/newsfirstlive-kannada/media/post_attachments/wp-content/uploads/2024/04/RCB-Today.jpg)
2025ರ ಇಂಡಿಯನ್​ ಪ್ರೀಮಿಯರ್​ ಲೀಗ್ ಆರಂಭಕ್ಕೆ ಇನ್ನೇನು 3 ತಿಂಗಳು ಮಾತ್ರ ಬಾಕಿ ಇದೆ. ಈ ಸಲ ಹೇಗಾದ್ರೂ ಮಾಡಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕಪ್​​ ಗೆಲ್ಲೋ ನಿರೀಕ್ಷೆಯಲ್ಲಿದೆ. ಹಾಗಾಗಿ ವರ್ಷದ ಕೊನೆಗೆ ಎದುರಾಗಲಿರೋ ಮೆಗಾ ಆಕ್ಷನ್​ಗೆ ಮುನ್ನ ಆರ್​​ಸಿಬಿಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.
ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.
ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಇದರ ಮಧ್ಯೆ ಮೆಗಾ ಆಕ್ಷನ್​ಗೆ ಭರ್ಜರಿ ತಯಾರಿ ನಡೆಸಿಕೊಂಡಿದೆ. ಅದರಲ್ಲೂ ಸೌತ್​ ಆಫ್ರಿಕಾ ಆಟಗಾರರನ್ನು ಟಾರ್ಗೆಟ್​ ಮಾಡಲಿದೆ.
ಆರ್​​ಸಿಬಿ ಟಾರ್ಗೆಟ್​ ಮಾಡಲಿರೋ ಆಟಗಾರರು ಇವರೇ!
ಡೆವಾಲ್ಡ್ ಬ್ರೆವಿಸ್
ದಕ್ಷಿಣ ಆಫ್ರಿಕಾ ಮೂಲದ ಬೇಬಿ ಎಬಿಡಿ ಎಂದು ಹೆಸರು ವಾಸಿಯಾಗಿರೋ ಡೆವಾಲ್ಡ್ ಬ್ರೆವಿಸ್ ಮೇಲೆ ಆರ್​​ಸಿಬಿ ಕಣ್ಣಿಟ್ಟಿದೆ. ಮೊದಲು ಎಬಿಡಿ ವಿಲಿಯರ್ಸ್ ತಂಡದ ಮಿಡ್ಲ್ ಆರ್ಡರ್‌ಗೆ ಆಧಾರವಾಗಿದ್ರು. ಈಗ ಬೇಬಿ ಎಬಿಡಿಗೂ ಮಣೆ ಹಾಕಿದ್ರೆ, ಆರ್​​ಸಿಬಿಗೆ ಸ್ಫೋಟಕ ಬ್ಯಾಟರ್​​ ಆಧಾರವಾಗಲಿದ್ದಾರೆ. ಮುಂಬೈ ಕೈ ಬಿಟ್ಟ ಡೆವಾಲ್ಡ್ ಬ್ರೆವಿಸ್ ಅವರಿಗೆ ಆರ್‌ಸಿಬಿ ಹರಾಜಿನಲ್ಲಿ ಹಣದ ಹೊಳೆಯನ್ನು ಹರಿಸಬಹುದು.
ಕ್ವಿಂಟನ್​ ಡಿಕಾಕ್​​
ಮೆಗಾ ಆಕ್ಷನ್​​ನಲ್ಲಿ ಆರ್‌ಸಿಬಿ ದಕ್ಷಿಣ ಆಫ್ರಿಕಾದ ಮತ್ತೋರ್ವ ಆಟಗಾರನನ್ನು ಟಾರ್ಗೆಟ್ ಮಾಡಲಿದೆ. ಈ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವುದು ಕ್ವಿಂಟನ್ ಡಿಕಾಕ್. ಇವರು ಎಡಗೈ ಬ್ಯಾಟರ್​​​ ಮತ್ತು ಈಗಾಗಲೇ ಆರ್​​ಸಿಬಿ ಪರ ಆಡಿದ ಅನುಭವ ಇದೆ. ಇವರು ತಂಡಕ್ಕೆ ಸೇರಿದ್ರೆ ಕೊಹ್ಲಿ ಜೊತೆ ಉತ್ತಮವಾಗಿ ಆಡಬಲ್ಲರು.
ಇಬ್ಬರು ವೇಗಿಗಳಿಗೆ ಮಣೆ
ಆರ್‌ಸಿಬಿ ತನ್ನ ಬೌಲಿಂಗ್ ವಿಭಾಗವನ್ನು ಬಲ ಪಡಿಸಿಕೊಳ್ಳುವ ದೃಷ್ಟಿಯಿಂದ ದಕ್ಷಿಣ ಆಫ್ರಿಕಾದ ಇಬ್ಬರು ಸ್ಟಾರ್ ವೇಗಿಗಳಿಗೆ ಮಣೆ ಹಾಕಲಿದೆ. ಕಗಿಸೋ ರಬಾಡ ಹಾಗೂ ಮಾರ್ಕೊ ಜಾನ್ಸೆನ್ ಖರೀದಿಗೆ ಆರ್​​ಸಿಬಿ ಹಣದ ಹೊಳೆಯನ್ನೇ ಹರಿಸಬಲ್ಲದು. ರಬಾಡಾ ಈಗಾಗಲೇ ಐಪಿಎಲ್‌ನಲ್ಲಿ ಆಡಿರೋ 80 ಪಂದ್ಯಗಳಲ್ಲಿ 117 ವಿಕೆಟ್ ಕಬಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಇನ್ನೊಬ್ಬ ವೇಗಿ ಮಾರ್ಕೊ ಜಾನ್ಸೆನ್ ಅವರಿಗೆ ಆರ್‌ಸಿಬಿ ಹಣ ಹೂಡಬಹುದು. ಇವರು ಸಹ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದದ್ದಾರೆ. ಈಗಾಗಲೇ ಜಾನ್ಸೆನ್​ ಆಡಿರೋ 21 ಪಂದ್ಯಗಳಲ್ಲಿ ಮಾರ್ಕೊ 20 ವಿಕೆಟ್ ಕಬಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us