/newsfirstlive-kannada/media/post_attachments/wp-content/uploads/2024/11/Pant_KL-Rahul.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಭಾರೀ ರೋಚಕತೆಯಿಂದ ಕೂಡಿರಲಿದೆ. ಇದಕ್ಕೆ ಕಾರಣ ವರ್ಷದ ಕೊನೆಗೆ ನಡೆಯಲಿರೋ ಮೆಗಾ ಆಕ್ಷನ್ಗೆ ಸ್ಟಾರ್ ಆಟಗಾರರೇ ಎಂಟ್ರಿ ನೀಡಲಿದ್ದಾರೆ. ಅದರಲ್ಲೂ ಈ ಅತೀ ಹೆಚ್ಚು ನಾಯಕರು ಆಕ್ಷನ್ಗೆ ಬರುತ್ತಿರೋದು ಅಚ್ಚರಿ.
ಈ ಹಿಂದೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರಿಷಬ್ ಪಂತ್ಗೆ ಕೊಕ್ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದಲೂ ಕೆ.ಎಲ್ ರಾಹುಲ್ ಹೊರ ಬರಲಿದ್ದಾರೆ ಎನ್ನುವ ಸುದ್ದಿ ಕೂಡ ಇತ್ತು. ಈಗ ಎಲ್ಲವೂ ನಿಜವಾಗಿದೆ.
ಮೆಗಾ ಆಕ್ಷನ್ನಲ್ಲಿ ಸ್ಟಾರ್ಸ್
ಕೆ.ಎಲ್ ರಾಹುಲ್ ಮತ್ತು ರಿಷಬ್ ಪಂತ್ ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರು. ಸ್ಟಾರ್ ಆಟಗಾರರೇ ಆಗಿರೋ ಇವ್ರು ಮೆಗಾ ಆಕ್ಷನ್ಗೆ ಎಂಟ್ರಿ ನೀಡಲಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ನಲ್ಲಿ ಹೆಚ್ಚು ಹೆಸರು ಮಾಡಿರೋ ಇವರ ಖರೀದಿಗಾಗಿ ಎಲ್ಲಾ ತಂಡಗಳು ಮುಗಿ ಬೀಳಲಿವೆ. ಪಂತ್, ರಾಹುಲ್ ಇಬ್ಬರಿಗೆ ನಾಯಕತ್ವದ ಅನುಭವ ಇರೋ ಕಾರಣ ಆರ್‌ಸಿಬಿ ಇಬ್ಬರಲ್ಲಿ ಒಬ್ಬರನ್ನು ಖರೀದಿ ಮಾಡಬಹುದು.
ಹೊಸ ಕ್ಯಾಪ್ಟನ್ಗಾಗಿ ಆರ್‌ಸಿಬಿ ಹುಡುಕಾಟ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಅವರನ್ನೇ ರಿಲೀಸ್ ಮಾಡಿದೆ. ಹೀಗಾಗಿ ಆರ್‌ಸಿಬಿ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಈ ನಿಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂತ್, ಕೆ.ಎಲ್ ರಾಹುಲ್ ಅವರನ್ನು ಟಾರ್ಗೆಟ್ ಮಾಡಲಿದೆ.
ಬೆಸ್ಟ್ ಬ್ಯಾಟರ್ಸ್
ಕೆ.ಎಲ್ ರಾಹುಲ್, ರಿಷಬ್ ಪಂತ್ ಇಬ್ಬರು ಬಿರುಸಿನ ಬ್ಯಾಟರ್ಗಳು. ಯಾವುದೇ ಒತ್ತಡದ ಸಂದರ್ಭದಲ್ಲೂ ಬ್ಯಾಟ್ ಬೀಸುವ ಸಾಮರ್ಥ್ಯ ಇವರಿಗಿದೆ. ಇಬ್ಬರಿಗೂ ಅಪಾರ ಅಭಿಮಾನಿಗಳು ಇದ್ದು, ಬ್ರ್ಯಾಂಡ್ ವ್ಯಾಲ್ಯೂ ಕೂಡ ಇದೆ.
ವಿಕೆಟ್ ಕೀಪಿಂಗ್, ಮಿಡಲ್ ಆರ್ಡರ್ ಬ್ಯಾಟಿಂಗ್, ಫಿನಿಶಿಂಗ್
ಇಬ್ಬರು ಮಿಡಲ್ ಆರ್ಡರ್ ಬ್ಯಾಟರ್ಗಳು ಮತ್ತು ಟಾಪ್ ಆರ್ಡರ್ನಲ್ಲೂ ಬ್ಯಾಟಿಂಗ್ ಮಾಡಬಲ್ಲರು. ವಿಕೆಟ್ ಕೀಪಿಂಗ್ ಮತ್ತು ಫಿನಿಶಿಂಗ್ಗೂ ಪಂತ್ ಮತ್ತು ಕೆ.ಎಲ್ ರಾಹುಲ್ ಹೆಸರು ವಾಸಿ. ಹಾಗಾಗಿ ಇಬ್ಬರಲ್ಲಿ ಯಾರು ಆರ್‌ಸಿಬಿ ಬಂದ್ರೂ ಲಾಭವೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ