/newsfirstlive-kannada/media/post_attachments/wp-content/uploads/2024/08/RCB_TEAM-3.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಇನ್ನೇನು 6 ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ಸ್ಟಾರ್ ಆಟಗಾರರಿಗೆ ಗಾಳ ಹಾಕಲು ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಖುಷಿಯ ವಿಚಾರ ಏನಪ್ಪಾ ಅಂದ್ರೆ ಮುಂಬರೋ ಹರಾಜಿನಲ್ಲಿ ಕನ್ನಡಿಗರೇ ಹಾಟ್ ಪಿಕ್ ಆಗಲಿದ್ದಾರೆ. ಅದಕ್ಕೆ ಕಾರಣ ಮಹಾರಾಜ ಟಿ20 ಟೂರ್ನಿ.
ಮಹಾರಾಜ ಟ್ರೋಫಿಯಲ್ಲಿ ರನ್ ಧಮಾಕ..!
ಮಹಾರಾಜ ಟ್ರೋಫಿ ಅಂತ್ಯ ಕಂಡಿದೆ. ಮೈಸೂರು ವಾರಿಯರ್ಸ್ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೇ ಟೂರ್ನಿಯಲ್ಲಿ ಕೆಲ ಆಟಗಾರರು ಮಾತ್ರ, ಐಪಿಎಲ್ ಫ್ರಾಂಚೈಸಿಗಳ ಮನ ಗೆದ್ದಿದ್ದಾರೆ. ಟೂರ್ನಿಯುದ್ದಕ್ಕೂ ಇಂಪ್ರೆಸ್ಸಿವ್ ಪರ್ಫಾಮೆನ್ಸ್ ನೀಡಿರುವ ಇವರು, ವರ್ಷಾಂತ್ಯದಲ್ಲಿ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಅನ್ಸೋಲ್ಡ್ ಕರುಣ್ಗೆ ಈ ಸಲ ಜಾಕ್ಪಾಟ್
ಮೈಸೂರು ವಾರಿಯರ್ಸ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಕರುಣ್ ನಾಯರ್, ಮಹಾರಾಜ ಟೂರ್ನಿಯಲ್ಲಿ ಆಕ್ಷರಶಃ ನೆಕ್ಸ್ಟ್ ಲೆವೆಲ್ ಆಟವಾಡಿದ್ರು. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದ ಕರುಣ್, ಮೈಸೂರಿಗೆ ಮಹಾರಾಜ ಪಟ್ಟ ತೊಡಿಸುವಲ್ಲಿ ನಿಜಕ್ಕೂ ಪ್ರಮುಖ ಪಾತ್ರವನ್ನೇ ವಹಿಸಿದ್ದರು.
ಮಹಾರಾಜ ಟೂರ್ನಿಯಲ್ಲಿ ಕರುಣ್ ನಾಯರ್
12 ಪಂದ್ಯಗಳನ್ನಾಡಿದ ಕರುಣ್, 56ರ ಸರಾಸರಿಯಲ್ಲಿ ಬರೋಬ್ಬರಿ 560 ರನ್ ಕೊಳ್ಳೆ ಹೊಡೆದರು. 5 ಅರ್ಧಶತಕ, 1 ಶತಕ ಸಿಡಿಸಿದ್ದ ನಾಯರ್, 181.22ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಮಿಡಲ್ ಆರ್ಡರ್ನ ಬಲವಾಗಿರುವ ಕರುಣ್ ಮೇಲೆ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಹೀಗಾಗಿ ಕಳೆದ ಬಾರಿ ಅನ್ಸೋಲ್ಡ್ ಆಗಿದ್ದ ಕರುಣ್, ಈ ಸಲ ಬಿಗ್ ಅಮೌಂಟ್ಗೆ ಸೇಲ್ ಆಗೋದು ಶತಸಿದ್ಧ. ಅದರಲ್ಲೂ ಆರ್ಸಿಬಿ ಇವರಿಗೆ ಬಿಗ್ ಆಫರ್ ನೀಡಲಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್