ಕೆ.ಎಲ್​​ ರಾಹುಲ್​​ ಬಗ್ಗೆ ಆರ್​​​ಸಿಬಿಯಿಂದ ಹೊರಬಿತ್ತು ಬಿಗ್​ ಅಪ್ಡೇಟ್​​; ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​​​

author-image
Ganesh Nachikethu
Updated On
ಕೆ.ಎಲ್​​ ರಾಹುಲ್​​ ಬಗ್ಗೆ ಆರ್​​​ಸಿಬಿಯಿಂದ ಹೊರಬಿತ್ತು ಬಿಗ್​ ಅಪ್ಡೇಟ್​​; ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​​​
Advertisment
  • ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್​ ಮೆಗಾ!
  • ಈ ಮುನ್ನ ಆರ್​​ಸಿಬಿ ತಂಡದಿಂದ ಹೊರಬಿತ್ತು ಬಿಗ್​​ ಅಪ್ಡೇಟ್​​
  • ಕನ್ನಡಿಗ ಕೆ.ಎಲ್​ ರಾಹುಲ್​ ಬಗ್ಗೆ ಬಿಗ್​ ಅಪ್ಡೇಟ್​​ ಸಿಕ್ಕೇಬಿಡ್ತು

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್​ ಮೆಗಾ ಹರಾಜು ವರ್ಷದ ಕೊನೆಗೆ ನಡೆಯಲಿದೆ. ಎಲ್ಲಾ ಐಪಿಎಲ್​​ ತಂಡಗಳು ಅಕ್ಟೋಬರ್​​ 31ನೇ ತಾರೀಕಿನ ಒಳಗೆ ರೀಟೈನ್​ ಲಿಸ್ಟ್​ ಬಿಸಿಸಿಐಗೆ ಸಲ್ಲಿಸಬೇಕಿದೆ. ಇದಕ್ಕೆ ಇನ್ನೂ ಕೇವಲ ಒಂದೇ ವಾರ ಬಾಕಿ ಇದೆ. ಅದಕ್ಕೂ ಮುನ್ನ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಬಗ್ಗೆ ಬಿಗ್ ಅಪ್ಡೇಟ್​​ವೊಂದು ಹೊರಬಿದ್ದಿದೆ.

ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ರಿಲೀಸ್ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 2022 ರಿಂದ ಮೂರು ಐಪಿಎಲ್​ ಸೀಸನ್​​ನಲ್ಲಿ ಕೆ.ಎಲ್​ ರಾಹುಲ್​​​ ಲಕ್ನೋ ತಂಡವನ್ನು ಮುನ್ನಡೆಸಿದ್ರು. ಇವರ ನಾಯಕತ್ವದಲ್ಲಿ ಲಕ್ನೋ 2 ಸಲ ಪ್ಲೇ ಆಫ್​​ ಹೋಗಿತ್ತು. ಕಳೆದ ಸೀಸನ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ ಲಕ್ನೋ 7ನೇ ಸ್ಥಾನದಲ್ಲಿತ್ತು. ಅಂದಿನಿಂದ ಲಕ್ನೋ ಮತ್ತು ಕೆಎಲ್ ರಾಹುಲ್ ಮಧ್ಯೆ ಎಲ್ಲವೂ ಸರಿಯಾಗಿ ಇರಲಿಲ್ಲ. ಈ ವಿವಾದ ಕೊನೆಗೂ ಅಂತ್ಯ ಕಂಡಿದೆ.

ಲಕ್ನೋ ತಂಡದಿಂದ ಕೆ.ಎಲ್​ ರಾಹುಲ್​ಗೆ ಕೊಕ್​​

ಕೆಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ರಿಲೀಸ್​ ಮಾಡೋದು ಪಕ್ಕಾ ಆಗಿದೆ. ಮುಂದಿನ ಸೀಸನ್​ಗೆ ಹೇಗಾದ್ರೂ ಮಾಡಿ ಕಪ್​ ಗೆಲ್ಲಬೇಕು ಎಂದು ಜಿದ್ದಿಗೆ ಬಿದ್ದಿರೋ ಲಕ್ನೋ ಟೀಮ್​​ ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರ ಖರೀದಿಗೆ ಮುಂದಾಗಿದೆ. ಕಳೆದ ಐಪಿಎಲ್​ ಸೀಸನ್​​ನಲ್ಲಿ ರಾಹುಲ್​ ಕಳಪೆ ಪ್ರದರ್ಶನ ನೀಡಿದ್ದರು. ಕೆಲವು ದಿನಗಳ ಕಾಲ ಭಾರತ ಟಿ20 ಕ್ರಿಕೆಟ್​ ತಂಡದಿಂದ ದೂರ ಉಳಿದಿದ್ರು. ಈ ಎಲ್ಲವನ್ನೂ ಕನ್ಸಿಡರ್​ ಮಾಡಿರೋ ಲಕ್ನೋ ತಂಡ ಕೆ.ಎಲ್​ ರಾಹುಲ್​ ಅವರನ್ನು ತಂಡದಿಂದ ಕೈ ಬಿಡಲು ನಿರ್ಧರಿಸಿದೆ.

ರಾಹುಲ್​​ ಆರ್​​ಸಿಬಿ ಸೇರೋದು ಪಕ್ಕಾ

ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೆ.ಎಲ್​ ರಾಹುಲ್​ ಹೊರಬೀಳುವುದು ಗೊತ್ತಾಗುತ್ತಿದ್ದಂತೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳಿಗೆ ಖುಷಿ ಆಗಿದೆ. ಇನ್ನೊಂದೆಡೆ ಆರ್​​ಸಿಬಿ ತಂಡದ ಮಾಲೀಕರು ಕೆ.ಎಲ್​ ರಾಹುಲ್​ ಅವರನ್ನು ಸಂಪರ್ಕ ಮಾಡಿದ್ದಾರೆ ಎನ್ನುವ ಸುದ್ದಿ ಇದೆ. ಈಗಾಗಲೇ ಕೆ.ಎಲ್​ ರಾಹುಲ್​​ ಆರ್​​ಸಿಬಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment