ಫ್ಯಾನ್ಸ್​ಗೆ ಗುಡ್​​ನ್ಯೂಸ್​​​ ಕೊಟ್ಟ ಆರ್​​ಸಿಬಿ.. ಈ ಆಟಗಾರನನ್ನು ಉಳಿಸಿಕೊಳ್ಳಲು ಮೆಗಾ ಪ್ಲಾನ್​​

author-image
Ganesh Nachikethu
Updated On
ಆರ್​​​ಸಿಬಿಯಿಂದ IPL ವಿನ್ನಿಂಗ್​ ಕ್ಯಾಪ್ಟನ್​ಗೆ ಬಿಗ್​ ಆಫರ್​​; ಬೆಂಗಳೂರಿಗೆ ಬಂತು ಹಾರ್ಸ್​ ಪವರ್​​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರ್ಜರಿ ತಯಾರಿ
  • ಐಪಿಎಲ್​ 2025ರ ಮೆಗಾ ಆಕ್ಷನ್​​ನಲ್ಲಿ ಸ್ಟಾರ್​ ಆಟಗಾರರ ಖರೀದಿಗೆ ಪ್ಲಾನ್..​!
  • ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​​​

2025ರ ಐಪಿಎಲ್​​ಗೆ ಮೆಗಾ ಆಕ್ಷನ್​ ನಡೆಯಲಿದೆ. ವರ್ಷದ ಕೊನೆಗೆ ನಡೆಯಲಿರೋ ಈ ಮೆಗಾ ಆಕ್ಷನ್​​ನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಬೇಕು ಅನ್ನೋ ಯೋಚನೆಯಲ್ಲಿ ಎಲ್ಲಾ ತಂಡಗಳು ಇವೆ. ಅದಕ್ಕೂ ಮುನ್ನವೇ ತಮಗೆ ಬೇಕಾದ ಆಟಗಾರರನ್ನು ರೀಟೈನ್​ ಮಾಡಿಕೊಳ್ಳಬೇಕಿದೆ. ಈ ಮಧ್ಯೆ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ಗೆ ಆರ್​​ಸಿಬಿ ರಿಲೀಸ್​ ಮಾಡಲಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಆರ್​​ಸಿಬಿ ಈಗಾಗಲೇ ರೀಟೈನ್​ ಪಟ್ಟಿ ರೆಡಿ ಮಾಡಿಕೊಂಡಿದೆ. ಪಟ್ಟಿಯಲ್ಲಿರೋ ಮೊದಲ ಹೆಸರು ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ. ಕೊಹ್ಲಿ ನಂತರ ಸ್ಟಾರ್​ ವೇಗಿ ಮೊಹಮ್ಮದ್​ ಸಿರಾಜ್​​ ಕೂಡ ರೀಟೈನ್​ ಲಿಸ್ಟ್​ನಲ್ಲೇ ಇದ್ದಾರೆ. ಇವರೊಂದಿಗೆ ಯಾರಾದ್ರೂ ಒಬ್ಬ ವಿದೇಶಿ ಆಟಗಾರರನ್ನು ರೀಟೈನ್​ ಮಾಡಿಕೊಳ್ಳೋ ಸಾಧ್ಯತೆ ಇದೆ. ಆದರೆ, ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಹೆಸರೇ ರೀಟೈನ್​ ಲಿಸ್ಟ್​ನಲ್ಲಿ ಇಲ್ಲ. ಹಾಗಾಗಿ ಫಾಫ್​​ ಅವರನ್ನು ರಿಲೀಸ್​ ಮಾಡೋದು ಬಹುತೇಕ ಪಕ್ಕಾ ಆಗಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​. ಇವರು ಇದೇ ತಿಂಗಳು 13ನೇ ತಾರೀಕು 40 ವರ್ಷಕ್ಕೆ ಕಾಲಿಟ್ಟರು. ಹಾಗಾಗಿ ಫಾಫ್​​ಗೆ ಕೊಕ್​ ಕೊಟ್ಟು, ರಾಹುಲ್​ ಅವರನ್ನು ಕ್ಯಾಪ್ಟನ್​ ಮಾಡಲು ಆರ್​​ಸಿಬಿ ಪ್ಲಾನ್​ ಮಾಡಿಕೊಂಡಿದೆ.

ಆಕ್ಷನ್​ನಲ್ಲಿ ಕಡಿಮೆ ಹಣಕ್ಕೆ ಖರೀದಿ ಮಾಡೋ ಪ್ಲಾನ್​​

ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಅವರನ್ನು ರಿಲೀಸ್​​ ಮಾಡಿ ಮತ್ತೆ ಮೆಗಾ ಆಕ್ಷನ್​ನಲ್ಲಿ ಖರೀದಿಸೋ ಪ್ಲಾನ್​ ಆರ್​​ಸಿಬಿಯದ್ದು. ಅತ್ಯಂತ ಕಡಿಮೆ ದುಡ್ಡಲ್ಲಿ ಫಾಫ್​​ ಸಿಗಬಹುದೇ ಎಂದು ಅಳೆದು ತೂಗಿ ಬಿಡ್​ ಮಾಡಲಿದೆ ಆರ್​​ಸಿಬಿ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment