ಕನ್ನಡಿಗನಿಗೆ ಬಿಗ್ ಶಾಕ್​; ಟಾಸ್ ಗೆದ್ದ RCB ಪ್ಲೇಯಿಂಗ್​- 11ರಲ್ಲಿ ಯಾರಿಗೆಲ್ಲಾ ಸ್ಥಾನ? ​

author-image
Bheemappa
Updated On
RCB vs PBKS: ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲೇ ಶಾಕಿಂಗ್ ನ್ಯೂಸ್..!
Advertisment
  • ರಾಯಲ್ಸ್​ ಜೊತೆ ಅಖಾಡಕ್ಕೆ ಧುಮುಕಿರುವ ರಾಯಲ್ ತಂಡ
  • ತವರಲ್ಲಿ ಸೋತ ನೋವು ಮರೆಯುತ್ತ ಬೆಂಗಳೂರು ಟೀಮ್
  • ರಜತ್ ಪಾಟಿದಾರ್ ಬ್ಯಾಟಿಂಗ್​ ಆರ್​ಸಿಬಿಗೆ ಮುಖ್ಯ ಆಗುತ್ತೆ

ಇಂದಿನ ಡಬಲ್​ ಹೆಡ್ಡರ್​ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಫೀಲ್ಡಿಂಗ್​ ತೆಗೆದುಕೊಂಡು ರಾಜಸ್ಥಾನ್​ ರಾಯಲ್ಸ್​ ಅನ್ನು ಮೊದಲ ಬ್ಯಾಟಿಂಗ್​​ಗೆ ಆಹ್ವಾನ ಮಾಡಿದ್ದಾರೆ. ವಿಕೆಟ್​ಗಳನ್ನು ಬೇಗ ಉರುಳಿಸುವುದು ಹಾಗೂ ರನ್​ಗಳನ್ನು ಚೇಸ್ ಮಾಡುವ ಉದ್ದೇಶದಿಂದ ನಾಯಕ ರಜತ್ ಅವರು ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಲ್ಯಾಂಬೋರ್ಘಿನಿ ಕಾರಿನ ನಂಬರ್​ ಪ್ಲೇಟ್​ ಬೆಲೆ 46.24 ಲಕ್ಷ ರೂಪಾಯಿ.. ಈ ಸಂಖ್ಯೆ​ ಇದ್ರೆ ಇಷ್ಟೊಂದು ದುಬಾರಿನಾ?

publive-image

ಇನ್ನು ಪಂದ್ಯದಲ್ಲಿ ಆರ್​ಸಿಬಿ ಪರ​ ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ ಆರಂಭಿಕರಾಗಿ ಕ್ರೀಸ್​ಗೆ ಬರಲಿದ್ದಾರೆ. 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕೆ ಇಳಿಯಬಹುದು. ಸದ್ಯ ಇವರ ಬದಲಿಗೆ ಬೌಲರ್​ ಸುಯಶ್ ಶರ್ಮಾ ಮೈದಾನದಲ್ಲಿ ಕಾಣಿಸಲಿದ್ದಾರೆ. ರಜತ್ ಪಾಟಿದಾರ್ ಅಬ್ಬರದ ಬ್ಯಾಟಿಂಗ್ ಮಾಡಲಿದ್ದಾರೆ. ವಿಕೆಟ್​ ಕೀಪರ್ ಕಮ್ ಬ್ಯಾಟ್ಸ್​ಮನ್ ಆಗಿ ಜಿತೇಶ್ ಶರ್ಮಾ ಸ್ಥಾನ ಪಡೆದಿದ್ದಾರೆ. ತವರಿನಲ್ಲಿ ಸೋಲನ್ನು ಅನುಭವಿಸಿದ್ದ ಆರ್​ಸಿಬಿ ಈಗ ರಾಜಸ್ಥಾನ್​ನಲ್ಲಿ ಗೆಲುವಿನ ನಗೆ ಬೀರಬೇಕಿದೆ.

ಆಲೌರೌಂಡರ್ ಆಗಿ ಲೈಮ್ ಲಿವಿಂಗ್​ಸ್ಟನ್, ಕೃನಾಲ್ ಪಾಂಡ್ಯ ಅವರ ಬ್ಯಾಟಿಂಗ್, ಬೌಲಿಂಗ್ ತಂಡದಲ್ಲಿ ಮಹತ್ವ ಪಡೆಯುತ್ತದೆ. ಸುಯಶ್ ಶರ್ಮಾ, ಯಶ್ ದಯಾಳ್, ಭುವನೇಶ್ವರ್ ಹಾಗೂ ಜೋಶ್ ಹ್ಯಾಜಲ್ವುಡ್ ಅವರ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ. ಎದುರಾಳಿ ತಂಡ ರಾಜಸ್ಥಾನ್ ಕೂಡ ಪ್ರಬಲವಾಗಿದೆ. ಓಪನರ್ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್​ ಆರ್​ಸಿಬಿಗೆ ಮುಳುವಾಗಬಹುದು. ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್​ ಅಂತಹ ಬ್ಯಾಟ್ಸ್​ಮನ್​ಗಳು ಘರ್ಜನೆ ಮಾಡುವ ಸಾಧ್ಯತೆ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11

ರಜತ್ ಪಾಟಿದಾರ್ (ನಾಯಕ), ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಶ್ ಶರ್ಮಾ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment