ಕಪ್​​ ಗೆಲ್ಲಲು ಆರ್​​ಸಿಬಿಯಿಂದ ಮಾಸ್ಟರ್​ ಪ್ಲ್ಯಾನ್​​; ಕ್ಯಾಪ್ಟನ್ಸಿ ಜತೆಗೆ ಕೊಹ್ಲಿ ಹೊಸ ಜವಾಬ್ದಾರಿ

author-image
Ganesh Nachikethu
Updated On
RCB ಉಳಿಸಿಕೊಳ್ಳೋ ಇನ್ನೂ ಮೂವರು ಆಟಗಾರರು ಇವ್ರೇ! ಲಿಸ್ಟ್​ನಲ್ಲಿ ಅಚ್ಚರಿ ಹೆಸ್ರುಗಳು
Advertisment
  • ಪಕ್ಕಾ ಲೆಕ್ಕ ಹಾಕಿ ಆಟಗಾರರನ್ನ ಖರೀದಿಸಿರುವ ಆರ್​ಸಿಬಿ
  • 17 ವರ್ಷದ ವನವಾಸಕ್ಕೆ ಗುಡ್​ಬೈ ಹೇಳುತ್ತಾ ಬೆಂಗಳೂರು?
  • ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಎಷ್ಟು ಪಂದ್ಯಗಳನ್ನು ಆಡಲಿದೆ?

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಆರಂಭಕ್ಕೆ ಕೇವಲ 2 ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಪ್ ಗೆಲ್ಲೋಕೆ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಆಟಗಾರರ ಪ್ರಿಪರೇಟ್ರಿ ಕ್ಯಾಂಪ್ ಸ್ಟಾರ್ಟ್​ ಮಾಡಿರೋ ಆರ್​ಸಿಬಿ, ತೆರೆ ಹಿಂದೆ ಸ್ಟ್ರಾಟಜಿ ಮಾಡೋದರಲ್ಲಿ ಬ್ಯುಸಿ ಆಗಿದೆ.

ಹೊಸ ಅಧ್ಯಾಯಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ ಸೀಸನ್ 18ಕ್ಕೆ ಕಾಲಿಡಲಿದೆ. ಮೆಗಾ ಹರಾಜಿನಲ್ಲಿ ಪಕ್ಕಾ ಲೆಕ್ಕ ಹಾಕಿ ಆಟಗಾರರನ್ನ ಖರೀದಿಸಿರುವ ಆರ್​ಸಿಬಿ, ಈ ಸಲ ಕಪ್​​ ಗೆಲ್ಲಲು ಶಪಥ ಮಾಡಿದಂತಿದೆ. ಅದಕ್ಕಾಗಿ ತೆರೆ ಹಿಂದೆ ಆರ್​ಸಿಬಿಯ ಥಿಂಕ್ ಟ್ಯಾಂಕರ್ಸ್​, ಭರ್ಜರಿ ಸ್ಟ್ರಾಟಜಿ ಮಾಡ್ತಿದ್ದಾರೆ. 17 ವರ್ಷಗಳ ವನವಾಸಕ್ಕೆ ಗುಡ್​ಬೈ ಹೇಳಲು ಆರ್​ಸಿಬಿ, ಮುಂದಾಗಿದೆ.

publive-image

'ಕಿಂಗ್' ಕೊಹ್ಲಿಗೆ ಹೊಸ್ ರೋಲ್..?

ಹೊಸ ಅಧ್ಯಾಯ ಆರಂಭಿಸ್ತಿರುವ ಆರ್​ಸಿಬಿ, ಕಿಂಗ್​ ಕೊಹ್ಲಿಗೆ ಹೊಸ ಜವಾಬ್ದಾರಿ ನೀಡಲು ಮುಂದಾಗಿದೆ. ಇಷ್ಟು ದಿನ ಕೊಹ್ಲಿ, ಬ್ಯಾಟಿಂಗ್​ನಲ್ಲಿ ಌಂಕರ್ ರೋಲ್ ಪ್ಲೇ ಮಾಡುತ್ತಿದ್ದರು. ಆದರೆ ಮುಂಬರುವ ಐಪಿಎಲ್​ನಲ್ಲಿ ಕೊಹ್ಲಿ, ವಿರಾಟ ರೂಪ ತೋರಿಸಲಿದ್ದಾರೆ. ಅಗ್ರೆಸಿವ್ ಕೊಹ್ಲಿ ಮುಂದಿನ ದಿನಗಳಲ್ಲಿ ಅಗ್ರೆಸಿವ್ ಬ್ಯಾಟಿಂಗ್ ಮಾಡಲಿದ್ದಾರೆ.

'ಲೋಕಲ್'​​​ ಪ್ಲೇಯರ್​ಗಳಿಗೆ ಹೆಚ್ಚು ಪ್ರೋತ್ಸಾಹ..!

ಮುಂಬರುವ ಐಪಿಎಲ್​​ನಲ್ಲಿ ಆರ್​ಸಿಬಿಯ ಟಾರ್ಗೆಟ್, ಮಿಷನ್ ಚಿನ್ನಸ್ವಾಮಿ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡ, ಒಟ್ಟು 7 ಪಂದ್ಯಗಳನ್ನ ಆಡಲಿದೆ. ಆ 7 ಪಂದ್ಯಗಳನ್ನ ಗೆಲ್ಲೇದೇ ಆರ್​ಸಿಬಿ ಮುಂದಿರುವ ಗುರಿ. ಯಾಕಂದ್ರೆ ಹೋಂ ಗ್ರೌಂಡ್​​ನಲ್ಲಿ ಹೆಚ್ಚು ಸಕ್ಸಸ್​​ ಕಂಡ್ರೆ, ನಾಕೌಟ್​​ ಸ್ಟೇಜ್​ಗೆ ತಲುಪೋದು ಕಷ್ಟವೇನಲ್ಲ. ಹಾಗಾಗಿ ಆರ್​ಸಿಬಿ ಚಿನ್ನಸ್ವಾಮಿಯಲ್ಲಿ ಹೆಚ್ಚು ಹೆಚ್ಚು ಪಂದ್ಯಗಳನ್ನ ಗೆಲ್ಲಲು ಪ್ಲಾನ್ ಮಾಡುತ್ತಿದೆ. ಅದಕ್ಕಾಗಿ ಲೋಕಲ್ ಪ್ಲೇಯರ್​ಗಳ ಅಸ್ತ್ರ ಬಳಸಲು ಮುಂದಾಗಲಿದೆ.

ಇದನ್ನೂ ಓದಿ:ಆರ್​ಸಿಬಿಯಲ್ಲಿ ಮಹತ್ವದ ಬದಲಾವಣೆ.. ಎಬಿಡಿ ಶಿಷ್ಯ BABY AB ತಂಡಕ್ಕೆ ಎಂಟ್ರಿ..!

publive-image

ಐಪಿಎಲ್ ಗೆಲ್ಲೋದೇ ನಮ್ಮ 'ಗುರಿ'..!

ಐಪಿಎಲ್ ಸೀಸನ್ 18ರಲ್ಲಿ, ವಸವಾಸಕ್ಕೆ ಫುಲ್​ಸ್ಟಾಪ್ ಇಡೋದೆ ಮ್ಯಾನೇಜ್ಮೆಂಟ್​ನ ಪ್ರಮುಖ ಗುರಿಯಾಗಿದೆ. ಈ ಸಲ ಕಪ್ ನಮ್ದೇ.. ಈ ಸಲ ಕಪ್ ನಮ್ದೇ ಅಂತ ಅಭಿಮಾನಿಗಳು, ಪ್ರತಿ ಸೀಸನ್​ನಲ್ಲೂ ತಂಡಕ್ಕೆ ಅನ್​ಕಂಡೀಷನಲ್ ಸಪೋರ್ಟ್ ಮಾಡ್ತಿದ್ರು. ಆದ್ರೆ ಮುಂಬರುವ ಸೀಸನ್​​ನಲ್ಲಿ ಅಭಿಮಾನಿಗಳ ಋಣ ತೀರಿಸಲು, ಆರ್​ಸಿಬಿ ಶತ ಪ್ರಯತ್ನ ನಡೆಸಲಿದೆ. ಕಪ್ ಗೆಲ್ಲೋಕೆ ನೂರಕ್ಕೆ ನೂರರಷ್ಟು ಎಫರ್ಟ್​ ಹಾಕಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment