ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು
ಬಿಸಿಸಿಐನಿಂದ ಅಧಿಕೃತವಾಗಿ ಹೊಸ ರಿಟೆನ್ಷನ್ ನಿಯಮ ಪ್ರಕಟ..!
ಆರ್ಟಿಎಂ ಕಾರ್ಡ್ ಬಳಕೆ ನಿಯಮ ಮತ್ತೆ ಜಾರಿ ಮಾಡಿದ ಬಿಸಿಸಿಐ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಈ ಮುನ್ನವೇ ಬಿಸಿಸಿಐ ರಿಟೆನ್ಷನ್ ನಿಯಮಗಳನ್ನು ಪ್ರಕಟ ಮಾಡಿದೆ. ಕಳೆದ ಸೀಸನ್ಗಿಂತಲೂ ಭಿನ್ನವಾಗಿ ಈ ಬಾರಿ ಬಿಸಿಸಿಐ ಐಪಿಎಲ್ ನಿಯಮಗಳು ರೂಪಿಸಿದೆ. ಆರ್ಟಿಎಂ ಕಾರ್ಡ್ (RTM) ಬಳಕೆ ನಿಯಮ ಮತ್ತೆ ಜಾರಿ ಮಾಡಲಾಗಿದೆ. 5 ವರ್ಷಗಳ ಕಾಲ ನಿವೃತ್ತಿ ಘೋಷಿಸಿದ ಆಟಗಾರನನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ.
ಇನ್ನು, ಹೊಸ ರಿಟೈನ್ ನಿಯಮದ ಪ್ರಕಾರ ಪ್ರತಿ ಐಪಿಎಲ್ ತಂಡಕ್ಕೆ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಿಟೈನ್ ಮೂಲಕ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಆಟಗಾರರು ಮುಂದಿನ ವರ್ಷಗಳ ಕಾಲ ಆಡಲಿದ್ದಾರೆ. ಇದರ ಮಧ್ಯೆ ಆರ್ಸಿಬಿ ದೊಡ್ಡ ಹಿಂಟ್ ಕೊಟ್ಟಿದೆ.
ಕೇವಲ ಮೂವರಿಗೆ ಮಾತ್ರ ಆರ್ಸಿಬಿ ಮಣೆ
ಕಳೆದ 17 ವರ್ಷಗಳಿಂದ ಆರ್ಸಿಬಿ ಯಾರನ್ನು ಅಧಿಕೃತ ರೀಟೈನ್ ಮಾಡಿಕೊಂಡಿದೆ ಎಂಬ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಆರ್ಸಿಬಿ ತನ್ನ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಿದ್ದು, 2011ರಲ್ಲಿ ಕೇವಲ ವಿರಾಟ್ ಕೊಹ್ಲಿ ಅವರನ್ನು ರೀಟೈನ್ ಮಾಡಿಕೊಳ್ಳಲಾಗಿತ್ತು. ಬಳಿಕ 2014ರಲ್ಲಿ ಕ್ರಿಸ್ ಗೇಲ್, ವಿರಾಟ್ ಮತ್ತು ಎಬಿ ಡಿವಿಲಿಯರ್ಸ್ ಮತ್ತು 2018ರಲ್ಲೂ ಎಬಿಡಿ ಮತ್ತು ಕೊಹ್ಲಿ ಜತೆಗೆ ಮತ್ತೋರ್ವ ಆಟಗಾರರನ್ನು ಉಳಿಸಿಕೊಳ್ಳಲಾಗಿತ್ತು. 2021ರಲ್ಲಿ ಕೊಹ್ಲಿ, ಸಿರಾಜ್, ಮ್ಯಾಕ್ಸ್ವೆಲ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, ಈ ಬಾರಿ ಕೂಡ ಇವರನ್ನೇ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಕೊಹ್ಲಿ ಜತೆಗೆ ಸಿರಾಜ್ ಮತ್ತು ಮ್ಯಾಕ್ಸ್ವೆಲ್ ಅವರನ್ನು ಉಳಿಸಿಕೊಳ್ಳಲು ಆರ್ಸಿಬಿ ಪ್ಲಾನ್ ಮಾಡಿದಂತಿದೆ.
Retention isn’t just a 𝙨𝙩𝙧𝙖𝙩𝙚𝙜𝙮, it’s a 𝙗𝙚𝙡𝙞𝙚𝙛 𝙞𝙣 𝙥𝙤𝙩𝙚𝙣𝙩𝙞𝙖𝙡! 💯🙌
Here’s a look at the players we’ve trusted and retained over the years ahead of the IPL Mega Auctions. 💪#PlayBold #IPL2025 #IPLAuction pic.twitter.com/9ajY0HF9If
— Royal Challengers Bengaluru (@RCBTweets) September 30, 2024
2025ರ ಐಪಿಎಲ್ಗಾಗಿ ಫ್ರಾಂಚೈಸಿಗಳು 6 ಆಟಗಾರರನ್ನ ಉಳಿಸಿಕೊಳ್ಳಬಹುದು. ಈ ಆಟಗಾರರನ್ನ ರೀಟೈನ್ ಮೂಲಕವಾದ್ರೂ ಉಳಿಸಿಕೊಳ್ಳಬಹುದು ಅಥವಾ ಹರಾಜಿಗೆ ಬಿಟ್ಟು ಆರ್ಟಿಎಂ ಬಳಕೆ ಮಾಡಿಕೊಂಡು ಮತ್ತೆ ಖರೀದಿಸಬಹುದು. ಇದಕ್ಕೆ ಇಂತಷ್ಟೇ ಯಾವುದೇ ಮಿತಿ ಇಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 6,6,4,4,4,4,4,4,4; ಬಾಂಗ್ಲಾ ವಿರುದ್ಧ KL ರಾಹುಲ್ ಅಬ್ಬರ; ಟೆಸ್ಟ್ನಲ್ಲೇ ಅತೀ ವೇಗದ ಅರ್ಧಶತಕ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ