/newsfirstlive-kannada/media/post_attachments/wp-content/uploads/2024/03/Faf_Kohli_RCB.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಮೆಗಾ ಹರಾಜಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ತಯಾರಿ ನಡೆಸಿಕೊಂಡಿದೆ. ಅದಕ್ಕಾಗಿ ಆರ್​​ಸಿಬಿ ಈಗಾಗಲೇ ಬೆಂಗಳೂರಲ್ಲಿ ಮಾಕ್​ ಆಕ್ಷನ್​ ಕೂಡ ನಡೆಸಿದೆ. ಮಾಕ್​ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ಹೊರಬಿದ್ದಿರೋ ರಿಷಬ್​​ ಪಂತ್​ ಅವರಿಗೆ ಆರ್​​ಸಿಬಿ ಬರೋಬ್ಬರಿ 16 ಕೋಟಿ ಖರೀದಿ ಮಾಡಿರೋ ವಿಡಿಯೋ ವೈರಲ್​ ಆಗಿದೆ.
ಹರಾಜಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹೊತ್ತಲ್ಲೇ ಯಾವ ಆಟಗಾರರಿಗೆ ಮಣೆ ಹಾಕಬೇಕು ಎಂದು ಆರ್​​ಸಿಬಿ ಲಿಸ್ಟ್​ ಮಾಡಿಕೊಳ್ಳುತ್ತಿದೆ. ಆರ್​​ಸಿಬಿ ಟಾರ್ಗೆಟ್​ ಪಟ್ಟಿಯಲ್ಲಿ ಈ ವಿದೇಶಿ ಆಟಗಾರರ ಹೆಸರು ಇದೆ ಅನ್ನೋದು ಅಚ್ಚರಿ.
ಮೂವರನ್ನು ರೀಟೈನ್​ ಮಾಡಿಕೊಂಡ ಆರ್​​ಸಿಬಿ
ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ. ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ.
ಜೋಸ್​ ಬಟ್ಲರ್​ ಮೇಲೆ ಆರ್​​ಸಿಬಿ ಕಣ್ಣು
ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಆಡಿ ಸೈ ಎನಿಸಿಕೊಂಡಿರೋ ಇಂಗ್ಲೆಂಡ್​ ಸ್ಟಾರ್​ ಆಟಗಾರ ಜೋಸ್​ ಬಟ್ಲರ್​. ಈ ಸ್ಟಾರ್​​ ಪ್ಲೇಯರ್​​ ವಿಕೆಟ್ ಕೀಪರ್ ಕೂಡ ಹೌದು. ಆರ್​​ಸಿಬಿ ತಂಡಕ್ಕೆ ಬಲ ತುಂಬಬಲ್ಲ ಆಟಗಾರ. ರಾಜಸ್ಥಾನ ರಾಯಲ್ಸ್ ತಂಡ ಕೈ ಬಿಟ್ಟ ಜೋಸ್​ ಬಟ್ಲರ್ ಖರೀದಿಗೆ ಆರ್​​ಸಿಬಿ ಹಣದ ಹೊಳೆಯನ್ನೇ ಹರಿಸಲಿದೆ. ಕ್ಲಾಸಿಕ್ ಬ್ಯಾಟಿಂಗ್​ಗೆ ಹೆಸರು ವಾಸಿಯಾಗಿರೋ ಇವರು​​, ತಮ್ಮ ಆಟದಿಂದಲೇ ಆರ್​​ಸಿಬಿ ಗಮನ ಸೆಳೆದವ್ರು. ಇವ್ರು ಓಪನಿಂಗ್​​ ಬ್ಯಾಟರ್​​​, ವಿಕೆಟ್​ ಕೀಪರ್​ ಮತ್ತು ಕ್ಯಾಪ್ಟನ್ಸಿ ಕೂಡ ಮಾಡಬಲ್ಲರು.
ಬಟ್ಲರ್​ ಐಪಿಎಲ್​ ಸಾಧನೆ
ಆರಂಭಿಕ ಬ್ಯಾಟರ್​ ಬಟ್ಲರ್​. ಇವರು ಯಾವುದೇ ಬೌಲಿಂಗ್ ದಾಳಿಯನ್ನೂ ಸಮರ್ಥವಾಗಿ ನಿಭಾಯಿಸಿ ರನ್​ ಹೊಳೆಯನ್ನೇ ಹರಿಸಬಲ್ಲರು. ತಾವು ಆಡಿರೋ 107 ಐಪಿಎಲ್​ ಪಂದ್ಯಗಳಲ್ಲಿ ಜೋಸ್​ ಬಟ್ಲರ್​​​ ಬರೋಬ್ಬರಿ 3,582 ರನ್​ ಗಳಿಸಿದ್ದಾರೆ. ಇದರಲ್ಲಿ 7 ಶತಕ, 19 ಅರ್ಧಶತಕಗಳು ಸೇರಿವೆ. 124 ಇವರ ಹೈಸ್ಕೋರ್​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us