ಕೊನೆ ಬಾಲ್​ವರೆಗೆ ರಣರೋಚಕ ಐಪಿಎಲ್ ಮ್ಯಾಚ್.. ಮುಂಬೈ ವಿರುದ್ಧ RCB ಜಯಭೇರಿ

author-image
Bheemappa
Updated On
ಕೊನೆ ಬಾಲ್​ವರೆಗೆ ರಣರೋಚಕ ಐಪಿಎಲ್ ಮ್ಯಾಚ್.. ಮುಂಬೈ ವಿರುದ್ಧ RCB ಜಯಭೇರಿ
Advertisment
  • ಮುಂಬೈ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಭಾರೀ ಬ್ಯಾಟಿಂಗ್ ಬಲ
  • RCB ನಾಯಕ ರಜತ್ ಪಾಟಿದಾರ್ ಬ್ಯಾಟಿಂಗ್​ಗೆ ಫ್ಯಾನ್ಸ್​ ಫಿದಾ
  • ಸಿಕ್ಸರ್​ ಸಿಡಿಸಿ ಅರ್ಧಶತಕ ಬಾರಿಸಿದ ಆರ್​ಸಿಬಿ ಸ್ಟಾರ್ ವಿರಾಟ್​​​

ಕ್ಯಾಪ್ಟನ್​ ರಜತ್ ಪಾಟಿದಾರ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಸಿಡಿಲಬ್ಬರದ ಬ್ಯಾಟಿಂಗ್​ನಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಮ್ ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ವಾಂಖೆಡೆ ಸ್ಟೇಡಿಯಂನಲ್ಲಿ 10 ವರ್ಷಗಳ ಬಳಿಕ ಅಮೋಘವಾದ ಜಯ ಪಡೆದಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಕ್ಯಾಪ್ಟನ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಆರ್​​ಸಿಬಿ ಪರ ಓಪನರ್​ಗಳಾದ ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಕ್ರೀಸ್​ಗೆ ಆಗಮಿಸಿದರು. ಆದರೆ ಈ ಇಬ್ಬರೂ ಉತ್ತಮ ಆರಂಭ ಪಡೆಯುವ ಮೊದಲೇ ಮುಂಬೈ ಪರ ಬೌಲರ್​ ಟ್ರೆಂಟ್ ಬೋಲ್ಟ್, ಫಿಲಿಪ್ ಸಾಲ್ಟ್ ಅವರನ್ನು 4 ರನ್​ಗೆ ಕ್ಲೀನ್ ಬೋಲ್ಡ್ ಮಾಡಿದರು.

ಇದನ್ನೂ ಓದಿ:ಮೊದಲ ಓವರ್​​ನಲ್ಲೇ RCB ವಿಸ್ಫೋಟಕ ಬ್ಯಾಟರ್ ಕ್ಲೀನ್ ಬೋಲ್ಡ್​

publive-image

ವಿರಾಟ್​ ಕೊಹ್ಲಿ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ಮಾಡಿ ಹಾಫ್​ಸೆಂಚುರಿ ಸಿಡಿಸಿದರು. ಕೇವಲ 29 ಎಸೆತ ಎದುರಿಸಿದ ವಿರಾಟ್ 6 ಬೌಂಡರಿ, 2 ಸಿಕ್ಸರ್​ನಿಂದ ಅರ್ಧಶತಕ ಪೂರೈಸಿದರು. ಈ ಮ್ಯಾಚ್​ನಲ್ಲಿ ವಿರಾಟ್ ಒಟ್ಟು 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್​ನಿಂದ 67 ರನ್​ ಸಿಡಿಸಿ ಆಡುವಾಗ ಔಟ್ ಆದರು. ಕನ್ನಡಿಗ ದೇವದತ್ ಪಡಿಕ್ಕಲ್ ಕೇವಲ 22 ಎಸೆತಗಳಲ್ಲಿ 37 ರನ್ ಬಾರಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಕ್ಯಾಪ್ಟನ್ ರಜತ್ ಪಾಟಿದಾರ್, 32 ಬಾಲ್​ಗಳನ್ನು ಆಡಿದ ರಜತ್ 5 ಬೌಂಡರಿ, 4 ಸಿಕ್ಸರ್​ನಿಂದ 64 ರನ್​ ಸಿಡಿಸಿದರು. ವಿಕೆಟ್​ ಕೀಪರ್ ಜಿತೇಶ್ ಶರ್ಮಾ 40 ರನ್ ಚಚ್ಚಿದರು. ಹೀಗಾಗಿ ಆರ್​ಸಿಬಿ 20 ಓವರ್​ನಲ್ಲಿ 5 ವಿಕೆಟ್​ಗೆ 222 ರನ್​ಗಳ ಗುರಿ ನೀಡಿತ್ತು.

ಮುಂಬೈ ಪರವಾಗಿ ಓಪನರ್ ಆಗಿ ಬ್ಯಾಟಿಂಗ್​ಗೆ ಬಂದ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ತಲಾ 17 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ವಿಲ್ ಜಾಕ್ಸ್​ ಕೂಡ ಮತ್ತೆ ವಿಫಲ ಬ್ಯಾಟಿಂಗ್ ಮಾಡಿ ಕೇವಲ 22 ರನ್​ಗೆ ಕೊಹ್ಲಿಗೆ ಕ್ಯಾಚ್ ಕೊಟ್ಟರು. ಸೂರ್ಯಕುಮಾರ್ 28 ರನ್​ನಿಂದ ಉತ್ತಮವಾಗಿ ಬ್ಯಾಟಿಂಗ್ ಮಾಡುವಾಗ ಯಶ್​ ದಯಾಳ್ ಬೌಲಿಂಗ್​ನಲ್ಲಿ ಲಿವಿಂಗ್​​ಸ್ಟ್​ನ್​ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ತಿಲಕ್ ವರ್ಮಾ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ಮಾಡಿ ಅರ್ಧಶತಕ ಸಿಡಿಸಿ ತಂಡಕ್ಕೆ ಕಾಣಿಕೆ ನೀಡಿದರು.

publive-image

ತಿಲಕ್ ವರ್ಮಾ 27 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್​​ನಿಂದ ಅರ್ಧಶತಕ ಗಳಿಸಿ ಆಡುವಾಗ 56 ರನ್​ಗೆ ತಿಲಕ್ ವಿಕೆಟ್ ಒಪ್ಪಿಸಿದರು. ಇವರಾದ ಮೇಲೆ ಹೊಡಿಬಡಿ ಬ್ಯಾಟಿಂಗ್ ಮಾಡುತ್ತಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 15 ಬಾಲ್​ಗೆ 4 ಸಿಕ್ಸರ್​ನಿಂದ 42 ರನ್ ಬಾರಿಸಿ ಬೌಂಡ್ರಿ ಲೈನ್ ಬಳಿ ಕ್ಯಾಚ್ ಕೊಟ್ಟು ಔಟ್ ಆದರು. ತಿಲಕ್ ಹಾಗೂ ಹಾರ್ದಿಕ್​ ಔಟ್ ಆಗಿದ್ದು ಮುಂಬೈ ತಂಡಕ್ಕೆ ಭಾರೀ ಹಿನ್ನಡೆಗೆ ಕಾರಣವಾಯಿತು.

ಮಿಚೆಲ್ ಸ್ಯಾಂಟ್ನರ್ ಸಿಕ್ಸ್ ಬೌಂಡರಿ​ ಬಳಿ ಔಟ್ ಆದ್ರೆ ದೀಪಕ್ ಚಹಾರ್ ಕೂಡ ಸಿಕ್ಸ್​ ಬೌಂಡರಿ ಬಳಿ ವಿಚಿತ್ರ ಕ್ಯಾಚ್​ಗೆ ಔಟ್ ಆದರು. ಕೊನೆ ಓವರ್​ನ 3 ಬಾಲ್​ಗಳಲ್ಲಿ 18 ರನ್​ಗಳು ಬೇಕಿದ್ದವು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ನಮನ್ ಧೀರ್ ಬೌಂಡರಿ ಬಾರಿಸಿ ಮುಂದಿನ ಎಸೆತದಲ್ಲಿ ಔಟ್ ಆದರು. ಕೊನೆ ಬಾಲ್​ಗೆ 13 ರನ್​ ಬೇಕಿದ್ದವು. ಇದು ಸಾಧ್ಯವಾಗದ ಕಾರಣ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್​ ಸೋಲು ಒಪ್ಪಿಕೊಂಡು ಸಪ್ಪೆ ಮುಖದಲ್ಲಿ ಎಲ್ಲರಿಗೂ ಶೇಕ್ ಹ್ಯಾಂಡ್  ಮಾಡಿತು. ಇನ್ನು ಆರ್​ಸಿಬಿ 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ರೋಚಕವಾಗಿ ಗೆದ್ದು ಇತಿಹಾಸ ಬರೆಯಿತು

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment