21 ರನ್​ ನೀಡಿ 3 ವಿಕೆಟ್ ಕಿತ್ತ ಹೇಜಲ್​ವುಡ್..​ ವಿನ್ನಿಂಗ್ ದೃಶ್ಯ ಹಂಚಿಕೊಂಡ ಆರ್​ಸಿಬಿ -VIDEO

author-image
Ganesh
Updated On
21 ರನ್​ ನೀಡಿ 3 ವಿಕೆಟ್ ಕಿತ್ತ ಹೇಜಲ್​ವುಡ್..​ ವಿನ್ನಿಂಗ್ ದೃಶ್ಯ ಹಂಚಿಕೊಂಡ ಆರ್​ಸಿಬಿ -VIDEO
Advertisment
  • ಬೌಲಿಂಗ್​ನಲ್ಲೂ ರಾಯಲ್​ ಚಾಲೆಂಜರ್ಸ್​​ ಪರಾಕ್ರಮ
  • ಚೆಪಾಕ್​ನಲ್ಲಿ ಆರ್​​ಸಿಬಿ ಬೌಲರ್​ಗಳದ್ದೇ ದರ್ಬಾರ್​
  • ಆರ್​​ಸಿಬಿ ಅಬ್ಬರಕ್ಕೆ ಚೆನ್ನೈ ಬ್ಯಾಟರ್ಸ್​​ ಸೈಲೆಂಟ್​

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರಾಕ್ರಮ ಬೌಲಿಂಗ್​ನಲ್ಲೂ ಮುಂದುವರೆಯಿತು. ಚೆನ್ನೈನಲ್ಲಿ ಮ್ಯಾಜಿಕ್​ ಮಾಡಿದ ಬೆಂಗಳೂರು ಬಾಯ್ಸ್​​​ ಸೂರ್​​ ಕಿಂಗ್​ಗಳ ಪವರ್​ ಕಟ್ ಮಾಡಿದ್ರು. ಆರ್​​ಸಿಬಿಯ ಕರಾರುವಕ್​ ದಾಳಿಯ ಮುಂದೆ ಸಿಎಸ್​ಕೆ ಬ್ಯಾಟ್ಸ್​ಮನ್​ಗಳು ಮಂಡಿಯೂರಿದ್ರು.

197 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಚೆನ್ನೈ ಸೂಪರ್​ ಕಿಂಗ್ಸ್​​ ತಂಡಕ್ಕೆ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಶಾಕ್​ ಮೇಲೆ ಶಾಕ್​ ಕೊಡ್ತು. ಚೆಪಾಕ್​​ ಅಂಗಳದಲ್ಲಿ ಆರ್​​ಸಿಬಿ ಬೌಲರ್ಸ್​ ಪವರ್​ಫುಲ್​ ಬೌಲಿಂಗ್​ ಮಾಡಿದ್ರು. ಪವರ್​ ಪ್ಲೇನಲ್ಲೇ ಚೆನ್ನೈ ಬ್ಯಾಟ್ಸ್​ಮನ್​ಗಳ ಪವರ್​ ಕಟ್​ ಮಾಡಿದ್ರು.

ಜೋಷ್​ ಹೇಜಲ್​ವುಡ್​ ಜೋಷ್​ ಮುಂದೆ ಅರಂಭಿಕನಾಗಿ ಕಣಕ್ಕಿಳಿದ ರಾಹುಲ್​ ತ್ರಿಪಾಠಿಗೆ ಮುಂದೆ ಮಂಕಾದ್ರು. ಕ್ಯಾಪ್ಟನ್​ ಋತುರಾಜ್​ ಗಾಯಕ್ವಾಡ್​ ಆಟವೂ ಹೇಜಲ್​ವುಡ್​ ಮುಂದೆ ನಡೀಲಿಲ್ಲ. ಹೋಮ್​ಗ್ರೌಂಡ್​ನಲ್ಲಿ ಸಿಎಸ್​ಕೆ ಕ್ಯಾಪ್ಟನ್​ ಡಕೌಟ್​ ಆಗಿ ನಿರ್ಗಮಿಸಿದ್ರು.
ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಸ್ವಿಂಗ್​ ಕಿಂಗ್​ ಭುವನೇಶ್ವರ್​ ಕುಮಾರ್​ ಸಿಎಸ್​ಕೆ ಎದುರು ಕಣಕ್ಕಿಳಿದ್ರು. ಪವರ್​ ಪ್ಲೇನಲ್ಲೇ ಮ್ಯಾಜಿಕ್​ ಮಾಡಿದ ಭುವಿ, ದೀಪಕ್​ ಹೂಡಾ ವಿಕೆಟ್​ ಉರುಳಿಸಿದ್ರು. 26 ರನ್​ಗಳಿಗೆ 3 ವಿಕೆಟ್​​ ಕಳೆದುಕೊಂಡ ಚೆನ್ನೈ ಸಂಕಷ್ಟಕ್ಕೆ ಸಿಲುಕಿದ್ರೆ, ಆರ್​​ಸಿಬಿ ಆರಂಭಿಕ ಮೇಲುಗೈ ಸಾಧಿಸಿತು.

ಇದನ್ನೂ ಓದಿ: ಹೊಸ ಸ್ಟಾರ್ ಉದಯ..13 ಬಾಲ್​​ನಲ್ಲಿ 34 ರನ್ ಚಚ್ಚಿದ ಅನಿಕೇತ್ ವರ್ಮಾ ಯಾರು?

publive-image

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸ್ಯಾಮ್​ ಕರನ್​ ಆಟಕ್ಕೆ ಸ್ಪಿನ್​ ಮ್ಯಾಜಿಕ್​ ಮಾಡಿದ ಲಿವಿಂಗ್​ ಸ್ಟೋನ್​ ಫುಲ್​ ಸ್ಟಾಫ್​ ಇಟ್ರು. ಒಂದೆಡೆ ವಿಕೆಟ್​ ಹೋದ್ರೂ ಇನ್ನೊಂದು ತುದಿಯಲ್ಲಿ ಹೋರಾಟ ನಡೆಸ್ತಿದ್ದ ರಚಿನ್​ ರವೀಂದ್ರ ಚೆನ್ನೈ ಫ್ಯಾನ್ಸ್​​ ಭರವಸೆ ಎನಿಸಿದ್ರು. ರಚಿನ್​ ರವೀಂದ್ರ 5 ಬೌಂಡರಿಗಳನ್ನ ಬಾರಿಸಿದ್ರು.

31 ಎಸೆತಗಳಲ್ಲಿ 41 ರನ್​ಗಳಿಸಿದ ರಚಿನ್​ ರವೀಂದ್ರ ಆಟ ಯಶ್​ ದಯಾಳ್​ ಮುಂದೆ ನಡೀಲಿಲ್ಲ. ಯಶ್​ ದಯಾಳ್​ ಎಸೆದ ಪವರ್​ಫುಲ್​ ಎಸೆತಕ್ಕೆ ರಚಿನ್​ ರವೀಂದ್ರ ಕ್ಲೀನ್​ಬೋಲ್ಡ್​ ಆದ್ರು. 19 ರನ್​ಗಳಿಸಿದ್ದ ಶಿವಂ ದುಬೆಯ ಆಟಕ್ಕೂ ಅಷ್ಟೇ ಯಶ್​ ದಯಾಳ್​ ಫುಲ್​ ಸ್ಟಾಫ್​ ಇಟ್ರು.
ಬ್ಯಾಟಿಂಗ್​ನಲ್ಲಿ ಬಡ್ತಿ ಪಡೆದುಕೊಂಡು ಕಣಕ್ಕಿಳಿದ ರವಿಚಂದ್ರನ್​ ಅಶ್ವಿನ್​ 11 ರನ್​ಗಳಿಗೆ ಸುಸ್ತಾದ್ರು. 2 ಬೌಂಡರಿ,1 ಸಿಕ್ಸರ್​​ ರವೀಂದ್ರ ಜಡೇಜಾ ಆಟವೂ 25 ರನ್​ಗಳಿಗೆ ಅಂತ್ಯವಾಯ್ತು. ಡೆತ್​​ ಓವರ್​ಗಳಲ್ಲೂ ಮಿಂಚಿದ ಹೇಜಲ್​ವುಡ್​ ಜಡೇಜಾ ವಿಕೆಟ್​ ಉರುಳಿಸಿದ್ರು.

ಇದನ್ನೂ ಓದಿ: 6, 6, 4, 4, 4 ! ಚೆಪಾಕ್​ನಲ್ಲಿ ತಲಾ ದರ್ಶನ; ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ ಧೋನಿ..! VIDEO

publive-image

ಅಂತಿಮ ಹಂತದಲ್ಲಿ ಸ್ಟೇಡಿಯಂನಲ್ಲಿ ಬಿರುಸಿನ ಆಟವಾಡಿದ ಎಮ್​​,ಎಸ್​ ಧೋನಿಯ ಕಾದು ಕುಳಿತಿದ್ದ ಅಭಿಮಾನಿಗಳನ್ನ ರಂಜಿಸಿದ್ರು. 3 ಬೌಂಡರಿ, 2 ಸಿಕ್ಸ್​​ ಸಿಡಿಸಿದ ಧೋನಿ ಜಸ್ಟ್​ 16 ಎಸೆತಗಳಲ್ಲಿ ಅಜೇಯ 30 ರನ್​ ಗಳಿಸಿದ್ರು.

ಧೋನಿ ಅಜೇಯವಾಗುಳಿದ್ರೂ ಸಿಎಸ್​ಕೆಯನ್ನ ಜಯದ ದಡ ಸೇರಿಸಲಾಗಲಿಲ್ಲ. 20 ಓವರ್​ಗಳ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡ ಸಿಎಸ್​ಕೆ ಕೇವಲ 146 ರನ್​ಗಳಿಸಿತು. ಬ್ಯಾಟಿಂಗ್​, ಬೌಲಿಂಗ್​​​ ಎರಡರಲ್ಲೂ ಆಲ್​ರೌಂಡ್​ ಆಟವಾಡಿದ ಆರ್​​​ಸಿಬಿ 50 ರನ್​ಗಳ ಭರ್ಜರಿ ಜಯ ಸಾಧಿಸಿದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭ್ರದಪಡಿಸಿಕೊಂಡಿತು. ಜೊತೆಗೆ ಚೆಪಾಕ್​ನಲ್ಲಿ ಚೆನ್ನೈ ವಿರುದ್ಧ 2008ರ ಬಳಿಕ ಮೊದಲ ಬಾರಿಗೆ ಜಯ ಸಾಧಿಸಿದ ಸಾಧನೆ ಮಾಡಿತು. ಇನ್ನು ಗೆದ್ದ ಬೆನ್ನಲ್ಲೇ ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ವಿನ್ನಿಂಗ್ ದೃಶ್ಯವನ್ನು ಹಂಚಿಕೊಂಡಿದೆ.

ಇದನ್ನೂ ಓದಿ: ಕೊನೆಯಲ್ಲಿ RCB ಸ್ಕೋರ್​​ ಹೆಚ್ಚಿಸಿದ್ದೇ ಟಿಮ್ ಡೇವಿಡ್.. ಚಾಣಕ್ಯ ಧೋನಿ ಕೈಚಳಕ ಹೇಗಿತ್ತು..? Video

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment