/newsfirstlive-kannada/media/post_attachments/wp-content/uploads/2024/11/Krunal-Pandya.jpg)
ಸದ್ಯ ನಡೆಯುತ್ತಿರೋ 2ನೇ ದಿನದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ಖರೀದಿ ಮಾಡಿದೆ. ಬರೋಬ್ಬರಿ 5.75 ಕೋಟಿಗೆ ಕೃನಾಲ್ ಪಾಂಡ್ಯ ಆರ್ಸಿಬಿ ಟೀಮ್ ಪಾಲಾದ್ರು.
ಭರ್ಜರಿ ಪೈಪೋಟಿ
ಕೃನಾಲ್ ಪಾಂಡ್ಯ ಅವರನ್ನು ಆರ್ಸಿಬಿ ತಂಡ 2 ಕೋಟಿ ಮೂಲ ಬೆಲೆಗೆ ಬಿಡ್ ಮಾಡಿತು. ಬಳಿಕ ಕಣಕ್ಕಿಳಿದ ರಾಜಸ್ಥಾನ್ ರಾಯಲ್ಸ್ ತಂಡ ಸುಮಾರು 5.50 ಕೋಟಿವರೆಗೂ ಹರಾಜು ಹಾಕಿತು. ಕೊನೆಗೂ ಕೃನಾಲ್ ಪಾಂಡ್ಯ ಆರ್ಸಿಬಿ ತಂಡ ಸೇರಿದ್ರು.
ಯಾರು ಈ ಕೃನಾಲ್ ಪಾಂಡ್ಯ?
ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ. ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕೃನಾಲ್ ಪಾಂಡ್ಯ ಆಡಿದ್ರು. ಇವರು 2024ರ ಸೀಸನ್ನಲ್ಲಿ ಹೇಳಿಕೊಳ್ಳುವಷ್ಟು ಸಾಧನೆ ಮಾಡಲಿಲ್ಲ. ಇವರು ಲೆಫ್ಟ್ ಹ್ಯಾಂಡೆಡ್ ಬ್ಯಾಟಿಂಗ್ ಆಲ್ರೌಂಡರ್. ಬೌಲಿಂಗ್ ಕೂಡ ಮಾಡಲಿದ್ದಾರೆ.
ಕೃನಾಲ್ ಪಾಂಡ್ಯ ಐಪಿಎಲ್ ಸಾಧನೆ
ಇನ್ನು, ಕೃನಾಲ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇದುವರೆಗೂ ಸುಮಾರು 127 ಪಂದ್ಯಗಳು ಆಡಿದ್ದಾರೆ. ಸುಮಾರು 1647 ರನ್ ಚಚ್ಚಿದ್ದು, ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 132 ಇದೆ. ಹಾಗೆಯೇ 144 ಫೋರ್, 61 ಸಿಕ್ಸರ್ ಸಿಡಿಸಿದ್ದಾರೆ. ಬೌಲಿಂಗ್ನಲ್ಲೂ ಸುಮಾರು 76 ವಿಕೆಟ್ ಪಡೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್