿಯಬೇಕಿದೆ. ಯಾಕಂದ್ರೆ, 9ನೇ ಸ್ಥಾನದಲ್ಲಿರುವ ಆರ್​ಸಿಬಿ, 4ನೇ ಸ್ಥಾನಕ್ಕೇರಬೇಕಾದ್ರೆ, ಆರ್​ಸಿಬಿ ಮೇಲಿನ ತಂಡಗಳ ಸೋಲು ಕೂಡ ಸಾಥ್ ನೀಡಬೇಕು. ಆ ಸೋಲುಗಳು ಆರ್​ಸಿಬಿಗೆ ವರವಾಗಿ ಪರಣಮಿಸಬೇಕು. ಇದೆಲ್ಲವೂ ನಡೆದರಷ್ಟೇ ಆರ್​ಸಿಬಿಗೆ ಉಳಿಗಾಲ. ಒಟ್ನಲ್ಲಿ! ಸಾಲು ಸಾಲು ವೈಫಲ್ಯ ಅನುಭವಿಸಿರೋ ಆರ್​ಸಿಬಿ, ಪ್ಲೇ-ಆಫ್​​ಗೇರಲು ಅವಕಾಶವೇನೋ ಇದೆ. ಜೊತೆಗೆ ಪವಾಡವೂ ನಡೆಯಬೇಕಿದೆ. ಹೀಗಾಗಿ ಆರ್​ಸಿಬಿ ಮುಂದಿನ ಕಥೆ ಏನು ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCBಗೆ ಪ್ಲೇ-ಆಫ್ ದಾರಿ ಕಷ್ಟವೇನೂ ಅಲ್ಲ​.. ಕಮರುತ್ತಿರುವ ಕನಸುಗಳಿಗೆ ಜೀವ ತುಂಬಲು ಇನ್ನೂ ಇವೆ ದಾರಿಗಳು..!

https://newsfirstlive.com/wp-content/uploads/2024/04/RCB-26.jpg

Load More