newsfirstkannada.com

KL ರಾಹುಲ್​​, ಕರುಣ್​​ ನಾಯರ್​ ಅಲ್ಲ; ಆರ್​​​ಸಿಬಿಗೆ ಮತ್ತೋರ್ವ ಸ್ಟಾರ್ ಕನ್ನಡಿಗ ಎಂಟ್ರಿ!

Share :

Published September 2, 2024 at 11:07pm

Update September 2, 2024 at 11:08pm

    18ನೇ ಐಪಿಎಲ್​ ಸೀಸನ್​ಗೆ ಈಗಿನಿಂದಲೇ ಭರ್ಜರಿ ತಯಾರಿ

    ಮೆಗಾ ಹರಾಜಿನಲ್ಲಿ ಕನ್ನಡಿಗರ ಮೇಲೆ ಆರ್​​ಸಿಬಿ ಹದ್ದಿನ ಕಣ್ಣು!

    ಈ ಸ್ಟಾರ್​ ಆಟಗಾರನ ಖರೀದಿ ಮಾಡಲು ಆರ್​​ಸಿಬಿ ಪ್ಲಾನ್​​​

2025ರ ಐಪಿಎಲ್​ ಮೆಗಾ ಆಕ್ಷನ್​​ ಸಮೀಪಿಸುತ್ತಿದ್ದಂತೆ ಕ್ರೇಜ್​​ ಕೂಡ ಹೆಚ್ಚಾಗುತ್ತಲೇ ಇದೆ. ಹೇಗಾದ್ರೂ ಮಾಡಿ ಈ ಸಲ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಣ ತೊಟ್ಟಿದೆ. ಬಹುತೇಕ ಪಂದ್ಯಗಳು ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲೇ ನಡೆಯಲಿದ್ದು, ಹಾಗಾಗಿ ಕರ್ನಾಟಕದ ಆಟಗಾರರ ಮೇಲೆ ಆರ್​​ಸಿಬಿ ಹದ್ದಿನ ಕಣ್ಣಿಟ್ಟಿದೆ.

ಸದ್ಯ 18ನೇ ಐಪಿಎಲ್​ ಸೀಸನ್​ ಕಾವು ಜೋರಾಗಿದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಆಕ್ಷನ್​​​ಗೆ ಈಗಿನಿಂದಲೇ ಸಿದ್ದತೆಗಳು ಭರದಿಂದ ಸಾಗಿವೆ. ಈ ಮುನ್ನವೇ ಆರ್​​ಸಿಬಿ ರೀಟೈನ್​ ಲಿಸ್ಟ್​ ಮಾಡಿಕೊಂಡಿದೆ. ಯಾರನ್ನು ರಿಲೀಸ್​ ಮಾಡಲಿದೆ ಎನ್ನುವ ಮಾಹಿತಿ ಇನ್ನೂ ಕೊಟ್ಟಿಲ್ಲ. ಆರ್​​ಸಿಬಿ ತಂಡದ ಕ್ಯಾಪ್ಟನ್​ ಆಗಿ ಕೆ.ಎಲ್​ ರಾಹುಲ್​ ಎಂಟ್ರಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಇದರ ಮಧ್ಯೆ ಮತ್ತೋರ್ವ ಕನ್ನಡಿಗ ಮೇಲೆ ಆರ್​​ಸಿಬಿ ಕಣ್ಣು ಹಾಕಿದೆ. ಕೆ.ಎಲ್​ ರಾಹುಲ್​ ಜೊತೆ ಆರ್​ಸಿಬಿ ಕಣ್ಣಿಟ್ಟ ಪ್ಲೇಯರ್​ ಬೇರಾರು ಅಲ್ಲ, ಬದಲಿಗೆ ಅಭಿನವ್​ ಮನೋಹರ್​.

ಅಭಿನವ್​​​​​​​ ಮನೋಹರ್​​​ಗೆ RCB ಗಾಳ!

ಅಭಿನವ್ ಮನೋಹರ್​​​..! ಪ್ರಸಕ್ತ ಮಹಾರಾಜ ಟ್ರೋಫಿಯಲ್ಲಿ ಮಾಸ್​​ ಆಟದಿಂದ ಎಲ್ಲರನ್ನ ರಂಜಿಸ್ತಾರೆ. ಟೂರ್ನಿ ಆರಂಭದಿಂದ ಲೀಗ್​​​ಹಂತದ ಕೊನೆ ಪಂದ್ಯವರೆಗೂ ರನ್ ಮಳೆಯನ್ನೆ ಸುರಿಸಿದ್ದಾರೆ. ದಂಡಂ ದಶಗುಣಂ ಆಟ.. ಪವರ್​ ಹಿಟ್ಟಿಂಗ್ ಬ್ಯಾಟಿಂಗ್​​​, ಬೌಲರ್ಸ್​ ದಂಡೆತ್ತಿದ ಪರಿಗೆ ಕ್ರಿಕೆಟ್ ಲೋಕವೇ ಮಂತ್ರ ಮುಗ್ಧವಾಗಿದೆ.

ಮಹಾರಾಜ ಟ್ರೋಫಿಯಲ್ಲಿ ಅಭಿನವ್

ಮಹಾರಾಜ ಟ್ರೋಫಿಯಲ್ಲಿ ಶಿವಮೊಗ್ಗ ಲಯನ್ಸ್​​ ತಂಡದ ಅಭಿನವ್ ಮನೋಹರ್​​​ 10 ಪಂದ್ಯಗಳನ್ನ ಆಡಿದ್ದಾರೆ. ಆ ಪೈಕಿ 196.51ರ ಸ್ಟ್ರೈಕ್​ರೇಟ್​ನಲ್ಲಿ ಅತ್ಯಧಿಕ 570 ರನ್ ಸಿಡಿಸಿದ್ದಾರೆ. ಇದ್ರಲ್ಲಿ 6 ಅರ್ಧಶತಕಗಳು ಸೇರಿಕೊಂಡಿವೆ. ಅಭಿನವ್​​ ಹೊಡೆದಿರೋ 507 ರನ್ ಪೈಕಿ ಸಿಕ್ಸರ್​ಗಳಿಂದಲೇ 312 ರನ್ ಗಳಿಸಿದ್ದಾರೆ. ಕರ್ನಾಟಕದ ಈ ಡೇರ್​ಡೆವಿಲ್ ಟೂರ್ನಿಯಲ್ಲಿ ಬರೋಬ್ಬರಿ 52 ಸಿಕ್ಸರ್​ಗಳನ್ನ ಚಚ್ಚಿದ್ದಾರೆ. ಅಭಿನವ್​​ರ ಈ ನಿರ್ಭೀತಿ ಆಟಕ್ಕೆ ಆರ್​ಸಿಬಿ ಇಂಪ್ರೆಸ್ ಆಗಿದೆ. ಹೀಗಾಗಿ ಹರಾಜಿನಲ್ಲಿ ಬಿಗ್​ ಹಿಟ್ಟರ್​​​ಗೆ ಗಾಳ ಹಾಕಲು ಪಕ್ಕಾ ಪ್ಲಾನ್ ಮಾಡಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

KL ರಾಹುಲ್​​, ಕರುಣ್​​ ನಾಯರ್​ ಅಲ್ಲ; ಆರ್​​​ಸಿಬಿಗೆ ಮತ್ತೋರ್ವ ಸ್ಟಾರ್ ಕನ್ನಡಿಗ ಎಂಟ್ರಿ!

https://newsfirstlive.com/wp-content/uploads/2024/04/Kohli_Andy-Flower.jpg

Load More