newsfirstkannada.com

RCBಗೆ ರಿಟೇನ್ ಆಗೋ 6 ಪ್ಲೇಯರ್ಸ್ ಇವರೇನಾ..​ ರೆಡ್ ಆರ್ಮಿಯಲ್ಲಿ ಕೊಹ್ಲಿ, ಮ್ಯಾಕ್ಸಿ ಸ್ಥಾನ ಸೇಫಾ?

Share :

Published August 11, 2024 at 11:09am

    2025ನೇ IPL ಚಾಂಪಿಯನ್​ ಪಟ್ಟಕ್ಕೇರಲು ಆರ್​​ಸಿಬಿ ಪಣ!

    24 ಪ್ಲೇಯರ್ಸ್​ ಪೈಕಿ ಉಳಿಯೋದು ಕೇವಲ 6 ಆಟಗಾರರು

    ಆರ್​ಸಿಬಿ ಉಳಿಸಿಕೊಳ್ಳೋ 6 ಪ್ಲೇಯರ್ಸ್ ಯಾರು ಯಾರು?

2025ನೇ ಐಪಿಎಲ್​​​​ ಮೆಗಾ ಆಕ್ಷನ್ ಆರಂಭಕ್ಕೆ ಇನ್ನೂ ಕೆಲವೇ ತಿಂಗಳಷ್ಟೇ ಬಾಕಿ ಇದೆ. ಅದಕ್ಕೂ ಮುನ್ನ ಯಾವ ಫ್ರಾಂಚೈಸಿ, ಯಾರನ್ನ ರಿಟೇನ್ ಮಾಡಿಕೊಳ್ಳುತ್ತೆ, ಯಾರನ್ನೆಲ್ಲ ರಿಲೀಸ್ ಮಾಡುತ್ತೆ ಅನ್ನೋ ಕುತೂಹಲ ಗರಿಗೆದರಿದೆ. ಎಸ್ಪೆಶಲಿ ಆರ್​ಸಿಬಿ ರಿಟೇನ್​​ ಪ್ಲೇಯರ್ಸ್​ ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಹಾಗಾದ್ರೆ ರೆಡ್​ ಆರ್ಮಿ ಯಾರೆನ್ನೆಲ್ಲ ಉಳಿಸಿಕೊಳ್ಳಬಹುದು?.

24 ಆಟಗಾರರಲ್ಲಿ ಯಾರಿಗಿದೆ ರಿಟೇನ್ ಆಗುವ ಅದೃಷ್ಟ..?

18ನೇ ಐಪಿಎಲ್​​ ಸೀಸನ್​​ಗೆ ಫ್ರಾಂಚೈಸಿಗಳ ಸಿದ್ಧತೆ ಜೋರಾಗಿದೆ. ಬಿಸಿಸಿಐ 6 ಆಟಗಾರರ ರಿಟೇನ್​ಗೆ ಅಸ್ತು ಎಂದಿದ್ದು ಅಧಿಕೃತ ಮಾಹಿತಿ ಹೊರಬೀಳೋದಷ್ಟೇ ಬಾಕಿ ಇದೆ. ಇತ್ತ ಬಿಗ್​ಬಾಸ್​ಗಳು ಡಿಮ್ಯಾಂಡ್​ಗೆ ಒಪ್ಪಿದ ಬೆನ್ನಲ್ಲೆ ಫ್ರಾಂಚೈಸಿಗಳು ಯಾರನ್ನ ರಿಟೇನ್​​​​​​​ ಮಾಡಿಕೊಳ್ಳಬೇಕು ಅನ್ನೋ ಚಿಂತನೆಯಲ್ಲಿ ತೊಡಗಿವೆ. ಇದಕ್ಕೆ ಆರ್​ಸಿಬಿ ಕೂಡ ಹೊರತಾಗಿಲ್ಲ. 24 ಪ್ಲೇಯಸ್​ ಪೈಕಿ, ಆರು ರಿಟೇನ್ ಆಟಗಾರರ ಲಿಸ್ಟ್​​ ರೆಡಿ ಮಾಡಿಕೊಂಡಿದೆ. ಹಾಗಾದ್ರೆ ಆಕ್ಷನ್​ಗೆ ಹೋಗದೇ ರೆಡ್​ ಆರ್ಮಿಯಲ್ಲಿ ಉಳಿದುಕೊಳ್ಳುವ ಆ 6 ವೀರ ಕಲಿಗಳು ಯಾರು ಅನ್ನೋದನ್ನ ಒನ್ ಬೈ ಒನ್ ತೋರಿಸ್ತೀವಿ ನೋಡಿ.

ಇದನ್ನೂ ಓದಿ: ಎರಡು ಬೈಕ್​ಗಳ ಮಧ್ಯೆ ಭೀಕರ ಮುಖಾಮುಖಿ ಡಿಕ್ಕಿ.. ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ

ರೆಡ್ ಆರ್ಮಿಯಲ್ಲಿ ಕಿಂಗ್ ಕೊಹ್ಲಿ ಸ್ಥಾನ ಸೇಫ್​​..!

ಆರ್​ಸಿಬಿಗೆ ಇಷ್ಟೊಂದು ನೇಮ್​​​ & ಫೇಮ್​​​​​​​​ ಇದೆ ಅಂದ್ರೆ ಅದಕ್ಕೆ ಕಾರಣ ಕಿಂಗ್​ಕೊಹ್ಲಿ. ಅವರು ತಂಡದ ಆಪತ್ಬಾಂಧವ. ಆರ್​ಸಿಬಿ ಪರ 252 ಪಂದ್ಯವಾಡಿ 8,004 ರನ್ ಚಚ್ಚಿದ್ದಾರೆ. ಕಳೆದ ಸೀಸನ್​ನಲ್ಲಿ ಅಬ್ಬರಿಸಿ ಬೊಬ್ಬರಿದ ವಿರಾಟ್ 154.70 ಸ್ಟ್ರೈಕ್​ರೇಟ್​​ನಲ್ಲಿ 741 ಚಚ್ಚಿ ಶೈನ್ ಆಗಿದ್ರು. ಇಂತಹ ಮ್ಯಾಚ್ ವಿನ್ನರ್ ರಿಟೇನ್​ ಲಿಸ್ಟ್​​ನಲ್ಲಿ ಅಗ್ರಸ್ಥಾನದಲ್ಲಿದ್ದು, ಆರ್​ಸಿಬಿ ಬಹುಪರಾಕ್ ಅನ್ನುವುದು ಗ್ಯಾರಂಟಿ.

ಬಿಗ್​ ಹಿಟ್ಟರ್​​​ ವಿಲ್​ ಜಾಕ್ಸ್ ಕೈಬಿಡಲ್ಲ ಫ್ರಾಂಚೈಸಿ

ಆರ್​ಸಿಬಿ ತಂಡದಲ್ಲಿ ಉಳಿದುಕೊಳ್ಳುವ 2ನೇ ಆಟಗಾರ ಅಂದ್ರೆ ಆಲ್​ರೌಂಡರ್​​ ವಿಲ್​​​​​​​​​​​​​​​​​ ಜಾಕ್ಸ್​. ಇಂಗ್ಲೆಂಡ್​ ಬ್ಯಾಟರ್ ಕಳೆದ ಸೀಸನ್​​ನಲ್ಲಿ ಮಿಂಚು ಹರಿಸಿದ್ರು. 41 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಎಲ್ಲರನ್ನ ನಿಬ್ಬೆರಗಾಗಿಸಿದ್ರು. 8 ಇನ್ನಿಂಗ್ಸ್​ನಿಂದ 230 ರನ್ ಗಳಿಸಿದ ಜಾಕ್ಸ್​ ನಂಬಿಕೆ ಉಳಿಸಿಕೊಂಡಿದ್ದಾರೆ. ಬ್ಯಾಟಿಂಗ್​ ಜೊತೆ ಬೌಲಿಂಗ್​​ನಲ್ಲಿ ನೆರವಾಗಬಲ್ಲ ಬಹುಮುಖ ಪ್ರತಿಭೆ. ಹೀಗಾಗಿ ಆರ್​ಸಿಬಿ ಬಿಗ್​ ಹಿಟ್ಟರ್​ಗೆ ಮನ್ನಣೆ ಹಾಕುವುದು ಪಕ್ಕಾ.

ಗೇಮ್​​ ಚೇಂಜರ್​ ಮ್ಯಾಕ್ಸಿ ಮೇಲೆ ಫ್ರಾಂಚೈಸಿಗಿದೆ ಒಲವು..!

ಇನ್ನು ಗೇಮ್​​ ಚೇಂಜರ್​​​ ಗ್ಲೆನ್ ಮ್ಯಾಕ್ಸ್​ವೆಲ್​ ಕೂಡ ರಿಟೇನ್ ಆಗುವ ಸಾಧ್ಯತೆ ಹೆಚ್ಚಿದೆ. ಮ್ಯಾಕ್ಸಿ ಕಳೆದ ಆವೃತ್ತಿಯಲ್ಲಿ ಕಳಪೆ ಪರ್ಫಾಮೆನ್ಸ್​ ನೀಡಿದ್ರೂ ನಿಜ. ಆದ್ರೆ ಅವರೋರ್ವ ಡೇಂಜರಸ್​ ಬ್ಯಾಟರ್​​. ಲಯಕ್ಕೆ ಮರಳಿ ಅಬ್ಬರಿಸುವ ಕೆಪಾಸಿಟಿ ಇದೆ. ಹೀಗಾಗಿ ಈ ಸಿಡಿಗುಂಡನ್ನ ಆರ್​​ಸಿಬಿ ಮತ್ತೆ ರಿಟೇನ್​​​ ಮಾಡಿಕೊಳ್ಳಲು ಚಿಂತಿಸ್ತಿದೆ.

ಬೆಂಕಿ ಬೌಲರ್​​ ಸಿರಾಜ್ ಆಗ್ತಾರೆ ರಿಟೇನ್​​​​​..!

ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಕೂಡ ನಂಬಿಗಸ್ಥ ಬೌಲರ್​. ಇನ್​ಕನ್ಸಿಸ್ಟನ್ಸಿ ಪರ್ಫಾಮೆನ್ಸ್ ನೀಡ್ತಿದ್ದಾರೆ ನಿಜ. ಆದರೂ ಸಿರಾಜ್​ರನ್ನ ರಿಟೇನ್ ಮಾಡಿಕೊಳ್ಳುವ ಚಾನ್ಸಸ್ ಜಾಸ್ತಿ ಇದೆ. ಯಾಕಂದ್ರೆ ಸಿರಾಜ್​ ಒಬ್ಬರೇ ಆರ್​ಸಿಬಿ ತಂಡದಲ್ಲಿರೋ ದೇಸಿ ಸ್ಟಾರ್ ಬೌಲರ್​​. ಹೆಚ್ಚು ಅನುಭವ ಬೇರೆ ಇದೆ. ಈ ಕಾರಣಕ್ಕಾಗಿ ಸಿರಾಜ್​​​ರನ್ನ ಉಳಿಸಿಕೊಳ್ಳಲು ಆರ್​ಸಿಬಿ ಪ್ಲಾನ್ ಮಾಡಿದೆ.

ಮತ್ತೆ RCBಯಲ್ಲೆ ಕಮಾಲ್ ಮಾಡಲಿದ್ದಾರೆ ಕನ್ನಡಿಗ ವೈಶಾಕ್​​​..!

ಕನ್ನಡಿಗ ವೈಶಾಕ್ ವಿಜಯ್​ಕುಮಾರ್ ಕಳೆದೆರಡು ಸೀಸನ್​ಗಳಿಂದ ಇಂಪ್ರೆಸ್ಸಿವ್​ ಪರ್ಫಾಮೆನ್ಸ್ ನೀಡ್ತಿದ್ದಾರೆ. ಸೀಮ್​​ ಜೊತೆಗೆ ಸ್ಲೋ ಡೆಲಿವರಿ ಮೂಲಕ ಬ್ಯಾಟ್ಸ್​​ಮನ್​ಗಳನ್ನ ಕಂಗೆಡಿಸಿದ್ರು. ಲೋಕಲ್ ಬಾಯ್ ಆಗಿರೋದ್ರಿಂದ ಚಿನ್ನಸ್ವಾಮಿ ಮೈದಾನದ ಕಂಡಿಷನ್​ ಬಗ್ಗೆ ಚೆನ್ನಾಗಿ ಅರಿವಿದೆ. ಹೀಗಾಗಿ ಕನ್ನಡಿಗನಿಗೆ ಫ್ರಾಂಚೈಸಿ ಮಣೆ ಹಾಕುವುದು ಪಕ್ಕಾ ಎನ್ನಲಾಗಿದೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೇಲಿದೆಯಾ ಸಿದ್ದರಾಮಯ್ಯ ಸರ್ಕಾರದ ಕಣ್ಣು..? ರಿಟ್ ಅರ್ಜಿ ಸಲ್ಲಿಸಿದ ರಾಜಮಾತೆ

ಪಟೀದಾರ್​ಗೆ ತೆರೆಯಲಿದೆ ರಿಟೇನ್​ ಬಾಗಿಲು..!

ಇನ್ನು ರಾಕಿಂಗ್​ ರಜತ್ ಪಟೀದಾರ್​ ಕೂಡ ಆರ್​ಸಿಬಿ ರಿಟೇನ್ ಲಿಸ್ಟ್​ನಲ್ಲಿದ್ದಾರೆ. ಪಟೀದಾರ್​​​ ಕಳೆದ ಸೀಸನ್​​​​​​ನಲ್ಲಿ ಕಿಂಗ್ ಕೊಹ್ಲಿ, ಕ್ಯಾಪ್ಟನ್​ ಡುಪ್ಲೆಸಿಸ್​ ಬಳಿಕ ಆರ್​ಸಿಬಿ ಪರ ಹೆಚ್ಚು ರನ್​ ಹೊಡೆದ್ರು. 5 ಅರ್ಧಶತಕ ಗಳಿಸಿ ತಂಡ ಎಲಿಮಿನೇಟರ್​​​​​​​​​​ ತಲುಪಲು ಪ್ರಮುಖ ಕಾರಣರಾಗಿದ್ರು. ಇಂತಹ ನಂಬಿಗಸ್ಥ ಆಟಗಾರರನ್ನ ಕೈಬಿಡಲು ಫ್ರಾಂಚೈಸಿಗೆ ಮನಸಿಲ್ಲ. ಉಳಿಸಿಕೊಂಡೇ ತೀರುವ ಲೆಕ್ಕಚಾರದಲ್ಲಿದೆ.

ಇದನ್ನೂ ಓದಿ: ಕೊಹ್ಲಿ ಲಕ್ ಕಂಪ್ಲೀಟ್ ಚೇಂಜ್​.. 16 ವರ್ಷಗಳ ಕರಿಯರ್​ನಲ್ಲಿ ವಿರಾಟ್​ಗೆ ಇದು ಅನ್​ಲಕ್ಕಿ ಇಯರ್; ಯಾಕೆ?

ಸದ್ಯಕ್ಕಂತೂ ಆರ್​ಸಿಬಿ ಈ ಆಟಗಾರರನ್ನ ಉಳಿಸಿಕೊಳ್ಳುವ ಉಮೇದಿನಲ್ಲಿದೆ. 24 ಆಟಗಾರರ ಪೈಕಿ ಆರು ಆಟಗಾರರರೇ ಫೈನಲ್​ ಆಗಿ ರಿಟೇನ್ ಆಗ್ತಾರಾ? ಇಲ್ಲ ಬೇರೆಯವರಿಗೆ ಮಣೆ ಹಾಕಿ ಸರ್​ಪ್ರೈಸ್​ ಕೊಡುತ್ತಾ ಅನ್ನೋದನ್ನ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBಗೆ ರಿಟೇನ್ ಆಗೋ 6 ಪ್ಲೇಯರ್ಸ್ ಇವರೇನಾ..​ ರೆಡ್ ಆರ್ಮಿಯಲ್ಲಿ ಕೊಹ್ಲಿ, ಮ್ಯಾಕ್ಸಿ ಸ್ಥಾನ ಸೇಫಾ?

https://newsfirstlive.com/wp-content/uploads/2024/08/RCB_TEAM-3.jpg

Load More