/newsfirstlive-kannada/media/post_attachments/wp-content/uploads/2024/11/RCB-5.jpg)
ಹೊಸ ವರ್ಷ.. ಹೊಸ ಸೀಸನ್​.. ಹೊಸ ಹುರುಪು.. ಪ್ರತಿ ಬಾರಿ ಕಪ್​ ನಮ್ದೇ ಅನ್ನೋ ಫ್ಯಾನ್ಸ್​ ಕನಸನ್ನ ನನಸು ಮಾಡೋದೆ ಈ ಬಾರಿಯ ಗುರಿ. 2025ಕ್ಕೆ ಗ್ರ್ಯಾಂಡ್​​ ವೆಲ್​​ಕಮ್​ ಹೇಳಿರುವ ಆರ್​​ಸಿಬಿ ತಂಡ ಚಾಂಪಿಯನ್​ ಪಟ್ಟಕ್ಕೇರಲು ಪಣ ತೊಟ್ಟಿದೆ. 17 ಸೀಸನ್​ಗಳಿಂದ ಆಗದ ಸಾಧನೆಯನ್ನ 18ನೇ ಸೀಸನ್​ನಲ್ಲಿ ಮಾಡಲು ಕನಸು ಕಂಡಿದೆ.
ಹೊಸ ವರ್ಷ, ಹೊಸ ಅಧ್ಯಾಯ.. ಹೊಸ ಲೆಕ್ಕಾಚಾರದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ ಸೀಸನ್ 18ಕ್ಕೆ ಕಾಲಿಡಲು ಸಜ್ಜಾಗಿದೆ. ಮೆಗಾ ಹರಾಜಿನಲ್ಲಿ ಪಕ್ಕಾ ಲೆಕ್ಕಾ ಹಾಕಿ ಆಟಗಾರರನ್ನ ಖರೀದಿಸಿರುವ ಆರ್​ಸಿಬಿ, ಈ ಸಲ ಕಪ್​​ ಗೆಲ್ಲೋಕೆ ಶಪಥ ಮಾಡಿದಂತಿದೆ. ಅದಕ್ಕಾಗಿ ತೆರೆ ಹಿಂದೆ ಆರ್​ಸಿಬಿಯ ಥಿಂಕ್ ಟ್ಯಾಂಕರ್ಸ್​, ಭರ್ಜರಿ ಸ್ಟ್ರಾಟಜಿ ಮಾಡ್ತಿದ್ದಾರೆ. 17 ವರ್ಷಗಳ ವನವಾಸಕ್ಕೆ ಗುಡ್​ಬೈ ಹೇಳಲು ಆರ್​ಸಿಬಿ, ಮುಂದಾಗಿದೆ.
ಇದನ್ನೂ ಓದಿ:ಬದುಕಿ ಬರಲಿಲ್ಲ ಕಂದಮ್ಮ.. ಈ ಬಾಲಕಿಯ ವಿಧಿ ಬರಹ ಇದೆಂಥ ಘೋರ..
ಕಿಂಗ್​ ಕೊಹ್ಲಿಗೆ ಮತ್ತೆ ಪಟ್ಟ.!
ರಿಯಲ್​ ಹೊಸ ಅಧ್ಯಾಯ ಈ ಸೀಸನ್​​ನಿಂದ ಶುರುವಾಗಲಿದೆ. ಕಳೆದ ಸೀಸನ್​ನಲ್ಲಿ ಫ್ಲಾಪ್​ ಶೋ ನೀಡಿದ ಫ್ಲಾಪ್​ ಡುಪ್ಲೆಸಿ ಆರ್​​ಸಿಬಿಯಿಂದ ಹೊರ ಬಿದ್ದಾಗಿದೆ. ಇದೀಗ ಹೊಸ ನಾಯಕನ ಪಟ್ಟಾಭಿಷೇಕಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಕೊಹ್ಲಿಗೆ ಮತ್ತೆ ಪಟ್ಟ ಕಟ್ಟಲು ಆರ್​​ಸಿಬಿ ಫ್ರಾಂಚೈಸಿ ರೆಡಿಯಾಗಿದೆ. ವಿರಾಟ್​ ಕೂಡ ತಂಡವನ್ನು ಮುನ್ನಡೆಸಲು ಉತ್ಸುಕರಾಗಿದ್ದು, ನಾಯಕತ್ವ ಜವಾಬ್ದಾರಿ ಹೊರಲು ಯೆಸ್​​ ಎಂದಿದ್ದಾಗಿದೆ. ಅಧಿಕೃತ ಘೋಷಣೆಯೊಂದೆ ಬಾಕಿ.
ಹೊಸ ತಂಡ.. ಹೊಸ ಹುರುಪು..
ಮೆಗಾ ಆಕ್ಷನ್​ನಲ್ಲಿ ಅಳೆದು ತೂಗಿ ಲೆಕ್ಕಾಚಾರ ಹಾಕಿ ಬಲಿಷ್ಟ ತಂಡವನ್ನೇ ಆರ್​​ಸಿಬಿ ಕಟ್ಟಿದೆ. ಮೆಗಾ ಆಕ್ಷನ್​ಗೂ ಮುನ್ನ ಅಂದುಕೊಂಡಂತೆ ಆಟಗಾರರ ಖರೀದಿ ಮಾಡಿರೋ ರೆಡ್​ ಆರ್ಮಿ, ಹೊಸ ಖದರ್​​ನಲ್ಲಿ ಅಂಗಳಕ್ಕೆ ಇಳಿಯಲು ಸಜ್ಜಾಗಿದೆ. ಡಿಫೆನ್ಸಿವ್​ ಆಟ ಮುಗೀತು. ಈ ಸೀಸನ್​ನಿಂದ ಆರ್​​ಸಿಬಿ ಸಿಂಹ ಘರ್ಜಿಸೋದು ಪಕ್ಕಾ. ಅಗ್ರೆಸ್ಸಿವ್​ ಬ್ರ್ಯಾಂಡ್​ ಆಫ್​ ಕ್ರಿಕೆಟ್ ಆರ್​​ಸಿಬಿ ಆಡಲಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇಂದಿನಿಂದ 2 ದಿನ ಭರ್ಜರಿ ಮಳೆ; ನೀವು ಮನೆಯಿಂದ ಹೊರ ಬರೋ ಮುನ್ನ ಓದಲೇಬೇಕಾದ ಸ್ಟೋರಿ!
ಪವರ್​​ಪ್ಯಾಕ್ಡ್​ ಮಿಡಲ್​ ಆರ್ಡರ್​.!
ಆರ್​​ಸಿಬಿ ತಂಡದ ಟಾಪ್​ ಆರ್ಡರ್​ ಸಖತ್​ ಡೇಂಜರಸ್​. ಫಿಲ್​ ಸಾಲ್ಟ್​, ವಿರಾಟ್​ ಕೊಹ್ಲಿ, ಜೇಕಬ್​ ಬೆಥೆಲ್​​ ಹಾಗೂ ರಜತ್​ ಪಟಿದಾರ್​ರಂತ ಸಿಡಿಲಬ್ಬರದ ಬ್ಯಾಟರ್ಸ್​ ಬಲ ಆರ್​​ಸಿಬಿಗಿದೆ. ಲಿಯಮ್​​ ಲಿವಿಂಗ್ ಸ್ಟೋನ್​, ಟಿಮ್​ ಡೆವಿಡ್​, ರೊಮಾರಿಯೋ ಶೆಫರ್ಡ್​​ ಒಳಗೊಂಡ ಮಿಡಲ್​​ ಆರ್ಡರ್​​ ಪವರ್​​ ಪ್ಯಾಕ್ಡ್​ ಆಗಿದೆ. ಲೋವರ್​​ ಆರ್ಡರ್​ನಲ್ಲಿ ಕೃನಾಲ್​ ಪಾಂಡ್ಯ ಸಿಡಿದೆದ್ರೆ, ಆರ್​​ಸಿಬಿಯನ್ನ ತಡೆಯೋದು ಅಸಾಧ್ಯದ ಮಾತು.
ಚಾಲೆಂಜ್​ ಟ್ರಬಲ್​ ಶೂಟ್​ಗೆ ಪರ್ಫೆಕ್ಟ್​ ಪ್ಲಾನ್​
RCB ತಂಡಕ್ಕೆ ದೊಡ್ಡ ಹಿನ್ನಡೆಯಾಗಿರೋದೆ ಚಿನ್ನಸ್ವಾಮಿ ಚಾಲೆಂಜ್​​. ಈ ಚಾಲೆಂಜ್​​ ಗೆದ್ರೆ ಕ್ವಾಲಿಫೈಯರ್​ ದಾರಿ ಸಲೀಸಾಗಲಿದೆ. ಹೋಂ ಗ್ರೌಂಡ್​​ ಚಿನ್ನಸ್ವಾಮಿ ಸ್ಟೇಡಿಯಂನ ಮರ್ಮವನ್ನ ಇಷ್ಟು ಸೀಸನ್​ನಲ್ಲಿ ಆರ್​​ಸಿಬಿ ಅರ್ಥ ಮಾಡಿಕೊಂಡಿರಲಿಲ್ಲ. ಈ ಬಾರಿ ಚಿಕ್ಕ ಗ್ರೌಂಡ್​ನಲ್ಲಿ ಬ್ಯಾಟ್ಸ್​ಮನ್​ಗಳ ಅಬ್ಬರಕ್ಕೆ ಬ್ರೇಕ್​ ಹಾಕಬಲ್ಲ ಬೌಲರ್​ಗಳಿಗೆ ಮ್ಯಾನೇಜ್​ಮೆಂಟ್​ ಮಣೆ ಹಾಕಿದೆ. ಸಿಡಿಲಬ್ಬರ ಬ್ಯಾಟಿಂಗ್​ ನಡೆಸೋ ಬ್ಯಾಟ್ಸ್​ಮನ್​ಗಳೂ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಅಲ್ಲಿಗೆ ಚಿನ್ನಸ್ವಾಮಿ ಚಾಲೆಂಜ್​ ಟ್ರಬಲ್​ ಶೂಟ್​ ಆದಂತೆ.
ಇದನ್ನೂ ಓದಿ:ಖ್ಯಾತ ಅಂಕಣಕಾರ ಗಿರೀಶ್ ಲಿಂಗಣ್ಣಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ; ಶುಭ ಕೋರಿದ ನಿರ್ಮಲಾನಂದ ಸ್ವಾಮೀಜಿ
ಈ ಹಿಂದಿನ 17 ಸೀಸನ್​ಗಳಲ್ಲಿದ್ದ ಆರ್​​ಸಿಬಿಗೂ ಈ ಸೀಸನ್​ನ ಆರ್​​ಸಿಬಿಗೂ ಸಾಕಷ್ಟು ಡಿಫರೆನ್ಸ್​ ಇದೆ. ಹಿಂದಿಗಿಂತ ಸಾಕಷ್ಟು ಬಲಿಷ್ಟ ಹಾಗೂ ಬ್ಯಾಲೆನ್ಸಿಂಗ್​ ಆಗಿ ಆರ್​​ಸಿಬಿ ಪಡೆ ಕಾಣಿಸ್ತಿದೆ. ಹೀಗಾಗಿ ಅಭಿಮಾನಿಗಳ ವಲಯದಲ್ಲೂ ಕಪ್​ ಗೆಲುವಿನ ಕನಸು ಹೆಚ್ಚಾಗಿದೆ. 2025ರಲ್ಲಾದ್ರೂ ಕಪ್​ ನಮ್ದಾಗಲಿ ಅನ್ನೋ ಪ್ರಾರ್ಥನೆ ಶುರುವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us