ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್
ಆರ್‌ಸಿಬಿ ತಂಡದಿಂದ ಮೆಗಾ ಹರಾಜಿಗೆ ಭರ್ಜರಿ ಪ್ಲಾನ್!
ಈ ಮೂವರು ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟ ಆರ್‌ಸಿಬಿ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಬಿಸಿಸಿಐಗೆ ಎಲ್ಲಾ ತಂಡಗಳು ರೀಟೇನ್ಷನ್ ಲಿಸ್ಟ್ ಸಲ್ಲಿಸಲು ಅಕ್ಟೋಬರ್ 31ನೇ ತಾರೀಕು ಕೊನೆಯ ದಿನವಾಗಿತ್ತು. ಐಪಿಎಲ್ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ರಿಲೀಸ್ ಮಾಡಿವೆ. ಆರ್‌ಸಿಬಿ ಕೂಡ ಅಳೆದು ತೂಗಿ ಸ್ಟಾರ್ ಆಟಗಾರರಿಗೆ ಮಣೆ ಹಾಕಿದೆ. ಕಳೆದ ಐಪಿಎಲ್ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನೇ ಆರ್‌ಸಿಬಿ ರೀಟೈನ್ ಮಾಡಿಕೊಂಡಿದೆ. ಹೀಗಾಗಿ ಇವರು 2025ರಲ್ಲಿ ಮತ್ತೆ ಆರ್‌ಸಿಬಿ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 21 ಕೋಟಿ ಕೊಟ್ಟು ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಂಡಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಟಿದಾರ್ ಅವರಿಗೆ 11 ಕೋಟಿ ಕೊಟ್ಟ ರೀಟೈನ್ ಮಾಡಿಕೊಂಡಿದೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್‌ಗೆ ಗೇಟ್ ಪಾಸ್ ನೀಡಿ, ಯಶ್ ದಯಾಳ್ ಅವರಿಗೆ ಮಣೆ ಹಾಕಿದೆ.
ಮೂವರು ಆಟಗಾರರ ಮೇಲೆ ಆರ್‌ಸಿಬಿ ಕಣ್ಣು
ಆರ್‌ಸಿಬಿ ಐಪಿಎಲ್ ಆಕ್ಷನ್ ಮೇಲೆ ಕಣ್ಣಿಟ್ಟಿದೆ. ಪ್ರಮುಖವಾಗಿ ಆರ್‌ಸಿಬಿ ತಂಡಕ್ಕೆ ಈ ಮೂವರು ಆಟಗಾರರ ಅಗತ್ಯ ಇದೆ. ಈ ಬಾರಿ ಆರ್‌ಸಿಬಿ ತಂಡದಿಂದ ಕ್ಯಾಪ್ಟನ್ ಫಾಫ್ ಅವರಿಗೆ ಕೊಕ್ ನೀಡಲಾಗಿದೆ. ಹೀಗಾಗಿ ಹೊಸ ನಾಯಕನ ಹುಡುಕಾಟದಲ್ಲಿ ಆರ್‌ಸಿಬಿ ಇದೆ. ಫಾಫ್ ಡುಪ್ಲೆಸಿಸ್ ಸ್ಥಾನ ತುಂಬಬಲ್ಲ ಆಟಗಾರನಿಗೆ ಮಣೆ ಹಾಕಲಿದೆ. ಅದರಲ್ಲೂ ಕ್ಯಾಪ್ಟನ್ಸಿ ಮತ್ತು ವಿಕೆಟ್ ಕೀಪಿಂಗ್ ಮಾಡಬಲ್ಲ ಓಪನರ್ಗಾಗಿ ಆರ್‌ಸಿಬಿ ಎದುರು ನೋಡುತ್ತಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ರಿಲೀಸ್ ಆಗಿರುವ ಕೆಎಲ್ ರಾಹುಲ್ ಅವರನ್ನು ಖರೀದಿ ಮಾಡಬಹುದು.
ಕಳೆದ ಸೀಸನ್ನಲ್ಲಿ ಯಶ್ ದಯಾಳ್ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿದ್ರು. ಹೀಗಾಗಿ ಇವರನ್ನು ಆರ್‌ಸಿಬಿ ಉಳಿಸಿಕೊಂಡಿದೆ. ಯಶ್ ದಯಾಳ್ ಅವರಿಗೆ ಸಾಥ್ ನೀಡಬಲ್ಲ ಮತ್ತೊಬ್ಬ ಸ್ಟಾರ್ ಬೌಲರ್ ಆರ್‌ಸಿಬಿ ಟೀಮ್ಗೆ ಬೇಕಾಗಿದ್ದಾರೆ. ಆರ್‌ಸಿಬಿ ಸನ್ರೈಸರ್ಸ್ ಹೈದರಾಬಾದ್ ಕೈ ಬಿಟ್ಟಿರೋ ಭುವನೇಶ್ವರ್ ಕುಮಾರ್ ಅವರಿಗೆ ರೆಡ್ ಕಾರ್ಪೆಟ್ ಹಾಕಬಹುದು. ಇವರು ಡೆತ್ ಓವರ್‌ಗಳಲ್ಲಿ ಒಳ್ಳೆಯ ಬೌಲಿಂಗ್ ಮಾಡಬಲ್ಲರು.
ಬೆಂಗಳೂರು ತಂಡಕ್ಕೆ ಹಲವು ವರ್ಷಗಳಿಂದ ಕಾಡುತ್ತಿರೋ ದೊಡ್ಡ ಸಮಸ್ಯೆ ಎಂದರೆ ಸ್ಪಿನ್ ಬೌಲರ್ ಕೊರತೆ. ಯಜುವೇಂದ್ರ ಚಹಾಲ್ ಅವರನ್ನು ಕೈ ಬಿಟ್ಟು ತಪ್ಪು ಮಾಡಿದ್ದ ಆರ್ಸಿಬಿಗೆ ಬಳಿಕ ಒಳ್ಳೆಯ ಸ್ಪಿನ್ ಬೌಲರ್ ಸಿಗಲೇ ಇಲ್ಲ. ಚಹಾಲ್ ಐಪಿಎಲ್ನಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಸೈ ಎನಿಸಿಕೊಂಡಿದ್ದಾರೆ. ತಂಡಕ್ಕೆ ಅಗತ್ಯವಿದ್ದಾಗ ವಿಕೆಟ್ ತೆಗೆಯುವ ಸಾಮರ್ಥ್ಯ ಇದೆ. ಇವರ ಮೇಲೂ ಆರ್‌ಸಿಬಿ ಹದ್ದಿನ ಕಣ್ಣಿಟ್ಟಿದೆ.
ಇದನ್ನೂ ಓದಿ: ಮೆಗಾ ಹರಾಜಿನಲ್ಲಿ ಪವರ್ ಹಿಟ್ಟರ್ ಖರೀದಿಗೆ ಬೆಂಗಳೂರು ಪ್ಲಾನ್; ಆರ್ಸಿಬಿಗೆ ಈತ ಬಂದ್ರೆ ರಣರೋಚಕ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ