/newsfirstlive-kannada/media/post_attachments/wp-content/uploads/2024/11/RCB-5.jpg)
ಇತ್ತೀಚೆಗಷ್ಟೇ ಎರಡು ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ನಡೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ತೆರೆ ಬಿದ್ದಿದೆ. ಮೆಗಾ ಹರಾಜಿನಲ್ಲಿ ಹಲವು ಆಟಗಾರರ ಅದೃಷ್ಟ ಬಾಗಿಲು ತೆರೆದಿದೆ. ಇನ್ನೂ ಹಲವು ಆಟಗಾರರ ಐಪಿಎಲ್​​ ಕರಿಯರ್​ ಅಂತ್ಯಗೊಂಡಿದೆ. ರಾಯಲ್​​ ಚಾಲೆಂಜರ್ಸ್ ಬೆಂಗಳೂರು ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿ ಮಾಡಿ ಬಲಿಷ್ಠ ತಂಡವನ್ನೇ ಕಟ್ಟಿದೆ. ಇದರ ಮಧ್ಯೆ ಆರ್​​​ಸಿಬಿ ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​ ಒಂದಿದೆ.
ಆರ್‌ಸಿಬಿ ತಂಡ ಮುಂದಿನ ಸೀಸನ್​ಗೆ ಮೊಹಮ್ಮದ್ ಸಿರಾಜ್, ಫಾಪ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿಲ್ ಜ್ಯಾಕ್ಸ್ ಅಂತಹ ಸ್ಟಾರ್​ ಆಟಗಾರರನ್ನೇ ಬಿಟ್ಟುಕೊಟ್ಟಿದೆ. ಇವರನ್ನು ಆರ್‌ಟಿಎಂ ಕಾರ್ಡ್ ಮೂಲಕ ಖರೀದಿ ಮಾಡೋ ಅಗತ್ಯ ಇದ್ರೂ ಆರ್‌ಸಿಬಿ ಬಳಸಿಲ್ಲ. ಇದು ಆರ್‌ಸಿಬಿ ಫ್ಯಾನ್ಸ್​ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಾರಿ ಕೆಜಿಎಫ್ ಶೋ ಅಂತ್ಯವಾಗಿದೆ. ಮೆಗಾ ಆಕ್ಷನ್​​ ಬಳಿಕ ಕೊಹ್ಲಿ, ಗ್ಲೆನ್​ ಮ್ಯಾಕ್ಸ್​​ವೆಲ್​​, ಫಾಫ್​ ಶೋ ಅಂತ್ಯಗೊಂಡಿದ್ದು, ಇದು ಬಹಳ ಬೇಸರದ ವಿಚಾರವಾಗಿದೆ.
ಕೆಜಿಎಫ್ ಶೋ ಅಂತ್ಯ
ಕಳೆದ 17 ಸೀಸನ್​​ಗಳಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಎಷ್ಟೋ ಮಂದಿ ಸ್ಟಾರ್​ ಆಟಗಾರರು ಬಂದು ಹೋಗಿದ್ದಾರೆ. ಅದರಲ್ಲೂ ಆರ್​​ಸಿಬಿಗೆ ಬಂದ ವಿದೇಶಿಗರು ಸಾಕಷ್ಟು ಸದ್ದು ಮಾಡುತ್ತಾರೆ. ಕಳೆದ ಮೂರು ಸೀಸನ್​​ನಲ್ಲೂ ಭಾರೀ ಸದ್ದು ಮಾಡಿದ್ದವರು ಮತ್ಯಾರು ಅಲ್ಲ ಫಾಫ್​ ಮತ್ತು ಮ್ಯಾಕ್ಸಿ. ಕೊಹ್ಲಿಗೆ ಈ ಇಬ್ಬರು ಸಾಥ್​ ನೀಡುತ್ತಿದ್ದರು. ಹಾಗಾಗಿ ಇದನ್ನು ಕೆಜಿಎಫ್ ಶೋ ಎಂದು ಕರೆಯಲಾಗುತ್ತಿತ್ತು.
/newsfirstlive-kannada/media/post_attachments/wp-content/uploads/2024/05/Kohli_Maxi_faf1.jpg)
ಫಾಫ್​ ಕೈ ಬಿಡಲು ಕಾರಣ
ಫಾಫ್​ ಡುಪ್ಲೆಸಿಸ್​ಗೆ ಈಗಾಗಲೇ 40 ವರ್ಷ ಆಗಿದೆ. ಇನ್ನೂ ಮೂರು ವರ್ಷಗಳ ಕಾಲ ಫಾಫ್​​ ಐಪಿಎಲ್​ ಆಡುವುದು ಕಷ್ಟ. ಹಾಗಾಗಿ ಆರ್​ಸಿ ರಿಲೀಸ್​ ಮಾಡಲಾಗಿದೆ ಎಂದು ತಂಡದ ಮುಖ್ಯ ಕೋಚ್​​ ತಿಳಿಸಿದ್ರು. ಮತ್ತೊಂದು ಕಾರಣ ಎಂದರೆ ಆರ್​ಸಿಬಿ ತಂಡಕ್ಕೆ ಫಾಫ್​ ಕೊಡುಗೆ ಹೇಳಿಕೊಳ್ಳುವಷ್ಟು ಇಲ್ಲ. ಜತೆಗೆ ಮಹತ್ವದ ಪಂದ್ಯಗಳಲ್ಲೇ ಆರ್​ಸಿಬಿ ತಂಡದ ಪರ ಸ್ಟ್ರಾಂಗ್​ ಆಗಿ ನಿಂತು ಆಡಿಲ್ಲ ಎಂಬ ಆರೋಪ ಕೂಡ ಇದೆ. ಇವರು ಕೊಹ್ಲಿಯಂತೆ ಅಗ್ರೆಸ್ಸಿವ್​ ಅಲ್ಲ ಅನ್ನೋದು ಕೂಡ ಪ್ರಮುಖ ಕಾರಣ.
ಮ್ಯಾಕ್ಸಿ ಗೇಟ್​ಪಾಸ್​ಗೆ ರೀಸನ್​ ಏನು?
2021ರಿಂದ 2023ರವರೆಗೆ ಆರ್​ಸಿಬಿ ಪರ ಮ್ಯಾಕ್ಸಿ ಅದ್ಭುತ ಆಲ್​ರೌಂಡರ್ ಆಟವನ್ನಾಡಿದ್ದರು. 2021ರಲ್ಲಿ ಮ್ಯಾಕ್ಸ್​​ವೆಲ್ 513, 2022ರಲ್ಲಿ 301, 2023ರಕ್ಕು 400 ರನ್​​ ಬಾರಿಸಿದ್ದರು. 2024ರಲ್ಲಿ ಕೇವಲ 52 ರನ್​​ ಮಾತ್ರ ಬಾರಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲೂ ಮ್ಯಾಕ್ಸ್​ವೆಲ್ ಕೆಟ್ಟ ಪ್ರದರ್ಶನ ನೀಡಿ ಆರ್​ಸಿಬಿ ಮ್ಯಾನೇಜ್ಮೆಂಟ್​​ನ ಕೆಂಗಣ್ಣಿಗೆ ಗುರಿಯಾಗಿದ್ರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us