Advertisment

ಹೊಸ ಜೆರ್ಸಿಯಲ್ಲಿ RCB ಪ್ಲೇಯರ್ಸ್ ಮಿಂಚಿಂಗ್​.. ಗ್ರೀನ್ ಜೆರ್ಸಿ ಧರಿಸಿ ಅಖಾಡಕ್ಕೆ ಇಳಿಯೋದು ಯಾವಾಗ?

author-image
Bheemappa
Updated On
ಹೊಸ ಜೆರ್ಸಿಯಲ್ಲಿ RCB ಪ್ಲೇಯರ್ಸ್ ಮಿಂಚಿಂಗ್​.. ಗ್ರೀನ್ ಜೆರ್ಸಿ ಧರಿಸಿ ಅಖಾಡಕ್ಕೆ ಇಳಿಯೋದು ಯಾವಾಗ?
Advertisment
  • ಪ್ರತಿ ಬಾರಿಯು ಪ್ಲೇಯರ್ಸ್ ಹಸಿರು ಜೆರ್ಸಿಯನ್ನ ಧರಿಸುವುದು ಯಾಕೆ?
  • ಸಂಪ್ರದಾಯವನ್ನು ಮುಂದುವರೆಸುತ್ತಿರುವ ರಾಯಲ್ ಚಾಲೆಂಜರ್ಸ್
  • ಹಸಿರು ಜೆರ್ಸಿಯಲ್ಲಿ ಕೊಹ್ಲಿ ಸೇರಿ ಆರ್​ಸಿಬಿ ಪ್ಲೇಯರ್ಸ್​ ಕಲರ್​ಫುಲ್

ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್​ ಕೆಕೆಆರ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಈ ವರ್ಷದ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿರುವ ಆರ್​ಸಿಬಿ ಹೊಸ ನಾಯಕನ ನೇತೃತ್ವದಲ್ಲಿ ಟ್ರೋಫಿ ಗೆಲ್ಲುವ ಬಹು ನಿರೀಕ್ಷೆ ಹೊಂದಿದೆ. ಇದರ ಜೊತೆಗೆ ಪರಿಸರಕ್ಕೂ ಹೆಚ್ಚು ಮಹತ್ವ ಕೊಡುವ ರಾಯಲ್ ಚಾಲೆಂಜರ್ಸ್, ಈ ಸಲನೂ ಪಂದ್ಯವೊಂದರಲ್ಲಿ ಗ್ರೀನ್ ಜೆರ್ಸಿ ತೊಡಲು ಮುಂದಾಗಿದೆ.

Advertisment

ಪ್ರತಿ ಬಾರಿಯಂತೆ ಈ ಬಾರಿಯೂ ಗೋ ಗ್ರೀನ್​ ಡೇ ಸಂಪ್ರದಾಯವನ್ನು ಬೆಂಗಳೂರು ಟೀಮ್ ಮುಂದುವರಿಸಲಿದೆ. ಮುಂಬರುವ ಯಾವುದಾದ್ರೂ ಪಂದ್ಯದಲ್ಲಿ ಆರ್​ಸಿಬಿಯ ಎಲ್ಲ ಆಟಗಾರರು ಹಸಿರು ಜೆರ್ಸಿ ಧರಿಸಿ ಅಖಾಡಕ್ಕೆ ಇಳಿಯಲಿದ್ದಾರೆ. ಆದರೆ ಯಾವ ತಂಡದ ಜೊತೆ ಆಡುವಾಗ ಹಸಿರು ಜೆರ್ಸಿ ಧರಿಸುತ್ತಾರೆ ಎನ್ನುವುದು ಇನ್ನು ಅಧಿಕೃತವಾಗಿಲ್ಲ. ಈ ಬಗ್ಗೆ ಫ್ರಾಂಚೈಸಿ ಸದ್ಯದಲ್ಲೇ ಮಾಹಿತಿ ನೀಡಬಹುದು ಎನ್ನಲಾಗಿದೆ.

ಇದನ್ನೂ ಓದಿ: ಲಕ್ನೋ ವಿರುದ್ಧ ಕೆ.ಎಲ್ ರಾಹುಲ್​ಗೆ ಸೇಡಿನ ಪ್ರತೀಕಾರ.. ರಿಷಭ್​ ಪಂತ್​ಗೆ ಇದು ಅಗ್ನಿಪರೀಕ್ಷೆ!

publive-image

ಸದ್ಯಕ್ಕಂತೂ ಕಾರ್ಯಕ್ರಮ ಒಂದರಲ್ಲಿ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟಿದಾರ್, ಆಲ್​ರೌಂಡರ್ ಕೃನಾಲ್ ಪಾಂಡ್ಯ, ಓಪನರ್ ಫಿಲಿಫ್ ಸಾಲ್ಟ್​, ದೇವದತ್ತ ಪಡಿಕ್ಕಲ್ ಸೇರಿದಂತೆ ಆರ್​ಸಿಬಿ ಪ್ಲೇಯರ್ಸ್​ ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಲ್ಲಿನ ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಬರುತ್ತಿದ್ದಂತೆ ಹೋ.. ಎಂದು ಕೂಗಾಡಿದ್ದಾರೆ.

Advertisment

2011ರಿಂದಲೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿಯು ಐಪಿಎಲ್​ ಟೂರ್ನಿಯಲ್ಲಿ ಆಡುವ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸಿ ಅಖಾಡಕ್ಕೆ ಇಳಿಯಲಿದೆ. ಲಾಯಲ್​ ಫ್ಯಾನ್ಸ್ ಹೊಂದಿರುವ ಆರ್​ಸಿಬಿ, ಅಭಿಮಾನಿಗಳಲ್ಲಿ ಸ್ವಚ್ಛ ಹಾಗೂ ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಜೆರ್ಸಿಯನ್ನು ಧರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment