newsfirstkannada.com

RCB ಇಂದ ಈ 3 ಆಟಗಾರರು ಮಾತ್ರ ರಿಟೈನ್; ಉಳಿದವರಿಗೆ ಗೇಟ್​ಪಾಸ್​..!

Share :

Published July 28, 2024 at 1:10pm

    2025ನೇ IPL ಚಾಂಪಿಯನ್​ ಪಟ್ಟಕ್ಕೇರಲು RCB ಪಣ

    18ನೇ ಸೀಸನ್​​ಗೆ RCB ತಂಡದಲ್ಲಿ ಭಾರಿ ಬದಲಾವಣೆ

    ಡಿಸೆಂಬರ್​​ನಲ್ಲಿ ನಡೆಯಲಿರೋ ಆಟಗಾರರ ಮೆಗಾ ಆಕ್ಷನ್

2025ನೇ ಐಪಿಎಲ್​​​​ ಮೆಗಾ ಆಕ್ಷನ್ ಆರಂಭಕ್ಕೆ ಕೆಲವೇ ತಿಂಗಳು ಬಾಕಿ ಇವೆ. ಅದಕ್ಕೂ ಮುನ್ನ ಯಾವ ಫ್ರಾಂಚೈಸಿ, ಯಾರನ್ನ ರಿಟೇನ್ ಮಾಡಿಕೊಳ್ಳುತ್ತೆ? ಯಾರನ್ನೆಲ್ಲಾ ರಿಲೀಸ್ ಮಾಡುತ್ತೆ ಅನ್ನೋ ಕುತೂಹಲ ಗರಿಗೆದರಿದೆ.

ಚಾಂಪಿಯನ್​ ಪಟ್ಟಕ್ಕೇರಲು RCB ಪಣ..!
ರಾಯಲ್​​ ಚಾಲೆಂಜರ್ಸ್​ ಬೆಂಗಳೂರು. ಐಪಿಎಲ್​​ ಲೋಕದ ಬಲಿಷ್ಠ ಹಾಗೂ ಜನಪ್ರಿಯ​​​​ ತಂಡಗಳಲ್ಲಿ ಒಂದೆನಿಸಿಕೊಂಡಿದೆ. 17 ಆವೃತ್ತಿ ಕಳೆದ್ರೂ ಟ್ರೋಫಿ ಗೆಲ್ಲದ ಕೊರಗು ಕಾಡ್ತಿದೆ. ವರ್ಲ್ಡ್ ಕ್ಲಾಸ್​​​​ ಪ್ಲೇಯರ್ಸ್​, ಹಲವು ನಾಯಕರು ಹಾಗೂ ಕೋಚ್​​ಗಳು ಬಂದು ಹೋದರೂ ಕಪ್​​​​​ ಮಾತ್ರ ಮರೀಚಿಕೆ ಆಗಿದೆ. ಮುಂದಿನ ಸಲ ಹೇಗಾದರೂ ಮಾಡಿ ಸುದೀರ್ಘ ಕಪ್​​ ವನವಾಸಕ್ಕೆ ಬ್ರೇಕ್ ಹಾಕಿಯೇ ತೀರಲು ಆರ್​ಸಿಬಿ ಪಣ ತೊಟ್ಟಿದೆ. ಅದಕ್ಕಾಗಿ ತಂಡದಲ್ಲಿ ಮೇಜರ್ ಸರ್ಜರಿಗೆ ಕೈಹಾಕಿದೆ.

ಇದನ್ನೂ ಓದಿ:23 ಎಸೆತದಲ್ಲಿ 20 ರನ್​​.. ಕೊನೆ 10 ಬಾಲ್​ನಲ್ಲಿ ಪಂತ್ ಬೆಂಕಿ, ಬಿರುಗಾಳಿ..!

ಇದೇ ವರ್ಷಾಂತ್ಯದಲ್ಲಿ ಮೆಗಾ ಆಕ್ಷನ್​ ನಡೆಯಲಿದೆ. ಚೊಚ್ಚಲ ಟ್ರೋಫಿ ಕನಸು ಕಾಣ್ತಿರೋ ಆರ್​ಸಿಬಿ ತಂಡ ಕೇವಲ ಮೂವರು ಆಟಗಾರರನ್ನಷ್ಟೇ ಉಳಿಸಿಕೊಂಡು, ಉಳಿದೆಲ್ಲಾ ಆಟಗಾರರಿಗೆ ಗೇಟ್​ಪಾಸ್​ ನೀಡಲು ಚಿಂತಿಸಿದೆ. ಆ ಮೂಲಕ 2025ನೇ ಐಪಿಎಲ್​ನಲ್ಲಿ ನಯಾ ಆರ್​ಸಿಬಿ ತಂಡವನ್ನು ಕಟ್ಟಲು ಫ್ರಾಂಚೈಸಿ ಸಜ್ಜಾಗಿದೆ.

RCB ಉಳಿಸಿಕೊಳ್ಳುವ ಆಟಗಾರರು?
ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನ ಆರ್​ಸಿಬಿ ತಂಡ 15 ಕೋಟಿ ರೂಪಾಯಿ ನೀಡಿ ತನ್ನಲ್ಲಿ ಉಳಿಸಿಕೊಳ್ಳುವುದು ಬಹುತೇಕ ಪಕ್ಕಾ ಆಗಿದೆ. ಆಲ್​ರೌಂಡರ್ ವಿಲ್​​ ಜಾಕ್ಸ್​ 3.2 ಕೋಟಿ ರೂಪಾಯಿ ಹಾಗೂ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್​​ ಕೂಡ 8 ಕೋಟಿ ರೂಪಾಯಿಗೆ ರಿಟೇನ್ ಆಗೋ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ:ಬೂಮ್ರಾಗೆ ಬಿಗ್ ಶಾಕ್.. ಟೆಸ್ಟ್​ ತಂಡದ ಉಪನಾಯಕನ ಪಟ್ಟದಿಂದ ಕೊಕ್..!

ಕಿಂಗ್ ಕೊಹ್ಲಿ ಸ್ಥಾನ ಸೇಫ್​​
ಆರ್​ಸಿಬಿಗೆ ಇಷ್ಟೊಂದು ನೇಮ್​ ಅಂಡ್ ಫೇಮ್​​​​​​​​ ಇದೆ ಅಂದ್ರೆ ಅದಕ್ಕೆ ಕಾರಣನೇ ಕಿಂಗ್​ಕೊಹ್ಲಿ. ಅವರು ತಂಡದ ಆಪತ್ಬಾಂಧವ. ಆರ್​ಸಿಬಿ ಪರ 252 ಪಂದ್ಯವಾಡಿ 8004 ರನ್ ಚಚ್ಚಿದ್ದಾರೆ. ಕಳೆದ ಸೀಸನ್​ನಲ್ಲಿ ಅಬ್ಬರಿಸಿ ಬೊಬ್ಬರಿದ ವಿರಾಟ್ 154.70 ಸ್ಟ್ರೈಕ್​ ರೇಟ್​​ನಲ್ಲಿ 741 ಚಚ್ಚಿ ಶೈನ್ ಆಗಿದ್ರು. ಇಂತಹ ಮ್ಯಾಚ್ ವಿನ್ನರ್ ರಿಟೇನ್​ ಲಿಸ್ಟ್​​ನಲ್ಲಿ ಅಗ್ರಸ್ಥಾನದಲ್ಲಿದ್ದು, ಆರ್​ಸಿಬಿ ಬಹುಪರಾಕ್ ಅನ್ನುವುದು ಗ್ಯಾರಂಟಿ.

​ವಿಲ್​ ಜಾಕ್ಸ್ ಕೈಬಿಡಲ್ಲ ಫ್ರಾಂಚೈಸಿ
ಕಿಂಗ್ ಕೊಹ್ಲಿ ಬಳಿಕ​​​ ಆರ್​ಸಿಬಿ ತಂಡದಲ್ಲಿ ಉಳಿದುಕೊಳ್ಳುವ 2ನೇ ಆಟಗಾರ ಅಂದ್ರೆ ಆಲ್​ರೌಂಡರ್​​ ವಿಲ್​​​​​​​​​​​​​​​​​ ಜಾಕ್ಸ್​. ಇಂಗ್ಲೆಂಡ್​ ಬ್ಯಾಟರ್ ಕಳೆದ ಸೀಸನ್​​ನಲ್ಲಿ ಮಿಂಚು ಹರಿಸಿದ್ರು. 41 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಎಲ್ಲರನ್ನ ನಿಬ್ಬೆರಗಾಗಿಸಿದ್ರು. 8 ಇನ್ನಿಂಗ್ಸ್​ನಿಂದ 230 ರನ್ ಗಳಿಸಿದ ಜಾಕ್ಸ್​ ನಂಬಿಕೆ ಉಳಿಸಿಕೊಂಡಿದ್ದಾರೆ. ಬ್ಯಾಟಿಂಗ್​ ಜೊತೆ ಬೌಲಿಂಗ್​​ನಲ್ಲಿ ನೆರವಾಗಬಲ್ಲ ಬಹುಮುಖ ಪ್ರತಿಭೆ. ಹೀಗಾಗಿ ಆರ್​ಸಿಬಿ ಬಿಗ್​ ಹಿಟ್ಟರ್​ಗೆ ಮನ್ನಣೆ ಹಾಕುವುದು ಪಕ್ಕಾ. ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಕೂಡ ನಂಬಿಗಸ್ಥ ಬೌಲರ್​. ಇನ್​ಕನ್ಸಿಸ್ಟನ್ಸಿ ಪರ್ಫಾಮೆನ್ಸ್ ನೀಡ್ತಿದ್ದಾರೆ ನಿಜ. ಆದರೂ ಸಿರಾಜ್​ರನ್ನ ರಿಟೇನ್ ಮಾಡಿಕೊಳ್ಳುವ ಚಾನ್ಸಸ್ ಜಾಸ್ತಿ ಇದೆ. ಯಾಕಂದ್ರೆ ಸಿರಾಜ್​ ಒಬ್ಬರೇ ಆರ್​ಸಿಬಿ ತಂಡದಲ್ಲಿರೋ ದೇಸಿ ಸ್ಟಾರ್ ಬೌಲರ್​​. ಹೆಚ್ಚು ಅನುಭವ ಬೇರೆ ಇದೆ. ಈ ಕಾರಣಕ್ಕಾಗಿ ಸಿರಾಜ್​​​ರನ್ನ ಉಳಿಸಿಕೊಳ್ಳಲು ಆರ್​ಸಿಬಿ ಪ್ಲಾನ್ ಮಾಡಿದೆ.

ಇದನ್ನೂ ಓದಿ:ಅರ್ಜುನ, ಜಗನ್ನಾಥ್, ಲೋಕೇಶ್ ಇನ್ನೂ ಪತ್ತೆ ಇಲ್ಲ.. ಈಶ್ವರ್ ಮಲ್ಪೆ ತಂಡ ಇವತ್ತು ಏನ್ಮಾಡುತ್ತೆ..?

ಮೆಗಾ ಆಕ್ಷನ್​​​ ಮುನ್ನ ಪ್ರತಿ ತಂಡಕ್ಕೆ ಮೂರು ಅಥವಾ ನಾಲ್ಕು ಆಟಗಾರರನ್ನ ಉಳಿಸಿಕೊಳ್ಳಲು ಅವಕಾಶ ಇದೆ. ಒಂದು ವೇಳೆ ಈ ಸಂಖ್ಯೆಯನ್ನೇ ಆರ್​ಸಿಬಿ ನಾಲ್ಕಕ್ಕೆ ಏರಿಸಿದ್ರೆ ರಜತ್ ಪಟೀದಾರ್​​ಗೆ ರಿಟೇನ್ ಭಾಗ್ಯ ಒಲಿಯಲಿದೆ. ಆದ್ರೆ ಫೈನಲಿ ಆರ್​ಸಿಬಿ ಫ್ರಾಂಚೈಸಿ ಎಷ್ಟು ಆಟಗಾರರನ್ನ ಉಳಿಸಿಕೊಳ್ಳುತ್ತೆ ? ಯಾರನ್ನೆಲ್ಲಾ ರಿಲೀಸ್ ಮಾಡುತ್ತೆ ಅನ್ನೋದನ್ನ ಕಾದು ನೋಡೋಣ.

ಇದನ್ನೂ ಓದಿ:ಸ್ಟಾರ್​ ಬೌಲರ್ಸ್ ನಾಚುವಂತೆ ಬೌಲಿಂಗ್.. ಕೇವಲ 14 ಬಾಲ್​​ನಲ್ಲಿ ಲಂಕಾ ಪಡೆಯ ಬೆನ್ನೆಲುಬು ಮುರಿದ ಪರಾಗ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಇಂದ ಈ 3 ಆಟಗಾರರು ಮಾತ್ರ ರಿಟೈನ್; ಉಳಿದವರಿಗೆ ಗೇಟ್​ಪಾಸ್​..!

https://newsfirstlive.com/wp-content/uploads/2024/07/RCB.jpg

Load More