/newsfirstlive-kannada/media/post_attachments/wp-content/uploads/2024/09/RCB_VIRAT-1.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಈ ಮುನ್ನವೇ ಬಿಸಿಸಿಐ ರಿಟೆನ್ಷನ್​ ನಿಯಮಗಳನ್ನು ಪ್ರಕಟ ಮಾಡಿದೆ. ಕಳೆದ ಸೀಸನ್​​ಗಿಂತಲೂ ಭಿನ್ನವಾಗಿ ಈ ಬಾರಿ ಬಿಸಿಸಿಐ ಐಪಿಎಲ್​​ ನಿಯಮಗಳು ರೂಪಿಸಿದೆ. ಆರ್​ಟಿಎಂ ಕಾರ್ಡ್ (RTM) ಬಳಕೆ ನಿಯಮ ಮತ್ತೆ ಜಾರಿ ಮಾಡಲಾಗಿದೆ. 5 ವರ್ಷಗಳ ಕಾಲ ನಿವೃತ್ತಿ ಘೋಷಿಸಿದ ಆಟಗಾರನನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ.
ಇನ್ನು, ಹೊಸ ರಿಟೈನ್ ನಿಯಮದ ಪ್ರಕಾರ ಪ್ರತಿ ಐಪಿಎಲ್​ ತಂಡಕ್ಕೆ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಿಟೈನ್​ ಮೂಲಕ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಆಟಗಾರರು ಮುಂದಿನ ವರ್ಷಗಳ ಕಾಲ ಆಡಲಿದ್ದಾರೆ. ಇದರ ಮಧ್ಯೆ ಆರ್​​ಸಿಬಿ ದೊಡ್ಡ ಹಿಂಟ್​​ ಕೊಟ್ಟಿದೆ.
ಕೇವಲ ಮೂವರಿಗೆ ಮಾತ್ರ ಆರ್​​​ಸಿಬಿ ಮಣೆ
ಕಳೆದ 17 ವರ್ಷಗಳಿಂದ ಆರ್​​ಸಿಬಿ ಯಾರನ್ನು ಅಧಿಕೃತ ರೀಟೈನ್​ ಮಾಡಿಕೊಂಡಿದೆ ಎಂಬ ಪೋಸ್ಟ್​ ಒಂದು ಸೋಷಿಯಲ್​​ ಮೀಡಿಯಾದಲ್ಲಿ ಹಾಕಲಾಗಿದೆ. ಆರ್​​​ಸಿಬಿ ತನ್ನ ಅಧಿಕೃತ ಖಾತೆಯಿಂದ ಪೋಸ್ಟ್​ ಮಾಡಿದ್ದು, 2011ರಲ್ಲಿ ಕೇವಲ ವಿರಾಟ್​ ಕೊಹ್ಲಿ ಅವರನ್ನು ರೀಟೈನ್​ ಮಾಡಿಕೊಳ್ಳಲಾಗಿತ್ತು. ಬಳಿಕ 2014ರಲ್ಲಿ ಕ್ರಿಸ್​ ಗೇಲ್​​, ವಿರಾಟ್​ ಮತ್ತು ಎಬಿ ಡಿವಿಲಿಯರ್ಸ್​​ ಮತ್ತು 2018ರಲ್ಲೂ ಎಬಿಡಿ ಮತ್ತು ಕೊಹ್ಲಿ ಜತೆಗೆ ಮತ್ತೋರ್ವ ಆಟಗಾರರನ್ನು ಉಳಿಸಿಕೊಳ್ಳಲಾಗಿತ್ತು. 2021ರಲ್ಲಿ ಕೊಹ್ಲಿ, ಸಿರಾಜ್​​, ಮ್ಯಾಕ್ಸ್​ವೆಲ್​​ ಅವರನ್ನು ರೀಟೈನ್​ ಮಾಡಿಕೊಂಡಿದ್ದು, ಈ ಬಾರಿ ಕೂಡ ಇವರನ್ನೇ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಕೊಹ್ಲಿ ಜತೆಗೆ ಸಿರಾಜ್​ ಮತ್ತು ಮ್ಯಾಕ್ಸ್​ವೆಲ್​ ಅವರನ್ನು ಉಳಿಸಿಕೊಳ್ಳಲು ಆರ್​​ಸಿಬಿ ಪ್ಲಾನ್​ ಮಾಡಿದಂತಿದೆ.
Retention isn’t just a ????????, it’s a ?????? ?? ?????????! ??
Here’s a look at the players we’ve trusted and retained over the years ahead of the IPL Mega Auctions. ?#PlayBold#IPL2025#IPLAuctionpic.twitter.com/9ajY0HF9If
— Royal Challengers Bengaluru (@RCBTweets)
Retention isn’t just a 𝙨𝙩𝙧𝙖𝙩𝙚𝙜𝙮, it’s a 𝙗𝙚𝙡𝙞𝙚𝙛 𝙞𝙣 𝙥𝙤𝙩𝙚𝙣𝙩𝙞𝙖𝙡! 💯🙌
Here’s a look at the players we’ve trusted and retained over the years ahead of the IPL Mega Auctions. 💪#PlayBold#IPL2025#IPLAuctionpic.twitter.com/9ajY0HF9If— Royal Challengers Bengaluru (@RCBTweets) September 30, 2024
">September 30, 2024
2025ರ ಐಪಿಎಲ್​ಗಾಗಿ ಫ್ರಾಂಚೈಸಿಗಳು 6 ಆಟಗಾರರನ್ನ ಉಳಿಸಿಕೊಳ್ಳಬಹುದು. ಈ ಆಟಗಾರರನ್ನ ರೀಟೈನ್​​ ಮೂಲಕವಾದ್ರೂ ಉಳಿಸಿಕೊಳ್ಳಬಹುದು ಅಥವಾ ಹರಾಜಿಗೆ ಬಿಟ್ಟು ಆರ್​ಟಿಎಂ ಬಳಕೆ ಮಾಡಿಕೊಂಡು ಮತ್ತೆ ಖರೀದಿಸಬಹುದು. ಇದಕ್ಕೆ ಇಂತಷ್ಟೇ ಯಾವುದೇ ಮಿತಿ ಇಲ್ಲ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ