/newsfirstlive-kannada/media/post_attachments/wp-content/uploads/2024/11/Pant_RCB.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆದಿದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜಿಗೆ ಮುನ್ನ ಎಲ್ಲಾ ತಂಡಗಳು ರೀಟೈನ್ ಲಿಸ್ಟ್ ಬಿಸಿಸಿಐಗೆ ಸಲ್ಲಿಸಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಕ್ಯಾಪ್ಟನ್ ರಿಷಬ್ ಪಂತ್ ಅವರನ್ನೇ ರಿಲೀಸ್ ಮಾಡಿದೆ. ಪಂತ್ಗಾಗಿ ಆರ್‌ಸಿಬಿ ಹದ್ದಿನ ಕಣ್ಣಿಟ್ಟಿದೆ.
ಮಾಕ್ ಆಕ್ಷನ್ನಲ್ಲಿ ಆರ್ಸಿಬಿಗೆ ಪಂತ್
ಇನ್ನು, ಮೆಗಾ ಹರಾಜಿಗೆ ಮುನ್ನ ಆರ್ಸಿಬಿಯಿಂದ ಮಾಕ್ ಆಕ್ಷನ್ ನಡೆಸಲಾಯ್ತು. ಮಾಕ್ ಆಕ್ಷನ್ನಲ್ಲಿ ಪಂತ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 16 ಕೋಟಿ ನೀಡಿ ಖರೀದಿ ಮಾಡಿದೆ. ಕೆಕೆಆರ್, ಚೆನ್ನೈ ಮತ್ತು ಬೆಂಗಳೂರು ಫ್ರಾಂಚೈಸಿ ಮಧ್ಯೆ ಪಂತ್ ಖರೀದಿಗೆ ಪೈಪೋಟಿ ನಡೆಯಿತು. ಕೊನೆಗೂ ಪಂತ್ ಆರ್ಸಿಬಿಗೆ ಮಾಕ್ ಆಕ್ಷನ್ನಲ್ಲಿ ಸಿಕ್ಕರು.
ಡೆಲ್ಲಿಯಿಂದ ಪಂತ್ಗೆ ಕೊಕ್
ಮುಂದಿನ ಸೀಸನ್ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನಿಗಾಗಿ ಹುಡುಕಾಟ ಶುರು ಮಾಡಿದೆ. ಇದರ ಮಧ್ಯೆ ಕ್ಯಾಪ್ಟನ್ ರಿಷಬ್ ಪಂತ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ನ 2ನೇ ಇನ್ನಿಂಗ್ಸ್‌ನಲ್ಲಿ 99 ರನ್ ಚಚ್ಚಿದ ಪಂತ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಹೊತ್ತಲ್ಲೇ ಪಂತ್ ಅವರನ್ನು ನಾಯಕತ್ವದಿಂದ ಡೆಲ್ಲಿ ಕ್ಯಾಪಿಟಲ್ಸ್ ತೆಗೆದು ಹಾಕಿದೆ. ಹಾಗಾಗಿಯೇ ತಂಡದಿಂದ ಕೈ ಬಿಟ್ಟಿದೆ.
Rishabh Pant sold to #RCB in INR 16 Crores at Mock Auction organised by RCB in Bengaluru today!
- Pant to RCB is what we all want ? pic.twitter.com/6D4sZ8jRbw
— RCBIANS OFFICIAL (@RcbianOfficial)
Rishabh Pant sold to #RCB in INR 16 Crores at Mock Auction organised by RCB in Bengaluru today!
- Pant to RCB is what we all want 🙏 pic.twitter.com/6D4sZ8jRbw— RCBIANS OFFICIAL (@RcbianOfficial) November 3, 2024
">November 3, 2024
ಪಂತ್ಗೆ ಆರ್‌ಸಿಬಿ ಮಣೆ
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಸ್ಟಾರ್ ಕ್ರಿಕೆಟರ್ ಕೆ.ಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬೆನ್ನಲ್ಲೇ ಆರ್‌ಸಿಬಿ ಮತ್ತೋರ್ವ ಸ್ಟಾರ್ ಕ್ರಿಕೆಟರ್ಗೆ ಮಣೆ ಹಾಕಲಿದೆ ಎಂದು ತಿಳಿದು ಬಂದಿದೆ. ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್ ಸ್ಪೋಟಕ ಬ್ಯಾಟರ್ ರಿಷಭ್ ಪಂತ್ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಪಂತ್ ಆರ್ಸಿಬಿಗೆ ಬಂದರೆ ಮೂರು ಸ್ಲಾಟ್ಗಳು ಫಿಲ್ ಆಗಲಿವೆ ಎಂಬುದು ಮ್ಯಾನೇಜ್ಮೆಂಟ್ ಪ್ಲಾನ್.
ಹರಾಜಿನಲ್ಲಿ ಆರ್‌ಸಿಬಿ ಅನುಭವಿ ಮಿಡಲ್ ಆರ್ಡರ್ ವಿಕೆಟ್ ಕೀಪರ್ ಬ್ಯಾಟರ್ಗಾಗಿ ಹುಡುಕಾಟ ನಡೆಸಲಿದೆ. ಹೀಗಾಗಿ ಪಂತ್ ಆರ್ಸಿಬಿಗೆ ಬರಬಹುದು. ಇದರಿಂದ ಆರ್‌ಸಿಬಿ ತಂಡ ಮಾಡಿಕೊಂಡ ಪ್ಲ್ಯಾನ್ ವರ್ಕ್ ಆಗುತ್ತದೆ ಅನ್ನೋ ಚರ್ಚೆ ನಡೆಯುತ್ತಿದೆ.
ಪಂತ್ ಒಳ್ಳೆ ಕ್ಯಾಪ್ಟನ್. ಆರ್‌ಸಿಬಿ ಬಲಿಷ್ಠ ತಂಡ ಕಟ್ಟೋ ಉದ್ದೇಶದಿಂದ ಯುವ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಪಂತ್ ಸಿಕ್ಕರೆ ಆರ್‌ಸಿಬಿ ಹಣದ ಹೊಳೆಯನ್ನೇ ಹರಿಸಬಹುದು. ಅಲ್ಲದೆ ಇವರು ವಿಕೆಟ್ ಕೀಪಿಂಗ್ ಮಿಡಲ್ ಆರ್ಡರ್ ಬ್ಯಾಟರ್ ಆಗಿ ನ್ಯಾಯ ಒದಗಿಸಬಲ್ಲರು. ಹೀಗಾಗಿ ಆರ್‌ಸಿಬಿ ಒಂದೇ ಕಲ್ಲಿಗೆ ಮೂರು ಸ್ಲಾಟ್‌ಗಳನ್ನು ಫಿಲ್ ಮಾಡಿಕೊಳ್ಳು ಪ್ಲ್ಯಾನ್ ಮಾಡಿಕೊಂಡಿದೆ.
ಇದನ್ನೂ ಓದಿ: ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 1165 ಮಂದಿ ಭಾರತೀಯರು; ಇವ್ರೇ RCB ಮೈನ್ ಟಾರ್ಗೆಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ