/newsfirstlive-kannada/media/post_attachments/wp-content/uploads/2024/10/Kohli_Rahul-RCB.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಈ ಸಲ ಹೇಗಾದ್ರೂ ಮಾಡಿ ಕಪ್​​ ಗೆಲ್ಲಲೇಬೇಕು ಎಂದು ಮುಂದಾಗಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬಲಿಷ್ಠ ತಂಡ ಕಟ್ಟಲಿದೆ. ಹಾಗಾಗಿ ಮೆಗಾ ಆಕ್ಷನ್​​ನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲಿದೆ.
ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.
ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಇದರ ಮಧ್ಯೆ ಮೆಗಾ ಆಕ್ಷನ್​ಗೆ ಭರ್ಜರಿ ತಯಾರಿ ನಡೆಸಿಕೊಂಡಿದೆ.
ಕ್ಯಾಪ್ಟನ್​ ರೇಸ್​ನಲ್ಲಿ ಅಚ್ಚರಿ ಹೆಸರು
ಮುಂದಿನ ಸೀಸನ್​ಗೆ ಕ್ಯಾಪ್ಟನ್​​ ಹುಡುಕಾಟದಲ್ಲಿರೋ ಆರ್​​ಸಿಬಿ ಲಕ್ನೋ ತಂಡದಿಂದ ಹೊರ ಬಂದಿರೋ ಕನ್ನಡಿಗ ಕೆ.ಎಲ್​ ರಾಹುಲ್​ ಅವರನ್ನು ಬಿಡ್​ ಮಾಡಲಿದೆ ಎನ್ನುವ ಸುದ್ದಿ ಇದೆ. ಆದರೀಗ, ಈ ಸ್ಥಾನಕ್ಕೆ ನೀವ್ಯಾರು ಊಹಿಸದ ಮತ್ತೊಬ್ಬ ಸ್ಟಾರ್ ಆಟಗಾರನ ಹೆಸರು ಕೇಳಿ ಬಂದಿದೆ. ಈ ಆಟಗಾರನಿಗೆ ಆರ್​​ಸಿಬಿ ಕ್ಯಾಪ್ಟನ್​​ ಆಗೋ ಎಲ್ಲಾ ಸಾಮರ್ಥ್ಯ ಇದೆ.
ವಾರ್ನರ್​​ ಮೇಲೆ ಆರ್​​ಸಿಬಿ ಕಣ್ಣು
ಆರ್​​ಸಿಬಿಗೆ ಕೇವಲ ಕ್ಯಾಪ್ಟನ್​ ಮಾತ್ರವಲ್ಲ ಎಡಗೈ ಬ್ಯಾಟರ್​​ ಬೇಕು. ಅದರಲ್ಲೂ ಓಪನರ್​ ಅಗತ್ಯ ಇದೆ. ಹೀಗಾಗಿ ಈ ಆಟಗಾರನನ್ನು ಮೆಗಾ ಹರಾಜಿನಲ್ಲಿ ಬಿಡ್ ಮಾಡಲು ಆರ್‌ಸಿಬಿ ತಂತ್ರ ರೂಪಿಸಿದೆ. ಈ ಆಟಗಾರ ಬೇರೆ ಯಾರು ಅಲ್ಲ, ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್​ ಮಾಡಿರೋ ಆಸ್ಟ್ರೇಲಿಯಾದ ಸ್ಪೋಟಕ ಎಡಗೈ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್.
ಆರ್‌ಸಿಬಿಗೆ ವಾರ್ನರ್​ ಕ್ಯಾಪ್ಟನ್​
ಮೆಗಾ ಹರಾಜಿನಲ್ಲಿ ಡೇವಿಡ್ ವಾರ್ನರ್ ಅವರನ್ನು ಆರ್​​ಸಿಬಿ ಭಾರೀ ಮೊತ್ತಕ್ಕೆ ಬಿಡ್ ಮಾಡಬಹುದು. ಒಂದು ವೇಳೆ ವಾರ್ನರ್ ಆರ್‌ಸಿಬಿ ಸೇರಿದರೆ ಕ್ಯಾಪ್ಟನ್​ ಆಗೋದು ಸಾಧ್ಯತೆ ಇದೆ. ಸದ್ಯ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ಯಾವುದೇ ಒತ್ತಡ ಇಲ್ಲ. ಇವರ ನಾಯಕತ್ವದಲ್ಲಿ ಆರ್​​ಸಿಬಿ ಚಾಂಪಿಯನ್​​ ಆಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us