ಆರ್​​​ಸಿಬಿಗೆ IPL ವಿನ್ನಿಂಗ್​ ಕ್ಯಾಪ್ಟನ್​ ಎಂಟ್ರಿ; ಫಾಫ್​ ಸ್ಥಾನ ತುಂಬಲಿದ್ದಾರೆ ಸ್ಟಾರ್​​ ಪ್ಲೇಯರ್​​

author-image
Ganesh Nachikethu
Updated On
RCB ಉಳಿಸಿಕೊಳ್ಳೋ ಇನ್ನೂ ಮೂವರು ಆಟಗಾರರು ಇವ್ರೇ! ಲಿಸ್ಟ್​ನಲ್ಲಿ ಅಚ್ಚರಿ ಹೆಸ್ರುಗಳು
Advertisment
  • 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಚಾಂಪಿಯನ್ KKR
  • ಕೆಕೆಆರ್​ ತಂಡದಿಂದ ಐಪಿಎಲ್​​ ವಿನ್ನಿಂಗ್​ ಕ್ಯಾಪ್ಟನ್​ಗೆ ಕೊಕ್​​!
  • ಐಪಿಎಲ್​ ವಿನ್ನಿಂಗ್​ ಕ್ಯಾಪ್ಟನ್​ಗೆ ಆರ್​​ಸಿಬಿಯಿಂದ ಬಿಗ್​ ಆಫರ್​​

ಕಳೆದ ಸೀಸನ್​​ ಎಂದರೆ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಚಾಂಪಿಯನ್ ತಂಡ ​​ಕೋಲ್ಕತ್ತಾ ನೈಟ್ ರೈಡರ್ಸ್. ಕೆಕೆಆರ್​​ ತಂಡ ಐಪಿಎಲ್​​​ ಚಾಂಪಿಯನ್​ ಆಗುವಲ್ಲಿ ಶ್ರೇಯಸ್​ ಅಯ್ಯರ್​​ ಪ್ರಮುಖ ಪಾತ್ರವಹಿಸಿದ್ದರು. ಮುಂದಿನ ಸೀಸನ್​ಗೆ ಕೆಕೆಆರ್​ ತಂಡದಿಂದ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​​ಗೆ ಕೊಕ್​ ನೀಡಲಾಗಿದೆ.

ಕೆಕೆಆರ್​​​ 2025ರ ರೀಟೈನ್​​ ಪಟ್ಟಿ ರಿಲೀಸ್​​​ ಮಾಡಿದೆ. ರಿಂಕು ಸಿಂಗ್ (13 ಕೋಟಿ), ಸುನಿಲ್ ನರೈನ್ (12 ಕೋಟಿ), ಆಂಡ್ರೆ ರಸೆಲ್ (12 ಕೋಟಿ), ವರುಣ್ ಚಕ್ರವರ್ತಿ (12 ಕೋಟಿ ), ಹರ್ಷಿತ್ ರಾಣಾ (ರೂ. 4 ಕೋಟಿ) ಮತ್ತು ರಮಣದೀಪ್ ಸಿಂಗ್​ಗೆ 4 ಕೋಟಿ ನೀಡಿ ಕೆಕೆಆರ್​ ಉಳಿಸಿಕೊಂಡಿದೆ. ಆದರೆ, ಕೆಕೆಆರ್​​​ ತಂಡದಿಂದ ಶ್ರೇಯಸ್​ ಅಯ್ಯರ್​ ಅವರನ್ನು ಕೈ ಬಿಡಲಾಗಿದೆ.
ಆರ್​​ಸಿಬಿಯಿಂದ ಶ್ರೇಯಸ್​ಗೆ ಬಿಗ್​ ಆಫರ್​​

ಈಗಾಗಲೇ ಕೆಲವು ಸ್ಟಾರ್ ಆಟಗಾರರಿಗೆ ಹಲವು ತಂಡಗಳಿಂದ ಬಿಗ್​ ಆಫರ್​ ಬಂದಿದೆ. ಈಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸಂಬಂಧಿಸಿದ ಬಿಗ್​ ಅಪ್ಡೇಟ್​ ಒಂದು ಹೊರಬಿದ್ದಿದೆ. ಐಪಿಎಲ್​ ವಿನ್ನಿಂಗ್​​ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​ಗೆ ಆರ್​​ಸಿಬಿ ಬಿಗ್​ ಆಫರ್​ ಕೊಟ್ಟಿದೆ. ಕೆಕೆಆರ್​ನಿಂದ ಶ್ರೇಯಸ್​ ಅಯ್ಯರ್​ ಹೊರಬಿದ್ದಿದ್ದು, ಆರ್​​ಸಿಬಿ ತಂಡ ಇವರಿಗೆ ಕ್ಯಾಪ್ಟನ್ಸಿ ಆಫರ್​ ನೀಡಿದೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

ಫಾಫ್​ ಸ್ಥಾನ ತುಂಬ್ತಾರಾ ಅಯ್ಯರ್​​?

ಕಳೆದ ಸೀಸನ್​​ನಲ್ಲಿ ಆರ್​​ಸಿಬಿ ತಂಡವನ್ನು ಫಾಫ್​ ಡುಪ್ಲೆಸಿಸ್​​ ಪ್ಲೇ ಆಫ್​ಗೆ ಹಂತಕ್ಕೆ ತೆಗೆದುಕೊಂಡು ಹೋಗಿದ್ದರು. ಈಗ ಆರ್​​ಸಿಬಿ ಮುಂದಿನ ಸೀಸನ್​ಗೆ ನಾಯಕ ಫಾಫ್​ ಅವರನ್ನು ಬದಲಿಸಲು ಹೊರಟಿದೆ. ಹಾಗಾಗಿಯೇ ಫಾಫ್​ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಫಾಫ್​ ಜಾಗಕ್ಕೆ ಆರ್​​ಸಿಬಿ ಫ್ರಾಂಚೈಸಿ ಶ್ರೇಯಸ್​ ಅಯ್ಯರ್​ ಅವರನ್ನು ಸಂಪರ್ಕಿಸಿದೆ ಎಂದು ತಿಳಿದು ಬಂದಿದೆ.

ಶ್ರೇಯಸ್​​ ಅಯ್ಯರ್​​ ಕೆಕೆಆರ್​ ತೊರೆದಿದ್ದೇಕೆ?

ಕೆಕೆಆರ್ ತಂಡದಿಂದ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡಲು ಕಾರಣವೇನು ಎಂದು ಸಿಇಒ ವೆಂಕಿ ಮೈಸೂರು ಬಹಿರಂಗಪಡಿಸಿದ್ದಾರೆ. ಐಪಿಎಲ್ 2025ರ ಟೂರ್ನಿಗಾಗಿ ಕೆಕೆಆರ್ ರೀಟೈನ್​​ ಲಿಸ್ಟ್​ನಲ್ಲಿ ಶ್ರೇಯಸ್ ಅಯ್ಯರ್ ಮೊದಲ ಆಯ್ಕೆಯಾಗಿದ್ದರು. ಅವರು ನಮ್ಮ ಕ್ಯಾಪ್ಟನ್​​. ಮುಂದೆ ಬಲಿಷ್ಠ ತಂಡ ಕಟ್ಟಲೇಬೇಕು ಅನ್ನೋ ಉದ್ದೇಶದಿಂದಲೇ ಅವರನ್ನು ಕ್ಯಾಪ್ಟನ್​​ ಮಾಡಿದ್ದೆವು. ನಾವು 2025ರ ಐಪಿಎಲ್​ಗೆ ಅವರನ್ನು ರೀಟೈನ್​​ ಮಾಡಿಕೊಳ್ಳಲು ಮುಂದಾಗಿದ್ದೆವು. ಆದರೆ, ನಮಗೆ ಶ್ರೇಯಸ್​​ ಅಯ್ಯರ್​ ಗ್ರೀನ್​ ಸಿಗ್ನಲ್​ ನೀಡಲಿಲ್ಲ. ರಿಟೇನ್ ಪ್ರಕ್ರಿಯೆಗೆ ಪರಸ್ಪರ ಒಪ್ಪಿಗೆ ಬೇಕು. ಶ್ರೇಯಸ್ ಅಯ್ಯರ್ ಕಡೆಯಿಂದ ಯಾವುದೇ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಕೆಕೆಆರ್ ತಂಡದಿಂದ ಕೈ ಬಿಡಬೇಕಾಯ್ತು ಎಂದರು.

ಇದನ್ನೂ ಓದಿ: ‘ಟೀಮ್​​ ಇಂಡಿಯಾದ ಸೋಲಿಗೆ ಇವರೇ ಕಾರಣ’- ಕ್ರಿಕೆಟ್​​ ದಿಗ್ಗಜ ಬಿಚ್ಚಿಟ್ಟ ಸ್ಫೋಟಕ ಸತ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment