/newsfirstlive-kannada/media/post_attachments/wp-content/uploads/2024/03/RCB-UNbox.jpg)
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ವೇಳಾಪಟ್ಟಿ ಈಗಾಗಲೇ ರಿಲೀಸ್ ಆಗಿದ್ದು ಫ್ರಾಂಚೈಸಿಗಳು ಹೊಸ ಜೋಶ್ನಲ್ಲಿವೆ. ತಂಡಗಳು ಟ್ರೋಫಿ ಗೆಲ್ಲುವ ಭರವಸೆಯಲ್ಲಿ ಮೈದಾನದಲ್ಲಿ ಕಾದಾಟ ನಡೆಸಲಿವೆ. ಈ ಸಲದ ಉದ್ಘಾಟನಾ ಪಂದ್ಯವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನಡುವೆ ನಡೆಯಲಿದೆ. ಇದರ ನಡುವೆಯೇ ಆರ್ಸಿಬಿಯ ಅನ್ ಬಾಕ್ಸ್ ಇವೆಂಟ್ನ ಹೊಸ ಡೇಟ್ ಅನೌನ್ಸ್ ಮಾಡಲಾಗಿದೆ.
ಸದ್ಯ ಇದೀಗ ದೊರೆತ ಮಾಹಿತಿ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್ ಬಾಕ್ಸ್ ಇವೆಂಟ್ ಅನ್ನು ಮಾರ್ಚ್ 15ರ ಬದಲಾಗಿ 17 ರ ಸಂಜೆ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಸಲಾಗುತ್ತದೆ. ಈ ದಿನಾಂಕ ಬದಲಾವಣೆ ಮಾಡಲು ಮುಖ್ಯ ಕಾರಣ ಎಂದರೆ, ಮಾರ್ಚ್ 15 ರಂದು ಡಬ್ಲುಪಿಎಲ್ ಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ:ರೋಹಿತ್- ಗಂಭೀರ್ ಮಧ್ಯೆ ಟಾಕ್ ವಾರ್.. ವಿಕೆಟ್ ಕೀಪರ್, ಸ್ಪಿನ್ನರ್ಗಾಗಿ ಬಿಗ್ ಫೈಟ್
ಒಂದು ವೇಳೆ ಆರ್ಸಿಬಿ ಯುವತಿಯರು ಫೈನಲ್ಗೆ ಬಂದು ಮತ್ತೊಮ್ಮೆ ಟ್ರೋಫಿಗೆ ಮುತ್ತಿಟ್ಟರೇ, ಅವರಿಗೆ ವಿಶೇಷ ಸನ್ಮಾನ ಮಾಡಬೇಕಾಗುತ್ತದೆ. ಏಕೆಂದರೆ ಈಗಾಗಲೇ ಮೊದಲ ಟ್ರೋಫಿ ಗೆದ್ದಿರುವ ಆರ್ಸಿಬಿ ಯುವತಿಯರು 2ನೇ ಟ್ರೋಫಿಯ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ 2025ರ ಡಬ್ಲುಪಿಎಲ್ನಲ್ಲಿ ಆರ್ಸಿಬಿ ಗರ್ಲ್ಸ್ 2ಕ್ಕೆ 2 ಪಂದ್ಯ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅನ್‌ಬಾಕ್ಸ್ ಕಾರ್ಯಕ್ರಮವನ್ನು ಮಾರ್ಚ್ 17 ರಂದು ನಿಗದಿ ಮಾಡಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಅನ್ ಬಾಕ್ಸ್ ಇವೆಂಟ್ ಅನ್ನು ಮಾರ್ಚ್ 15 ರಂದು ನಡೆಸುವುದಾಗಿ ಘೋಷಣೆ ಮಾಡಿತ್ತು. ಇದಕ್ಕಾಗಿ ಅಭಿಮಾನಿಗಳು ಕೂಡ ಕುತೂಹಲದಿಂದ ಕಾಯುತ್ತಿದ್ದರು. ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಫ್ರಾಂಚೈಸಿ ಏನೆಲ್ಲಾ ಮಾಡಲಿದೆ, ಯಾರನ್ನ ಆಹ್ವಾನ ಮಾಡಲಿದೆ, ಕಳೆದ ಬಾರಿ ಇದು ಹೊಸ ಅಧ್ಯಾಯ ಎನ್ನುವುದು ಸಖತ್ ಕಿಕ್ ಕೊಟ್ಟಿತ್ತು. ಅದರಂತೆ ಈ ಬಾರಿ ಕೊಹ್ಲಿ ಏನಾದರೂ ಹೊಸದು ಹೇಳುತ್ತಾರಾ ಎಂದು ಫ್ಯಾನ್ಸ್ ಕಾತುರದಲ್ಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ