/newsfirstlive-kannada/media/post_attachments/wp-content/uploads/2024/09/RCB_TEAM.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿಗೆ ಮುನ್ನ ಬಿಸಿಸಿಐಗೆ ಎಲ್ಲಾ ತಂಡಗಳು ಮಾಲೀಕರು ರೀಟೈನ್ ಲಿಸ್ಟ್ ಸಲ್ಲಿಸಿದ್ದಾರೆ. ಮೆಗಾ ಹರಾಜು ನಡೆಸಲು ಬಿಸಿಸಿಐ ಭರ್ಜರಿ ತಯಾರಿ ನಡೆಸಿಕೊಂಡಿದೆ. ಎಲ್ಲಿ ಮತ್ತು ಯಾವಾಗ ನಡೆಯಲಿದೆ? ಎಂದು ಫೈನಲ್ ಆಗಬೇಕಿದೆ. ಇದರ ಮಧ್ಯೆ ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು? ಎಂದು ಎಲ್ಲಾ ತಂಡಗಳು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿವೆ.
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಆರ್‌ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ. 2ನೇ ಆಯ್ಕೆ ರಜತ್ ಪಾಟಿದಾರ್ ಮತ್ತು 3ನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.
ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್ ಪಾಟಿದಾರ್ ಅವರಿಗೆ 11 ಕೋಟಿ ಮತ್ತು ಯಶ್ ದಯಾಳ್ ಅವರಿಗೆ 5 ಕೋಟಿ ನೀಡಿ ರೀಟೈನ್ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್‌ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಇನ್ನು ಉಳಿದ ಸ್ಥಾನಗಳಿಗೆ ಆರ್‌ಸಿಬಿ ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರ ಹುಡಕಾಟ ನಡೆಸಲಿದೆ.
ಬೌಲರ್ಗಳ ಮೇಲೆ ಆರ್‌ಸಿಬಿ ಕಣ್ಣು
ಕಳೆದ ಹಲವು ಸೀಸನ್ನಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನಕ್ಕೆ ಕಾರಣ ಬೌಲಿಂಗ್ ವಿಭಾಗ. ಆರ್‌ಸಿಬಿ ತಂಡದ ವೀಕ್ನೆಸ್ ಕೂಡ ಬೌಲಿಂಗ್ ವಿಭಾಗವೇ. ಬೌಲಿಂಗ್ ವಿಭಾಗವನ್ನು ಬಲಪಡಿಸೋ ನಿಟ್ಟಿನಲ್ಲಿ ಆರ್‌ಸಿಬಿ ಕೆಲಸ ಮಾಡಲಿದೆ. ಹಾಗಾಗಿ ಮೆಗಾ ಹರಾಜಿನಲ್ಲಿ ಈ ಮೂವರನ್ನು ಖರೀದಿ ಮಾಡಲು ಮುಂದಾಗಿದೆ.
ಮಿಚೆಲ್ ಸ್ಟಾರ್ಕ್ ಮೇಲೆ ಕಣ್ಣು
ಐಪಿಎಲ್ 2024ರ ಚಾಂಪಿಯನ್ ಕೆಕೆಆರ್ ತಂಡದ ಸದಸ್ಯ ಮಿಚೆಲ್ ಸ್ಟಾರ್ಕ್. ಇವರನ್ನು ಕೆಕೆಆರ್ ತಂಡದಿಂದ ಕೈ ಬಿಡಲಾಗಿದೆ. ವಿಶ್ವದ ಖ್ಯಾತ ಬೌಲರ್ ಆಗಿರೋ ಮಿಚೆಲ್ ಸ್ಟಾರ್ಕ್ಗೆ ಮಣೆ ಹಾಕಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಸ್ಟಾರ್ ಬ್ಯಾಟರ್ಸ್ ಅನ್ನು ಕಟ್ಟಿ ಹಾಕಬಲ್ಲರು.
ಬೆಂಗಳೂರು ತಂಡದಿಂದ ಅರ್ಷದೀಪ್ ಟಾರ್ಗೆಟ್
ಪಂಜಾಬ್ನಿಂದ ರಿಲೀಸ್ ಆಗಿರೋ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಖರೀದಿ ಮಾಡಲು ಆರ್‌ಸಿಬಿ ಮುಂದಾಗಿದೆ. ಇವರು ಡೆತ್ ಓವರ್‌ಗಳಲ್ಲಿ ಬೌಲ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಟಿ20 ವಿಶ್ವಕಪ್ ವೇಳೆ ಭಾರತ ತಂಡದ ಪರ ಅಮೋಘ ಪ್ರದರ್ಶನ ನೀಡಿರೋ ಕಾರಣ ಆರ್‌ಸಿಬಿ ಮಣೆ ಹಾಕಲಿದೆ.
ಕೆಕೆಆರ್ ಬೌಲರ್ ಮೇಲೆ ಕಣ್ಣು
ಕೆಕೆಆರ್ ತಂಡದಿಂದ ಕೈ ಬಿಡಲಾದ ವೈಭವ್ ಆರೋರ್ ಅವರಿಗೆ ಆರ್‌ಸಿಬಿ ಗಾಳ ಹಾಕುವ ಸಾಧ್ಯತೆ ಇದೆ. ಇವರು ಪಂದ್ಯದ ಯಾವುದೇ ಹಂತದಲ್ಲಾದ್ರೂ ಬೌಲಿಂಗ್ ಮಾಡಬಲ್ಲರು. ಆರ್‌ಸಿಬಿ ಈ ಪ್ಲೇಯರ್ ಅವರನ್ನು ಟಾರ್ಗೆಟ್ ಮಾಡಿ ತನ್ನ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಮುಂದಾಗಿದೆ.
ಇದನ್ನೂ ಓದಿ: ಆರ್ಸಿಬಿಯಿಂದ ಸ್ಟಾರ್ ಆಟಗಾರನಿಗೆ ಕೊಕ್; ತನ್ನನ್ನು ಕೈ ಬಿಟ್ಟ ಬಗ್ಗೆ ಮೌನಮುರಿದ ಮ್ಯಾಕ್ಸಿ ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ